
ಇವತ್ತಿಗೂ ಭಾರತದ ಅದೇಷ್ಟೋ ಜನರ ಕನಸು ಬಿಎಂಡಬ್ಲು ಕಾರ್. ಮಧ್ಯಮವರ್ಗದಿಂದ ಆರಂಭಿಸಿ ಸ್ಟಾರ್ ಗಳವರೆಗೆ ಎಲ್ಲರನ್ನು ಸೆಳೆದಿದೆ ಬಿಎಂಡಬ್ಲು ಕಾರ್. ಇದೀಗ ಬಿಎಂಡಬ್ಲುನಿಂದ ಕಾರ ಜೊತೆ ಬೈಕ್ ಕೂಡ ಮಾರುಕಟ್ಟೆಗೆ ಎಂಟ್ರಿಕೊಟ್ಟಿದ್ದು, ಹೇಗಿದೆ ಬೈಕ್ ಇಲ್ಲಿದೆ ಡಿಟೇಲ್ಸ್.
ಬಿಎಂಡಬ್ಲ್ಯು ಮೋಟಾರೊಡ್ ಇಂಡಿಯಾ ಕಂಪೆನಿ 2019ರ S 1000 RR ಬೈಕ್ ನನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೂರು ಮಾದರಿಯಲ್ಲಿ ಬಿಡುಗಡೆಗೊಂಡಿರುವ ಈ ನೂತನ ಬೈಕ್ ಸ್ಟ್ಯಾಂಡರ್ಡ್, ಪ್ರೊ, ಪ್ರೊ ಎಂ ಸ್ಪೋರ್ಟ್ಸ್ ಮಾದರಿಯಲ್ಲಿ ಲಭ್ಯವಿದ್ದು, ಈ ವಿನೂತನ ಬೈಕ್ನಲ್ಲಿ ಟ್ವಿನ್ ಹೆಡ್ ಲ್ಯಾಂಪ್ ನನ್ನು ಅಳವಡಿಸಲಾಗಿದೆ. ಪ್ರೊ ಮಾದರಿಯ ಬೈಕ್ ಬೆಲೆ 20.95 ಲಕ್ಷ ರೂ ಆಗಿದ್ದರೆ, ಟಾಪ್ ಮಾದರಿಯ ಪ್ರೊ ಎಂ ಸ್ಪೋರ್ಟ್ ಮಾದರಿಯ ಬೈಕ್ 22.95 ಲಕ್ಷ ರೂಪಾಯಿ ಆಗಿದೆ.
ಇನ್ನೂ ಸ್ಟ್ಯಾಂಡರ್ಡ್ ಮಾದರಿಯ ಬೈಕ್ ಬೆಲೆ 18.50 ಲಕ್ಷ ರೂ. ಆಗಿದ್ದು, ಈ ಬೈಕ್ 999cc ಇನ್-ಲೈನ್ 4 ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. S 1000 RR ಬೈಕ್ 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವುದರ ಜೊತೆಗೆ ಸ್ಲಿಪರ್ ಕ್ಲಚ್ ಹಾಗೂ ಬೈ ಡೈರೆಕ್ಷನಲ್ ಕ್ವಿಕ್ ಶಿಫ್ಟರ್ ನನ್ನು ಸಹ ನೀಡಲಾಗಿದೆ.
ಇನ್ನು ವ್ಹೀಲ್ ಕಂಟ್ರೋಲ್, ಲಾಂಚ್ ಕಂಟ್ರೋಲ್, ಸ್ಲೈಡ್ ಕಂಟ್ರೋಲ್ ಹಾಗೂ ರೇಸ್ ಪ್ರೊ ರೈಡಿಂಗ್ ಮೋಡ್ನಂತಹ ಹೆಚ್ಚುವರಿ ಫೀಚರ್ಗಳನ್ನು ಈ ಬೈಕ್ ನಲ್ಲಿ ಅಳವಡಿಸಲಾಗಿದೆ.
ಒಟ್ಟಾರೆ ಕ್ವಾಸ್ಟ್ಲಿ ಬೈಕ್ಗಳ ಸಾಲಿಗೆ ಇದೀಗ ಬಿಎಂಡ್ಬ್ಲು ಹೊಸ ಸೇರ್ಪಡೆಯಾಗಿದ್ದು, ಕಾರು ಕೊಳ್ಳಲಾಗದೇ ಬೇಸತ್ತವರು ಈ ಬೈಕ್ನ್ನು ಸಾಮಾನ್ಯ ಕಾರಿನ ದರ ಕೊಟ್ಟು ಅಂದ್ರೆ 18 ಲಕ್ಷ ಕೊಟ್ಟು ಖರೀದಿಸಬಹುದಾಗಿದೆ.
Comments are closed.