ರಾಷ್ಟ್ರೀಯ

ಕೇದಾರನಾಥ, ಬದರಿನಾಥ ದೇಗುಲಗಳ ಸ್ಥಳ ಬದಲಾವಣೆ?

Pinterest LinkedIn Tumblr


ನವದೆಹಲಿ: ಹೆಚ್ಚಿನ ಯಾತ್ರಿಕರ ಆಗಮನದಿಂದಾಗಿ ಕೇದಾರನಾಥ ಮತ್ತು ಬದ್ರಿನಾಥ್ ದೇವಾಲಯಗಳ ಸ್ಥಾನದಲ್ಲಿ ಬದಲಾವಣೆಯಾಗುತ್ತಿದೆ ಎನ್ನುವ ವದಂತಿಗಳು ಸುಳ್ಳು ಎಂದು ವಾಡಿಯಾ ಇನ್‌ಸ್ಟಿಟ್ಯೂಟ್‌ ಆಫ್ ಹಿಮಾಲಯನ್ ಸಂಸ್ಥೆಯ ಭೂವಿಜ್ಞಾನ ವಿಭಾಗದ ವಿಜ್ಞಾನಿ ಡಾ.ಸುಶೀಲ್ ಕುಮಾರ್ ಶನಿವಾರ ಹೇಳಿದ್ದಾರೆ.

ಹಾಗೇನಾದರೂ ಸ್ಥಳ ಬದಲಾವಣೆಯಾಗುತ್ತದೆ ಎನ್ನುವುದೇ ಆದರೆ ಪೂರ್ವ ಗೋಳಾರ್ಧದಲ್ಲಿ ಸಮಭಾಜಕವನ್ನು ಸುತ್ತುವರೆದಿರುವ ಪ್ರಮುಖ ಇಂಡಿಯನ್‌ ಪ್ಲೇಟ್‌ನ ಟೆಕ್ಟೋನಿಕ್ ಚಲನೆಯಿಂದಾಗಿ ಆಗಿರಬಹುದು. ಇದು ಪ್ರತಿ ವರ್ಷಕ್ಕೆ 44 ಮಿ.ಮೀ.ನಷ್ಟು ಚಲಿಸುತ್ತದೆ. ಇದೇನಾದರೂ ದೇವಾಲಯದ ಕೆಳಗಿರುವ ದೋಷದಿಂದಾಗಿ ಸಂಭವನೀಯ ಬದಲಾವಣೆಯಾಗಬಹುದು ಎಂದು ಹೇಳಿದ್ದಾರೆ.

2013 ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ ಪ್ರವಾಹದೊಂದಿಗೆ ಹೋಲಿಸಿದರೆ, ಮುಖ್ಯವಾಗಿ ಹಿಮಪಾತದ ಜತೆಗೆ ಮೋಡದ ಸ್ಫೋಟಗಳ ನಂತರ ಭಾರಿ ಮಳೆಯಿಂದಾಗಿ ಕೇದಾರನಾಥ ದೇವಾಲಯದ ಮೇಲಿರುವ ಸರೋವರದಲ್ಲಿ ನೀರಿನ ಮಟ್ಟ ಏರಲು ಕಾರಣವಾಯಿತು. ಆದ್ದರಿಂದ, ಇದು ಸಂಪೂರ್ಣವಾಗಿ ವಿಭಿನ್ನ ವಿದ್ಯಮಾನವಾಗಿತ್ತು ಎಂದು ತಿಳಿಸಿದರು.

ಬಳಿಕ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಅವರು, ಈ ಕುರಿತಂತೆ ಯಾರು ಭಯಪಡುವ ಅಗತ್ಯವಿಲ್ಲ. ವಿಜ್ಞಾನಿಗಳು ಪರಿಸ್ಥಿತಿಯನ್ನು ನಿರಂತರವಾಗಿ ನಿಭಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Comments are closed.