ಮನೋರಂಜನೆ

ಮಂಡ್ಯ ಶೈಲಿಯಲ್ಲಿ ಸಮಂತಾ- ಚರಣ್ ಡೈಲಾಗ್ಸ್..!!

Pinterest LinkedIn Tumblr


ಸೌತ್ ಸಿನಿದುನಿಯಾದ ಸೆನ್ಸೇಷನಲ್ ನಟಿ ಸಮಂತಾ ಕನ್ನಡಕ್ಕೆ ಬರೋ ಸುದ್ದಿ ಆಗಾಗ ಹರಿದಾಡ್ತಾ ಇತ್ತು. ಇದೀಗ ಸ್ಯಾಮ್ ಏಕ್ದಮ್ ಗಾಂಧಿನಗರದ ಗಲ್ಲಿಗಳಿಗೆ ಎಂಟ್ರಿ ಕೊಡೋ ಟೈಮ್ ಫಿಕ್ಸ್ ಆಗಿದೆ. ವಿಶೇಷ ಅಂದ್ರೆ ಅಕ್ಕಿನೇನಿ ಕುಟುಂಬದ ಸೊಸೆ ಜೊತೆ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜಾ ಕೂಡ ನಮ್ ಇಂಡಸ್ಟ್ರಿಗೆ ಹೆಜ್ಜೆ ಇಡ್ತಿದ್ದಾರೆ.

ರಂಗಸ್ಥಲಂ.. ಕಳೆದ ವರ್ಷ ಮಾರ್ಚ್​ನಲ್ಲಿ ತೆರೆಕಂಡ ತೆಲುಗಿನ ಈ ಸಿನಿಮಾ ಬಾಕ್ಸಾಫೀಸ್​ನಲ್ಲಿ ಬರೋಬ್ಬರಿ 210 ಕೋಟಿ ಪೈಸಾ ವಸೂಲ್ ಮೂಲಕ ದಾಖಲೆ ಬರೆದಿತ್ತು. ಇನ್ನು ಮೆಗಾಸ್ಟಾರ್ ಚಿರಂಜೀವಿ ತನಯ ರಾಮ್ ಚರಣ್ ತೇಜಾ ಸಿನಿಕರಿಯರ್​ಗೂ ಮೈಲಿಗಲ್ಲಾಗಿತ್ತು. ಜೊತೆಗೆ ಅಕ್ಕಿನೇನಿ ನಾಗಾರ್ಜುನ್ ಸೊಸೆ ಸಮಂತಾ ಪರ್ಫಾರ್ಮೆನ್ಸ್​ ಕೂಡ ಎಲ್ಲರನ್ನ ಹುಬ್ಬೇರಿಸಿತ್ತು.

ಇದೀಗ ಅದೇ ರಂಗಸ್ಥಲಂ ಸಿನಿಮಾ ಮೂಲಕ ನಮ್ಮ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಿದ್ದಾರೆ ಗ್ಲಾಮರ್ ಡಾಲ್ ಸಮಂತಾ ಹಾಗೂ ರಾಮ್ ಚರಣ್ ತೇಜಾ. ರಂಗಸ್ಥಳ ಹೆಸ್ರಲ್ಲಿ ಕನ್ನಡದಲ್ಲೂ ಬರ್ತಿದೆ ತೆಲುಗಿನ ರಂಗಸ್ಥಲಂ. ಜೆ ಮೂವೀಸ್ ಬ್ಯಾನರ್​ನಡಿ ಕನ್ನಡಕ್ಕೆ ಡಬ್ ಆಗಿರೋ ರಂಗಸ್ಥಳ, ಅದೇ ಬ್ಯಾನರ್​ನಡಿ ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಕೂಡ ಆಗ್ತಿದೆ.

ದರ್ಶನ್​ರ ಕಿಟ್ಟಿ ಸಿನಿಮಾದ ಹೆಸ್ರಿನಲ್ಲೇ ಸ್ಯಾಂಡಲ್​ವುಡ್ ರಂಗಸ್ಥಳ ಪ್ರವೇಶ ಮಾಡ್ತಿದ್ದಾರೆ ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ. ಎರಡು ದಿನದ ಹಿಂದೆ ರಿಲೀಸ್ ಆಗಿರೋ ಟೀಸರ್​ನಲ್ಲಿ ನಾಯಕನಟ ಕಿಟ್ಟಿ ಇಂಟ್ರಡ್ಯೂಸ್ ಆಗಿದ್ರು. ಇದೀಗ ರಾಮಲಕ್ಷ್ಮೀ ಪಾತ್ರದಲ್ಲಿ ಸಮಂತಾ ಡೀ ಗ್ಲಾಮರ್ ಟಚ್ ಇರೋ ಟೀಸರ್ ಹಲ್​ಚಲ್ ಎಬ್ಬಿಸ್ತಿದೆ.

ಅಂದಹಾಗೆ ಮಂಡ್ಯ ಶೈಲಿಯಲ್ಲಿ ಈ ಚಿತ್ರದ ಸಂಭಾಷಣೆ ಇರಲಿದ್ದು, ಕನ್ನಡದಲ್ಲೂ ಪೈಸಾ ವಸೂಲ್ ಮಾಡೋ ಸೂಚನೆ ಕೊಟ್ಟಿದೆ ರಂಗಸ್ಥಳ. ಮೂಲಗಳ ಪ್ರಕಾರ ಸುಮಾರು 100ಕ್ಕೂ ಅಧಿಕ ತೆರೆಗಳಲ್ಲಿ ಸಿನಿಮಾ ರಾಜ್ಯಾದ್ಯಂತ ಇದೇ ಜುಲೈ 12ಕ್ಕೆ ರಿಲೀಸ್ ಆಗ್ತಿದೆ. ಅದೇನೇ ಇರಲಿ, ಡಬ್ಬಿಂಗ್ ಸಿನಿಮಾಗಳಿಂದ ರಿಮೇಕ್ ಹಾವಳಿ ತಪ್ಪಿದ್ರೆ ಅದಕ್ಕಿಂತ ಖುಷಿ ಬೇರೇನಿದೆ ಅಲ್ವಾ..?

Comments are closed.