
ಬಾಲಿವುಡ್ನ ಸೆಕ್ಸ್ ಬಾಂಬ್ ಎಂದೇ ಕರೆಸಿಕೊಳ್ಳೋ ಮಲ್ಲಿಕಾ ಶೆರಾವತ್ ಬಾಲಿವುಡ್ ಪಾಲಿಗೆ ಅಚ್ಚುಮೆಚ್ಚಿನ ನಟಿ. ಒಂದು ಸಮಯದಲ್ಲಿ ಡೈರೆಕ್ಟರ್ ಫೆವರಿಟ್ ನಟಿ ಎನ್ನಿಸಿಕೊಂಡಿದ್ದ ಮಲ್ಲಿಕಾ, ಇತ್ತೀಚಿಗೆ ಪ್ರತಿ ಚಿತ್ರ ಒಂದು ಹಾಟ್ ಹಾಡಿನಲ್ಲಾದರೂ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚಿಗೆ ಬಾಲಿವುಡ್ನಿಂದ ಮರೆಯಾಗುತ್ತಿರುವ ಮಲ್ಲಿಕಾ ಇದಕ್ಕೆ ಕಾರಣ ಏನು ಅಂದ್ರೆ ಸ್ಪೋಟಕ ಬಾಂಬ್ವೊಂದನ್ನು ಸಿಡಿಸಿದ್ದಾರೆ.
ಹೌದು ಸಂದರ್ಶನವೊಂದರಲ್ಲಿ ಬಾಲಿವುಡ್ ಚಿತ್ರಗಳಲ್ಲಿ ನೀವು ಇತ್ತೀಚಿಗೆ ಕಾಣಿಸಿಕೊಳ್ಳುತ್ತಿಲ್ಲ ಯಾಕೆ ಎಂಬ ಪ್ರಶ್ನೆಗೆ ಬಾಲಿವುಡ್ ಬೆಚ್ಚಿ ಬೀಳುವಂತೆ ಉತ್ತರಿಸಿರುವ ಮಲ್ಲಿಕಾ, ನಾವು ಹೀರೋಗಳೊಂದಿಗೆ ಡೇಟಿಂಗ್ ಹೋಗೋದಿಲ್ಲ ಅನ್ನೋ ಕಾರಣಕ್ಕೆ ನಮಗೆ ಅವಕಾಶ ಸಿಗುತ್ತಿಲ್ಲ ಎನ್ನುವ ಮೂಲಕ ಮತ್ತೊಮ್ಮೆ ಕಾಸ್ಟಿಂಗ್ ಕೌಚ್ ಬಾಂಬ್ ಸಿಡಿಸಿದ್ದಾರೆ.
ಬಹುತೇಕ ಹೀರೋಗಳು ತಮ್ಮ ಸಿನಿಮಾದಲ್ಲಿ ಹೀರೋಯಿನ್ ಆಗಿ ತಮ್ಮ ಗರ್ಲ್ಪ್ರೆಂಡ್ಗಳನ್ನೇ ನೋಡಲು ಬಯಸುತ್ತಾರೆ. ಹೀಗಾಗಿ ನಾವು ಅವಕಾಶ ವಂಚಿತರಾಗುತ್ತಿದ್ದೇವೆ ಎಂದು ಬೋಲ್ಡ್ ಆಗಿ ಉತ್ತರಿಸಿದ್ದಾರೆ. ಆ ಮೂಲಕ ಬಾಲಿವುಡ್ನಲ್ಲೂ ಅವಕಾಶಕ್ಕಾಗಿ ಹೀರೋಗಳ ಜೊತೆ ಕಾಂಪ್ರಮೈಸ್ ಅನಿವಾರ್ಯ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಆದರೆ ಮೀಟೂ ವನ್ನು ನಿರಾಕರಿಸಿರುವ ಮಲ್ಲಿಕಾ, ನಾನೇಷ್ಟು ಬೋಲ್ಡ್ ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ ಯಾರು ನನ್ನ ಬಳಿ ದೈಹಿಕ ಸಂಬಂಧ ಬೆಳೆಸುವಂತ ಧೈರ್ಯ ತೋರಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಮಲ್ಲಿಕಾ ಮೂಲೆಗುಂಪಾಗಿರೋದಿಕ್ಕೆ ಹೊಸ ಬಾಂಬ್ ಸಿಡಿಸಿ ಶಾಕ್ ನೀಡಿರೋದಂತು ಸತ್ಯ. ಸಧ್ಯ ಮಲ್ಲಿಕಾ ವೆಬ್ ಸೀರಿಸ್ಗಳಲ್ಲಿ ನಟಿಸುತ್ತಿದ್ದಾರೆ.
Comments are closed.