
ಸಿಲಿಕಾನ್ ಸಿಟಿಯಲ್ಲಿ ಸಂಚಾರಿ ಪೊಲೀಸರಿಗೆ ನಡುರಸ್ತೆಯಲ್ಲಿ ಅವಾಜ್ ಹಾಕಿದ ಅಟೋಚಾಲಕನೊಬ್ಬ ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ.
ಯಶವಂತ ಸಂಚಾರಿ ಪೊಲೀಸರು ವಾಹನಗಳ ದಾಖಲೆ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಅಟೋದಲ್ಲಿ ಬಂದಾತನನ್ನು ಪೊಲೀಸರು ಲೈಸೆನ್ಸ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಅಟೋ ಚಾಲಕ ನನ್ನ ಲೈಸೆನ್ಸ್ ಪ್ರೆಂಡ್ ಬಳಿ ಇದೆ. ಏನೀಗ? ಎಂದು ಪೊಲೀಸರ ಮೇಲೆಯೇ ಕಿರುಚಾಡಿದ್ದಾನೆ.
ಅಷ್ಟೇ ಅಲ್ಲ ಪೊಲೀಸರಿಗೆ ಧಮಕಿ ಹಾಕಿ ವಿನಾಕರಣ ಗಲಾಟೆ ಸೃಷ್ಟಿಸಿ ಎಲ್ಲರ ಎದುರು ಅವಾಂತರ ಸೃಷ್ಟಿಸಿದ್ದಾನೆ. ಇದರಿಂದ ಕೆರಳಿದ ಪೊಲೀಸರು ಲೈಸೆನ್ಸ್ ಇಲ್ಲದೇ ಅಟೋ ಓಡಿಸುತ್ತಿದ್ದ ಚಾಲಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಪೊಲೀಸರು ಠಾಣೆಗೆ ಕರೆದೊಯ್ಯತ್ತಿದ್ದಂತೆ ಹುಲಿಯಂತಿದ್ದ ಚಾಲಕ ಇಲಿಯಂತಾಗಿದ್ದು, ತಪ್ಪಾಯ್ತು ಸಾರ್ ನಿಮ್ಮ ಕಾಲಿಗೆ ಬೀಳ್ತಿನಿ ಬಿಟ್ಟುಬಿಡಿ ಸಾರ್ ಎಂದು ಅಂಗಲಾಚಿದ್ದಾನೆ. ಇದೀಗ ಈ ಎರಡು ವಿಡಿಯೋಗಳು ಫುಲ್ ವೈರಲ್ ಆಗಿದ್ದು, ಜನರು ಅಟೋ ಚಾಲಕ ವರ್ತನೆಗೆ ನಕ್ಕು ನಕ್ಕು ಸುಸ್ತಾಗ್ತಿದ್ದಾರೆ.
Comments are closed.