ರಾಷ್ಟ್ರೀಯ

ಬೀಚ್‍ನಲ್ಲಿ ಮೋಜು ಮಸ್ತಿ ಮಾಡಲು ಮಗನನ್ನು ಕಾರ್ ನಲ್ಲಿ ಲಾಕ್ ಮಾಡಿದ ದಂಪತಿ!

Pinterest LinkedIn Tumblr


ಮಕ್ಕಳಿಗಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡುವ ಈ ಕಾಲದಲ್ಲಿ ತಮ್ಮ ಮಗನನ್ನು ಕಾರಿನಲ್ಲಿ ಲಾಕ್ ಮಾಡಿ ಸಮುದ್ರಕ್ಕೆ ಹೋಗಿ ಎಂಜಾಯ್ ಮಾಡಿದ ದಂಪತಿಗಳಿಬ್ಬರು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಘಟನೆ ನಡೆದಿದೆ.

ಪಶ್ಚಿಮಬಂಗಾಳದ ಪೂರ್ವ ಮಿಡ್ನಾಪೋರ್​ ಜಿಲ್ಲೆಯಲ್ಲಿ ಇಂತಹದೊಂದು ಘಟನೆ ನಡೆದಿದೆ. ಕೋಲ್ಕತ್ತಾ ಮೂಲದ ದಂಪತಿಗಳು ತಮ್ಮ ಪುತ್ರನೊಂದಿಗೆ ರಜೆ ಎಂಜಾಯ್ ಮಾಡಲು ಮಿಡ್ನಾಪೋರ್​ದಲ್ಲಿರೋ ದಿಘಾ ಸಮುದ್ರಕ್ಕೆ ತೆರಳಿದ್ದರು. ಈ ವೇಳೆ ತಮ್ಮ ಮಗನನ್ನು ಕಾರಿನಲ್ಲಿಯೇ ಲಾಕ್ ಮಾಡಿದ ದಂಪತಿ ಇಬ್ಬರು ಸಮುದ್ರದಲ್ಲಿ ಎಂಜಾಯ್ ಮಾಡುತ್ತಿದ್ದರು.

ಇದೇ ವೇಳೆ ಕಾರಿನಲ್ಲಿ ಕಿಟಕಿಗಳು ಮುಚ್ಚಿದ್ದ ಕಾರಣ ಬಾಲಕನಿಗೆ ಉಸಿರಾಡಲು ತೊಂದರೆ ಆಗಿದ್ದು ಬಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದನು.ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿ ತಕ್ಷಣ ಬೇರೆ ಅಧಿಕಾರಿಗಳನ್ನು ಕರೆದು ಕಾರಿನ ಕಿಟಕಿಯನ್ನು ಒಡೆದು ಬಾಲಕನನ್ನು ರಕ್ಷಿಸಿದ್ದಾರೆ. ಬಳಿಕ ಪ್ರಜ್ಞೆ ತಪ್ಪಿದ್ದ ಬಾಲಕನ ಮೇಲೆ ನೀರು ಚಿಮುಕಿಸಿ ಆತನನ್ನು ಎಚ್ಚರಗೊಳಿಸಿದ್ದಾರೆ.

ಇನ್ನು ಘಟನೆ ತಿಳಿದು ಕಾರಿನ ಬಳಿಗೆ ಓಡಿ ಬಂದ ಮಗುವಿನ ತಂದೆ ತಾಯಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದು, ನಿರ್ಲಕ್ಷ್ಯಕ್ಕೆ ಕೋಪಗೊಂಡು ಬಾಲಕನ ತಂದೆಗೆ ಹಿಗ್ಗಾಮುಗ್ಗಾ ಬಾರಿಸಿದ್ದಾರೆ. ಇನ್ನು ತೀವ್ರ ಅಸ್ವಸ್ಥಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ.

Comments are closed.