ಮನೋರಂಜನೆ

ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಖುಲ್ಲಂಖುಲ್ಲಂ ರೋಮ್ಯಾನ್ಸ್​!

Pinterest LinkedIn Tumblr


ಬಾಲಿವುಡ್ ನ ಯಂಗ್ ಆ್ಯಂಡ್ ಎವರ್ ಗ್ರೀನ್ ಎಂದೇ ಫೇಮಸ್ ಆಗಿದ್ದ ನಟಿ ಶ್ರೀ ದೇವಿ ಹಾಗೂ ಬೋನಿ ಕಪೂರ್ ಮುದ್ದಿನ ಮಗಳು ಜಾಹ್ನವಿ ಕಪೂರ್ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಅಷ್ಟಕ್ಕೂ ಈ ಕ್ಯೂಟ್ ಬೆಡಗಿ ಸದ್ಯ ಸುದ್ದಿಯಾಗಿರುವುದಾದರೂ ಯಾವ ವಿಷಯಕ್ಕೆ ಎಂದು ಯೋಚಿಸುತ್ತೀದ್ದೀರಾ ಹಾಗಾದರೆ ಈ ಕೆಳಗಿನ ಸ್ಟೋರಿ ಓದಿ…

ಹೌದು ಕೆಲವು ದಿನಗಳ ಹಿಂದೆ ಜಾಹ್ನವಿ ಧರಿಸುವ ಕಾಸ್ಟ್ಯೂಮ್​, ಹ್ಯಾಂಡ್ ಬ್ಯಾಗ್ ಹಾಗೂ ಗಾಗಲ್, ಜಿಮ್​​ಗೆ ಹೋಗುವಾಗ ಬಳಸುವ ಬಾಟಲ್​ ಹೀಗೆ ಎಲ್ಲ ವಸ್ತುಗಳ ಕಾರಣಕ್ಕೆ ಸುದ್ದಿಯಾಗಿತ್ತು. ಜೊತೆಗೆ ಫಿಟ್ ನೆಸ್ ಗಾಗಿ ಜಿಮ್ ಗೆ ಹೋಗುವ ಹಲವು ಜಾಹ್ನವಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕೂಡ ವೈರಲ್ ಆಗಿತ್ತು. ಹೀಗೆ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿರುವ ಜಾಹ್ನವಿ ಈಗ ರೋಮಾನ್ಸ್ ಕಾರಣಕ್ಕೆ ಸುದ್ದಿಯಾಗಿದ್ದಾರೆ.

ಹೌದು ಜಾಹ್ನವಿ ಕಾರ್ತಿಕ್​ ಜೊತೆ ರೋಮಾನ್ಸ್ ಮಾಡಲಿದ್ದಾರೆ. ಆದರೆ ಇದು ನಿಜಜೀವನದ ರೋಮ್ಯಾನ್ಸ್ ಅಂದ್ಕೋಬೇಡಿ. ಜಾಹ್ನವಿ ಕಾರ್ತಿಗ್​ಗೆ ಜೊತೆಯಾಗ್ತಾ ಇರೋದು ಲುಖಾ- ಚುಪಿ ಚಿತ್ರದಲ್ಲಿ ಅಭಿನಯಿಸಿ ಸಕ್ಸಸ್ ಕಂಡಿದ್ದ ನಟ ಕಾರ್ತಿಕ್ ಆರ್ಯನ್ ಗೆ. ದೋಸ್ತಾನ -2 ಚಿತ್ರದಲ್ಲಿ ನಾಯಕಿಯಾಗಿ ಜಾಹ್ನವಿ ಅಭಿನಯಿಸುತ್ತಿದ್ದಾರೆ. ಇನ್ನೂ ಈ ಚಿತ್ರ ಕರಣ್ ಜೋಹರ್ ನಿರ್ಮಿಸಲಿದ್ದು, ಸಿನಿಮಾದಲ್ಲಿ ಜಾಹ್ನವಿ ಮತ್ತು ಕಾರ್ತಿಕ್ ಇಬ್ಬರು ತೆರೆಮೇಲೆ ರೋಮ್ಯಾನ್ಸ್ ಮಾಡಲಿದ್ದಾರೆ.

ಈ ಹಿಂದೆ 2008ರಲ್ಲಿ ತೆರೆಗೆ ಬಂದಿದ್ದ ‘ದೋಸ್ತಾನ’ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ಜಾನ್ ಅಬ್ರಾಹಾಂ ಹಾಗೂ ಪ್ರಿಯಾಂಕ ಚೋಪ್ರಾ ನಟಿಸಿದ್ದರು. ಅಲ್ಲದೆ ಚಿತ್ರವು ಬಿ-ಟೌನ್ ನಲ್ಲಿ ಸಖತ್ ಸದ್ದು ಮಾಡಿತ್ತು. ಅಲ್ಲದೇ ಈ ಚಿತ್ರಕ್ಕೆ ತರುಣ್ ಮನ್ಸುಖಾನಿ ಆಕ್ಷನ್ ಕಟ್ ಹೇಳಿದ್ದರು, ಜೊತೆಗೆ ಈ ಚಿತ್ರವನ್ನು ಸಹ ಕರಣ್ ಜೋಹರ್ ರವರೆ ನಿರ್ಮಿಸಿದ್ದರು.

ಸದ್ಯ ಇದೀಗಾ ‘ದೋಸ್ತಾನ-2’ ಚಿತ್ರಕ್ಕೆ ಕಾಲಿನ್ ಡಿ ಸಿನ್ಹ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರಕ್ಕೆ ಕರಣ್ ಬಂಡವಾಳ ಹೂಡಲಿದ್ದಾರೆ, ಈ ಹಿಂದಿನ ಚಿತ್ರ ದೋಸ್ತಾನದಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಜಾಗದಲ್ಲೀಗ ಜಾಹ್ನವಿ ಕಪೂರ್ ಆಯ್ಕೆ ಯಾಗಿದ್ದು, ಚಿತ್ರದ ಒಬ್ಬ ನಟನಾಗಿ ಕಾರ್ತಿಕ್ ಆರ್ಯನ್ ಆಯ್ಕೆಯಾಗಿದ್ದು, ಇನ್ನೋರ್ವ ನಟನಿಗಾಗಿ ಚಿತ್ರತಂಡ ಹುಡುಕಾಟ ನಡೆಸುತ್ತಿದೆ.

Comments are closed.