
ರೀಲು ಸುತ್ತೋ ಲೈಫ್ ಬೇರೇ ರಿಯಲ್ ಗುಟ್ಟು ಅಡಗಿರೋ ಲೈಫ್ ಬೇರೇನೇ. ಬೆಳ್ಳಿತೆರೆಯ ನಟನೊಬ್ಬನ ರಂಗುರಂಗಿನಾಟ ಪರದೆಯ ಮೇಲೆ ಸಕ್ಕತ್ತಾಗಿ ನಟಿಸಿ ನಿಜ ಜೀವನದಲ್ಲಿ ಹೆಂಡತಿಯನ್ನೇ ಅಳಿಸಿ ಫೇಮಸ್ ಆಗಿದ್ದಾನೆ. ಅಗ್ನಿಸಾಕ್ಷಿ ನಟನ ಅಂದರ್ ಕೀ ಬಾತ್ ಚಾರ್ಜ್ ಶೀಟ್ ಕೆ ಅಂದರ್ ಮೇ ಹೈ ಸಾಬ್ ಅಂತಿದೆ ಪೊಲೀಸ್ ಇಲಾಖೆ.
ಈ ಹಿಂದೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ಖಾಸಗಿ ಚಾನಲ್ ನ ಅಗ್ನಿಸಾಕ್ಷಿ ಸೀರಿಯಲ್ ನಟ ರಾಜೇಶನ ಪತ್ನಿ ಶೃತಿ ರಾಜೇಶ್ ದೂರನ್ನ ಹೊತ್ತು ಬಂದಿದ್ದರು. ಪತಿರಾಯ ದಿನಂಪ್ರತಿ ಕ್ವಾಟ್ಲೆ ಕೊಡ್ತಾನೆ ಬಾಟ್ಲಿ ಹಿಡಿದು ಹೊಡೆಯೋಕೆ ಬರ್ತಾನೆ ಅಂತ ದೂರನ್ನ ನೀಡಿದ್ದರು.
ವರದಕ್ಷಿಣೆ ಕೇಸನ್ನ ಫಿಟ್ ಮಾಡಿದ್ದ ಪೊಲೀಸರು ರಾಜೇಶನನ್ನ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆಯನ್ನ ಕೂಡ ನಡೆಸಿದ್ದರು. ಅದೇ ರೀತಿ ಪತ್ನಿ ಶೃತಿ ಕೂಡ ಎಣ್ಣೆ ಏಟಲ್ಲಿ ಮಾನಸಿಕ ಹಿಂಸೆ ನೀಡ್ತಿದ್ದಾಳೆ ಅಂತಾನೂ ಪುರುಷೋತ್ತಮ ರಾಜೇಶ್ ಪೊಲೀಸರ ಮುಂದೆ ಹೇಳಿಕೆಯನ್ನ ಕೂಡ ನೀಡಿದ್ದ. ಕ್ಯಾರಿಯರ್ ಸ್ಪಾಯ್ಲ್ ಮಾಡೋಕೆ ಹೆಂಡ್ತಿ ಷಡ್ಯಂತ್ರ ಮಾಡ್ತಿದ್ದಾಳೆ ಅಂತಾನೂ ಪುಂಗಿದ್ದ.
ಆದ್ರೆ, ರಾಜೇಶನ ಚಾಕಚಕ್ಯತೆಯ ಮಾತಿಗೆ ಪೊಲೀಸರು ಒಂದೊಮ್ಮೆ ತಲೆದೂಗಿ ಪಾಪದ ಹುಡುಗನ ಬಾಳು ಹಾಳಾಯ್ತಲ್ಲ ಅಂತಾನೂ ಎಣಿಸಿದ್ದುಂಟು. ಆದ್ರೆ, ತನಿಖೆಯ ಹಂತ ಮತ್ತೊಂದು ಮಗ್ಗುಲಲ್ಲಿ ಬಿಚ್ಚಿಕೊಳ್ತಿದ್ದಂತೆ ರಾಜೇಶನ ಹಣೆಬರಹ ಪೊಲೀಸ್ ಹಾಳೆಯಲ್ಲೇ ಕತೆಯ ರೂಪದಲ್ಲಿ ಅಸಲಿಯತ್ತು ಹೊರಬಂದಿದೆ. ಅರ್ಥಾತ್ ಪೊಲೀಸರ ಚಾರ್ಜ್ ಶೀಟ್ನ ಅಂದರ್ ಕೀ ಬಾತ್ ಇದೀಗ ಬಟಾಬಯಲಾಗಿದೆ.
ಇದೀಗ ಬಸವನಗುಡಿ ಪೊಲೀಸರು ನಟ ರಾಜೇಶನ ವಿರುದ್ಧ ದೋಷಾರೋಪ ಪಟ್ಟಿ ಇದೀಗ ಕೋರ್ಟ್ ಗೆ ಸಬ್ಮಿಟ್ ಮಾಡಿದ್ದಾರೆ. 46 ಪುಟಗಳ ಚಾರ್ಜ್ ಶೀಟ್ ನಲ್ಲಿ ರಾಜೇಶನ ಪತ್ನಿಯ ಹೇಳಿಕೆಯನ್ನ ಉಲ್ಲೇಖಿಸಲಾಗಿದೆ.
ರಾಜೇಶ್ 2013ರಲ್ಲಿ ಶೃತಿಯನ್ನ ರಿಜಿಸ್ಟರ್ ಮ್ಯಾರೇಜ್ ಆಗಿದ್ನಂತೆ. ಬಿಪಿಓ ದಲ್ಲಿ ಕೆಲ್ಸ ಮಾಡ್ಕೊಂಡಿದ್ದ ರಾಜೇಶ್ ಕಿರುತೆರೆಯ ಗೀಳಿಗೆ ಕಿವಿಕೊಟ್ಟು ಕೆಲ್ಸ ಬಿಟ್ಟಿದ್ದನಂತೆ. ರಾಜೇಶ್ ರಂಗಿನ ಜಗತ್ತಿಗೆ ಎಂಟ್ರಿ ಕೊಡ್ತಿದ್ದಂತೆ ಲಲನೆಯರ ಸಂಪರ್ಕ ಹೆಚ್ಚಾಗಿ ಹುಚ್ಚನಾಗಿದ್ದನಂತೆ.
ಅದೇ ರೀತಿ ಸಂಜೆಯ ಸೊಬಗನ್ನ ಆಸ್ವಾದಿಸೋಕ್ಕೂ ಹೆಣ್ಣೆಂಬ ಹಣ್ಣು ಬೇಕಿತ್ತಂತೆ. ಅದಕ್ಕಾಗೇ ರಾಜೇಶನ ಪತ್ನಿ ರಾಜೇಶನಿಗೆ ಆವಾಗಾವಾಗ ಮಂಗಳಾರತಿ ಮಾಡ್ತಿದ್ದದ್ದು ಉಂಟು. ಇನ್ನು ರಾಜೇಶ್, ಶೃತಿಯ ಪೋಷಕರ ಬಳಿ ತನಗೆ ಗ್ರ್ಯಾಂಡಾಗಿ ಮದುವೆ ಮಾಡಿಸುವಂತೆ ಹೇಳಿ ರಿಜಿಸ್ಟರ್ ಮ್ಯಾರೇಜ್ ಬಳಿಕ ಡಿಮಾಂಡ್ ಮಾಡಿದ್ದ.
ಹೈಫೈ ವ್ಯಕ್ತಿಗಳ ಮುಂದೆ ಕಾಲರನ್ನ ಎತ್ತಿ ತೋರಿಸೋ ಪ್ರಯತ್ನವೂ ಮದ್ವೆ ಟೈಮಲ್ಲಿ ನಡೆದಿತ್ತು. ಅದೇ ರೀತಿ ದಿನಕಳೆದಂತೆ ವರದಕ್ಷಿಣೆ ನೀಡುವಂತೆಯೂ ಪೀಡಿಸ್ತಿದ್ದ ಅನ್ನೋ ಮಾತನ್ನ ಚಾರ್ಜ್ ಶೀಟ್ ನಲ್ಲಿ ದಾಖಲಿಸಲಾಗಿದೆ. ಪರದೆ ಹಿಡಿದು ಹೆಂಡ್ತಿಗೆ ಕಣ್ಣೀರು ತರಿಸ್ತಿದ್ದ ರಾಜೇಶನ ಅಸಲಿ ಕಹಾಕಿ ರಿವೀಲ್ ಆಗಿದೆ.
Comments are closed.