
ಹಲವು ಸಂಶೋಧನೆಗಳನ್ನ ಮಾಡಿದ ನಾಸಾ, ತನ್ನ ನಿರ್ಲಕ್ಷ್ಯದಿಂದ ತನ್ನ ತಂತ್ರಜ್ಞಾನ ಮತ್ತು ಡೇಟಾವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ.
ಹೋದವರ್ಷ ತಾನೆ ನಾಸಾವನ್ನು ಹ್ಯಾಕ್ ಮಾಡಲಾಗಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಈ ಬಗ್ಗೆ ಬಾಹ್ಯಾಕಾಶ ಸಂಸ್ಥೆ ಮಾಡಿದ ಪರಿಶೋಧನೆಯಲ್ಲಿ, ಹ್ಯಾಕ್ ಮಾಡಿದವರು ನಾಸಾದ 500MB ಡೇಟಾವನ್ನ ಕದ್ದಿದ್ದಾರೆನ್ನಲಾಗಿದೆ. ಡೇಟಾ ಕದ್ದ ಕಳ್ಳರು ಈ ಕೆಲಸಕ್ಕಾಗಿ ಬರೋಬ್ಬರಿ 1,500 ಕಂಪ್ಯೂಟರ್ಗಳನ್ನ ಬಳಸಿದ್ದಾರೆ.
ಕಡಿಮೆ ದರದಲ್ಲಿ ಸಿಗಬಹುದಾದಂತಹ, ಪರ್ಸ್ ಗಾತ್ರದ ಕಂಪ್ಯೂಟರ್ ಆಗಿರುವಂಥ Raspberry Piಯನ್ನ ಉಪಯೋಗಿಸಿಕೊಂಡು ನಾಸಾ ಡಿಟೇಲ್ಸನ್ನ ಹ್ಯಾಕ್ ಮಾಡಲಾಗಿದ್ದು, ಪ್ರಮುಖ ಮಿಷನ್ ವ್ಯವಸ್ಥೆಗಳಿಂದ 500MB ಒಳಗೊಂಡ ಸುಮಾರು 23 ಫೈಲ್ಗಳನ್ನು ಕದ್ದಿದ್ದಾರೆ.
ಇವುಗಳಲ್ಲಿ ಎರಡು ಸ್ಪಷ್ಟವಾಗಿ ಮಾರ್ಸ್ ಸೈನ್ಸ್ ಲ್ಯಾಬೊರೇಟರಿ ಮಿಷನ್ಗೆ ಸಂಬಂಧಿಸಿದ ಮಿಲಿಟರಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ವರ್ಗಾವಣೆಯನ್ನು ನೋಡಿಕೊಳ್ಳುವ ಇಂಟರ್ನ್ಯಾಷನಲ್ ಟ್ರಾಫಿಕ್ ಇನ್ ಆರ್ಮ್ಸ್ ರೆಗ್ಯುಲೇಷನ್ಸ್ನ ಮಾಹಿತಿಯನ್ನು ಒಳಗೊಂಡಿದೆ.
Comments are closed.