
ನಿನ್ನೆ ಬೆಳಗ್ಗೆಯಿಂದಲೂ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾತ್ರಿ 10.30 ರವರೆಗೂ ಜನತಾ ದರ್ಶನ ನಡೆಸುವ ಮೂಲಕ ಜಿಲ್ಲೆಯ ಜನ ಮನ ಗೆದ್ದರು. ನಾನಾ ಸಮಸ್ಯೆ ಹೊತ್ತು ಬಂದಿದ್ದ ಸಾವಿರಾರು ಜನರ ಸಮಸ್ಯೆ ಆಲಿಸುವ ಮೂಲಕ ನೊಂದವರ ದನಿಯಾದ ಸಿಎಂ ರಾತ್ರಿ 12 ಗಂಟೆಗೆ ಮಕ್ಕಳೊಂದಿಗೆ ಊಟ ಮಾಡಿ ಶಾಲೆಯಲ್ಲಿ ಮಲಗಿದ್ದರು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ, ಕರೇಗುಡ್ಡದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ, ಜನತಾ ದರ್ಶನ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಮುಖಾಂತರ ನಾಡದೊರೆ ಇಡೀ ದಿನ ಬ್ಯುಸಿಯಾಗಿದ್ದರು. ಅದರಲ್ಲೂ ವಿವಿಧ ಸಮಸ್ಯೆ ಹೊತ್ತು ವಿವಿಧ ಸ್ಥಳಗಳಿಂದ ದೂರದೂರುಗಳಿಂದ ಬಂದಿದ್ದ ಸಾರ್ವಜನಿಕರು ಸಿಎಂರನ್ನು ಭೇಟಿಯಾಗಿ ಮನವಿ ಸಲ್ಲಿಸುವ ತವಕದಲ್ಲಿದ್ದರು.
ಇಳಿ ಸಂಜೆ ಮೇಲೆ ಜನತಾದರ್ಶನ ಶುರುವಾದರೂ ರಾತ್ರಿ 10:15 ನಿಮಿಷದ ವರೆಗು ಸಿಎಂ ಅಹವಾಲು ಸ್ವೀಕರಿಸಿದರು. ಅದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ತಡವಾಗಿದ್ದಕ್ಕೆ ಕ್ಷಮೆಯಾಸಿದ್ದ ಅವರು, ಇಂದು ಎಷ್ಟು ಹೊತ್ತಾದರೂ ಸರಿಯೇ ನಾನು ಎಲ್ಲರ ಅಹವಾಲು ಸ್ವೀಕರಿಸುವುದು ನಿಶ್ಚಿತ. ಎಲ್ಲರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದರು. ಅದೇ ತರಹ ಅಹವಾಲು ಸಲ್ಲಿಸಿದ ಸರ್ವಾಜನಿಕರು ಸಂತಸದಲ್ಲಿ ಸಿ.ಎಂ. ಗೆ ಮನವಿಸಲ್ಲಿಸಿ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ ಜಿಲ್ಲೆಯ ಜನರಿಂದ ವೈಯಕ್ತಿಕ, ಸಾರ್ವಜನಿಕ ಸೇರಿ ವಿವಿಧ ಸಮಸ್ಯೆಗಳ ಸುಮಾರು 2000ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು.
ವಿವಿಧ ಸಂಘ ಸಂಸ್ಥೆಗಳಿಂದ 171, ಅಂಗವಿಕಲರಿಂದ 242, ಮಹಿಳೆಯರಿಂದ 136 ಹಾಗೂ 1500ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಮೊದಲನೇ ಆದ್ಯತೆಯಾಗಿ ಅಂಗವಿಲಕರಿಗೆ ಮಹಿಳೆಯರಿಗೆ ಅವಕಾಶ ನೀಡಲಾಯಿತು. ಬಳಿಕ ಸಾರ್ವಜನಿಕರ ಅಹವಾಲು ಸ್ವೀಕರಿಸಲಾಯಿತು. ಬಹುತೇಕ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಲಾಯಿತು. ಕೆಲವೊಂದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೆ, ಇನ್ನೂ ಕೆಲವನ್ನು ತಿರಸ್ಕೃತಗೊಳಿಸಲಾಯಿತು. ಈ ಮಧ್ಯ ಕೆಲವರು ತಮ್ಮ ಮನವಿಗೆ ಸರಿಯಾಗಿ ಸ್ಪಂದಿಸಿಲ್ಲ ಎಂದು ಆಕ್ರೋಷವೂ ವ್ಯಕ್ತಪಡಿಸಿದರು.
ಜನತಾ ದರ್ಶನ ಕಾರ್ಯ ಕ್ರಮ ಮುಕ್ತಾಯದ ನಂತರ ಸಿಎಂ ಮತನಾಡುತ್ತಾ,ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ರಮ ಇದಾಗಿದೆ. ಯಾರನ್ನೋ ಮೆಚ್ಚಿಸಲಿಕ್ಕೆ, ಬಿಜೆಪಿ ಸರ್ಟಿಫಿಕೇಟ್ ಗೋಸ್ಕರ ಮಾಡುತ್ತಿರುವ ಕಾರ್ಯಕ್ರಮ ಅಲ್ಲಾ ಎಂದು ಬಿಜೆಪಿ ಟಾಂಗ್ ನೀಡಿದರು. ಬೆಳಗ್ಗೆಯಿಂದ ಕಾರ್ಯಕ್ರಮಕ್ಕೆ ಸಹಕರಿಸಿದ ಜಿಲ್ಲಾಡಳಿತ, ಜಿಲ್ಲಾ ಜನಪ್ರತಿನಿಧಿಗಳು ಹಾಗೂ ಪೊಲೀಸ್ ಇಲಾಖೆಗೆ ಕೃತಜ್ಞತೆ ಹೇಳಿ ಜನತಾ ದರ್ಶನ ಮುಕ್ತಾಯ ಮಾಡಿ. ಮಕ್ಕಳ ಸಂಸ್ಕ್ರತಿಕ ಕಾರ್ಯಕ್ರಮ ವಿಕ್ಷಿಸಿ, ನಂತರ ಶಾಲೆಗೆ ಆಗಮಿಸಿ ಶಾಲೆಯ ವ್ಯವಸ್ಥೆ ನೋಡಿ. ನಂತರ ಮಕ್ಕಳೊಂದಿಗೆ ಸೇರಿ ರಾತ್ರಿ 12 ಗಂಟೆಗೆ ಊಟ ಮಾಡಿ ಮಲಗಿದರು. ನಂತರ ಬೆಳಗ್ಗೆ 4.30 ಕ್ಕೆ ಎದ್ದ ಸಿಎಂ ರಸ್ತೆ ಮೂಲಕ ಕಾರಿನಲ್ಲಿ ಬೀದರ್ ಗೆ ಪ್ರಯಾಣ ಬೆಳೆಸಿದ್ದಾರೆ.
ರಾತ್ರಿ ಮಕ್ಕಳೋಂದಿಗೆ, ಉತ್ತರ ಕರ್ನಾಟಕದ ಸ್ಪೆಷಲ್ ರೋಟ್ಟಿ, ಚಪಾತಿ ಪುಂಡೆಪಲ್ಯ, ಬದನೇಕಾಯಿ, ಚಿತ್ರನ್ನ ಸೇವಿಸಿದರು. ಶಾಲೆಯ ಭೀಮ ಕೊಟ್ಟಡಿಯಲ್ಲಿ ಮಾಲಗಿದ ಸಿ.ಎಂ. ಕೇವಕ ಚಾಪೆ, ಬ್ಯೇಡ್ ಸಿಟ್ ಮತ್ತು ತೆಲೆದಿಂಬು ನೊಂದಿಗೆ ಸಧಾರಣವಾಗಿ ಮಾಲಗಿದರು. ಇನ್ನು ಸಿ.ಎಂ. ಜೊತೆ ಊಟ ಸವಿದ ವಿದ್ಯಾರ್ಥಿಗಳು ನಮ್ಮಗೆ ಮುಖ್ಯಮಂತ್ರಿಯನ್ನು ನೋಡೋದೆ ನಮ್ಮ ಭಾಗ್ಯ, ಅವರ ಜೊತೆ ಊಟ ಮಾಡಿದ್ದು ಸಂತಸವಾಗಿದೆ ಎಂದು ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.
ಸಿಎಂ ಬೀದರ್ ಪ್ರಯಾಣಕ್ಕೆ ಅಧಿಕಾರಿಗಳ ತಂಡ ಸಾಥ್ ನೀಡಿದರೆ. ಮಾಜಿ ಸಚಿವ ಕೊನಾರೆಡ್ಡಿ ಸಿಎಂ ಜೊತೆ ಪ್ರಯಾಣ ಬೆಳೆಸಿದ್ದಾರೆ. ಇನ್ನೂ ಸಚಿವರಾದ ಸಾ.ರಾ ಮಹೇಶ ಮತ್ತು ವೆಂಕಟರಾವ್ ನಾಡಗೌಡ ಇಲ್ಲೆ ಉಳಿದುಕೊಂಡಿದ್ದಾರೆ. ಸಿಎಂ ಗ್ರಾಮವಾಸ್ತವ್ಯ ಯಶಸ್ವಿಯಾಗಿದ್ದು ಜಿಲ್ಲೆಯ ಸಾಕಷ್ಟು ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ಸಿಎಂ ಅವರು ಮುಖ್ಯವಾಗಿ ತುಂಗಭದ್ರಾ ನೀರಾವರಿ ಯೋಜನೆ ಸೇರಿದಂತೆ ಹಲವು ವಿವಿಧ ಯೋಜನೆಗಳ ಬಗ್ಗೆ ಸಭೆ ಮಾಡಿ ನಿರ್ಧಾರ ಮಾಡಲಾಗುವುದು ಎಂಬ ಭರವಸೆ ನೀಡಿದ್ದಾರೆ ಎಂದರು.
ಒಟ್ಟಾರೆಯಾಗಿ ಎರಡನೇ ಗ್ರಾಮ ವಾಸ್ತವ್ಯ ಪ್ರತಿಭಟನೆ ಕಾವಿನ ನಡುವೆ ಸಂಪೂರ್ಣವಾಗಿ ಯಶಸ್ವಿಗೊಂಡಿದೆ. ಆದರೆ ಸಿಎಂ ಮಾತ್ರ ದಿನವಿಡಿ ಚಾಕಚಕ್ಯತೆಯಿಂದ ಸತತ 5 ಗಂಟೆಗಳ ಕಾಲ ತಾಳ್ಮೆಯಿಂದಲೇ ಅಹವಾಲು ಸ್ವೀಕರಿಸಿದ್ದು ಜಿಲ್ಲೆಯ ಜನತೆಯ ಮೆಚ್ಚುಗೆಗೆ ಕಾರಣವಾಯಿತು. ಇನ್ನೂ ಕರೆಗುಡ್ಡ ಗ್ರಾಮದಿಂದೆ ಬೆಳಗ್ಗೆ 4.30 ಕ್ಕೆ ಎದ್ದು ಗ್ರಾಮದಿಂದ ಬೀದರ್ ಕಡೆ ಪ್ರಯಾಣ ಬೆಳೆಸಿದ್ದು ಮಾರ್ಗ ಮದ್ಯ ಕಲಬುರ್ಗಿ ತೆರಳಿ ಉಪಹಾರ ಸೇವಿಸಿ ಮತ್ತೆ ಬೀದರ್ ಗೆ ಮತ್ತೆ ಪ್ರಯಾಣ ಬೆಳಸಲಿದ್ದಾರೆ.
Comments are closed.