“ಸುಮ್ನೆ ಮಲ್ಕೋ ಶಬ್ದ ಮಾಡ್ಬೇಡ, ಇಲ್ಲ ಅಂದ್ರೆ ಬೇರೆ ರೂಮ್ನಲ್ಲಿ ಮಲ್ಕೋ ಹೋಗು” ಈ ರೀತಿಯಾಗಿ ನಿಮ್ಮ ಮನೆಯವರು ನಿಮಗೆ ದಿನಾಲು ಹೇಳುತ್ತಿರಬಹುದು. ಆದರೆ ಇದರಲ್ಲಿ ನಿಮ್ಮ ತಪ್ಪು ಅಥವಾ ಅವರ ತಪ್ಪು ಇಲ್ಲ, ತಪ್ಪು ನಿಮ್ಮ ಗೊರಕೆಯದ್ದು. ಹೌದು, ಇದು ಗೊರಕೆಯ ತಪ್ಪು, ನೀವು ಇದನ್ನು ನಿಮ್ಮ ಮೇಲೆ ಹಾಕಿಕೊಳ್ಳುವ ಬದಲು ಗೊರಕೆಯನ್ನು ದೂಷಿಸಿರಿ.
ಗೊರಕೆಯ ಕಾರಣಗಳೇನು?
ನಮ್ಮ ಮೇಲ್ಭಾಗದ ಶ್ವಾಸಕೋಶವು ನಮ್ಮ ದೇಹದ ಅಂಗ ರಚನೆ ಮಾಡಿದ ಹಾಗೆ ಮೂಗು, ಬಾಯಿ ಮತ್ತು ಗಂಟಲಿನ ಸ್ನಾಯು ಮತ್ತು ನರಗಳ ಮೂಲಕ ಉಸಿರಾಟ ಮಾಡುತ್ತದೆ. ಇದರಿಂದ ಉಸಿರಾಟದ ಸಮಯದಲ್ಲಿ ಯಾವುದೇ ರೀತಿಯ ಅಡಚಣೆಯಿಲ್ಲದಂತಾಗುತ್ತದೆ. ಅಡಚಣೆ ಉಂಟಾಗುವ ತನಕ ಇದು ಶಾಂತ ಪ್ರಕ್ರಿಯೆಯಾಗಿದೆ. ಕೆಲ ಪರಿಸ್ಥಿಗಳ ಕಾರಣದಿಂದಾಗಾಗಿ ಈ ಜಾಗ ಕಿರಿದಾಗಿ ಉಸಿರಾಡುವಾಗ ಗಾಳಿಯ ಹರಿವಿನ ಪ್ರಕ್ಷುಬ್ಧತೆ ಮತ್ತು ರಚನೆಯ ಕಂಪನವನ್ನು ಉಂಟುಮಾಡುತ್ತದೆ. ಇದರಿಂದಾಗುವ ಜೋರು ಶಬ್ದವನ್ನು ನಾವು ಗೊರಕೆ ಎಂದು ಕರೆಯುತ್ತೇವೆ.
ಮೇಲ್ಭಾಗದ ಉಸಿರಾಟದ ಜಾಗ ಕಿರಿದಾಗುವುದಕ್ಕೆ ಕಾರಣಗಳು?
ನಾಲಿಗೆ, ಕೆಳನಾಲಿಗೆ, ವಸುಡು ಅಥವಾ ಹಲ್ಲಿನ ಸೆಟ್ ಗಳು ಕೆಲವೊಮ್ಮೆ ಅಡಚಣೆಯನ್ನುಂಟುಮಾಡಬಹುದು.
ಮೇಲ್ಭಾಗದ ಉಸಿರಾಟದ ಜಾಗ ಕಿರಿದಾಗುವುದಕ್ಕೆ ಕಾರಣಗಳು
ನಾಲಿಗೆ, ಕೆಳನಾಲಿಗೆ, ವಸುಡು ಅಥವಾ ಹಲ್ಲಿನ ಸೆಟ್ ಗಳು ಕೆಲವೊಮ್ಮೆ ಅಡಚಣೆಯನ್ನುಂಟುಮಾಡಬಹುದು.
ಸ್ಥಳೀಯ ಭಾಗಗಳಲ್ಲಿ ನೆಗಡಿಯಿಂದ ಊತ ಬರುವುದು, ಮೂಗಿನ ಒಳಗೆ ಅಥವಾ ಗಂಟಲೊಳಗೆ ಗೆಡ್ಡೆಗಳಾಗುವುದು ಮತ್ತು ಇತ್ಯಾದಿ. ಯಾವುದೇ ರೀತಿಯ ಗೆಡ್ಡೆ ಅಥವಾ ಬೆಳವಣಿಗೆಗಳು ಉಸಿರಾಟದ ಕ್ರಿಯೆಯನ್ನು ಅಡ್ಡಪಡಿಸುತ್ತಿದ್ದರೆ ಆಗ ಶಬ್ದ ಕೇಳಿಬರುತ್ತದೆ.
ಸ್ಥೂಲಕಾಯ ಇರುವವರಲ್ಲಿ ಉಸಿರಾಡುವ ಪದರದ ಒಳಗಡೆ ಕೊಬ್ಬು ಸೇರಿವುದರಿಂದ, ಉಸಿರಾಡುವ ಕೊಳವೆಗಳು ಕಿರಿದಾಗಿ ಕೂಡ ಅಡಚಣೆಯನ್ನುಂಟುಮಾಡುತ್ತದೆ. ಕೆಲವೊಮ್ಮೆ ಕುತ್ತಿಗೆ ಸುತ್ತ ಬಿಗಿ ಉಡುಪನ್ನು ಧರಿಸಿದಾಗಲೂ ಸಹ ಈ ರೀತಿಯಾಗಿ ಆಗಬಹುದು.
ಮದ್ಯ ಸೇವನೆ, ನಿದ್ದೆ ಬರುವ ಔಷಧಿಗಳು, ವೃದ್ಧಾಪ್ಯ ಮತ್ತು ಧೂಮಪಾನ ಮಾಡುವುದರಿಂದ ಸ್ನಾಯುಗಳ ಕಡಿಮೆ ಕಾರ್ಯನಿರ್ವಹಣೆ ಮತ್ತು ಆಯಾಸಕ್ಕೆ ಕಾರಣವಾಗುತ್ತದೆ.
ಗೊರಕೆಯ ಗಂಭೀರತೆ
ಹೌದು, ದಿನಂಪ್ರತಿ ಅಥವಾ ನಿಯಮಿತ ಗೊರಕೆಯು ಯಾವುದಾದರೂ ಕಾಯಿಲೆಯ ತೀವ್ರತೆಯಿಂದಾಗಿರಬಹುದು ಅಥವಾ ಭವಿಷ್ಯದಲ್ಲಿ ಆಗಬಹುದಾದ ತೀವ್ರವಾದ ಆರೋಗ್ಯ ಪರಿಸ್ಥಿತಿಗಳ ಸಂಭವನೀಯತೆಯನ್ನು ಹೆಚ್ಚಿಸಬಹುದು, ಇದರಿಂದ ಸರಿಯಾದ ಚಿಕಿತ್ಸೆಯ ಕಡೆಗೆ ಗಮನಹರಿಸಬೇಕು. ಕೆಲವೊಮ್ಮೆ ಭಾಗಶಃ ಮುಚ್ಚುವಿಕೆಯ ವಾಯುಮಾರ್ಗದಿಂದ ಸಂಪೂರ್ಣ ಉಸಿರುಕಟ್ಟುವಿಕೆಗೆ ಕಾರಣವಾಗಬಹುದು, ಇದು ದೇಹದಲ್ಲಿ ಕಡಿಮೆ ಆಮ್ಲಜನಕ ಮತ್ತು ಹೆಚ್ಚಿದ ಇಂಗಾಲದ ಡೈಆಕ್ಸೈಡ್ಗೆ ಕಾರಣವಾಗುತ್ತದೆ, ವ್ಯಕ್ತಿಯು ಉಸಿರುಗಟ್ಟುವಿಕೆಯಿಂದಾಗಿ ಎಚ್ಚರವಾಗಿಬಿಡುತ್ತಾನೆ.
ಹೆಚ್ಚು ಕಾಲ ಉಳಿಯುವ ಉಸಿರುಗಟ್ಟುವಿಕೆ, ಪುನರಾವರ್ತನೆಯನ್ನು ಹೆಚ್ಚು ಮಾಡಿ ಈ ಕೆಳಗಿನ ಸಮಸ್ಯೆಗಳಿಗೆ ಕಾರಣಮಾಡುತ್ತದೆ:
ಹೃದಯದ ಕಾರ್ಯಚಟುವಟಿಕೆಯಲ್ಲಿ ಸಮಸ್ಯೆಗಳಾಗುವುದು
ಅಧಿಕ ರಕ್ತದೊತ್ತಡ
ಆಗಾಗ್ಗೆ ಏಳುವುದು, ಪ್ರಕ್ಷುಬ್ಧ ನಿದ್ದೆ, ದಿನದ ಸಮಯದಲ್ಲಿ ತೀವ್ರ ನಿದ್ದೆ ಬರುವುದು, ಆಯಾಸ ಮತ್ತು ದೈಹಿಕ ಮತ್ತು ಮಾನಸಿಕವಾಗಿ ಆರಾಮಿಲ್ಲದಿರುವುದು.
ಒಟ್ಟಾರೆಯಾಗಿ ಹೇಳುವುದಾದರೆ ಅಬ್ಸ್ಟ್ರಕ್ಟಿವ್ ನಿದ್ರಾ ಹೀನತೆಯನ್ನು ಆದಷ್ಟು ಬೇಗ ಪತ್ತೆ ಮಾಡಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಬೇಕು.
ಗೊರಕೆಯ ನಿರ್ವಹಣೆ:
ಆತ್ಮೀಯರೇ ಹೆದರಬೇಡಿ, ಗೊರಕೆಗೆ ಕಾರಣವಾದ ಎಲ್ಲ ಕಾರಣಗಳನ್ನು ನಾವು ತಡೆಯಬಹುದು ಮತ್ತು ಇದನ್ನು ನಿಮ್ಮ ಸಂಗಾತಿ ಅಥವಾ ಮನೆಯವರ ಸಹಕಾರದಿಂದ ಸಾಧ್ಯವಿದೆ.
ನೀವು ಮಾಡಿದ ಸ್ವಲ್ಪ ತೂಕದ ಇಳಿಕೆಯ ಫಲಿತಾಂಶವೂ ನಿಮ್ಮನ್ನು ಆಶ್ಚರ್ಯಮಾಡಬಹುದು. ಹಾಗಾಗಿ ನೀವು ನಿಯಮಿತವಾದ ವ್ಯಾಯಾಮ, ವಾಕಿಂಗ್, ಈಜು, ಕ್ರೀಡೆ ಮತ್ತು ಕೋಪಗೊಂಡ ನಿಮ್ಮ ಸಂಗಾತಿಯೊಂದಿಗೆ ಕ್ಷಣ ಕಾಲ ನೃತ್ಯ ಮಾಡುವುದು ಸಹ ನಿಮಗೆ ಸಹಕಾರಿಯಾಗಬಹುದು.
ಸಾದ್ಯವಾದಷ್ಟು ಅಂಗಾತ ಮಲಗುವುದನ್ನು ಕಡಿಮೆ ಮಾಡಿ, ಒಂದು ಕಡೆ ತಿರುಗಿ ಮಲಗುವುದನ್ನು ರೂಢಿಸಿಕೊಳ್ಳಿ.
ಧೂಮಪಾನವನ್ನು ಬಿಡಿ ಮತ್ತು ಸಂಜೆಯ ಮದ್ಯ ಸೇವನೆಯನ್ನು ಬಿಡಿ.
ವ್ಯಾಯಾಮ ಮಾಡಲಿಕ್ಕಾಗದೆ ಇರುವ ನಮ್ಮ ಮನೆಯ ವೃದ್ಧರಿಗೆ ಒಂದು ಸಲಹೆಯೆಂದರೆ ನೀವು ಯೋಗ ಅಥವಾ ಉಸಿರಾಡುವ ವ್ಯಾಯಾಮಗಳನ್ನು ಮಾಡಬಹುದು.
ಸಾಮಾನ್ಯವಾಗಿ ಮೇಲೆ ಹೇಳಿದ ಕ್ರಮಗಳಿಂದ ನಿಮಗೆ ಒಳ್ಳೆಯ ನಿದ್ದೆ ಮತ್ತು ಸುಖಿ ಪರಿವಾರವನ್ನು ಹೊಂದಬಹುದಾಗಿದೆ. ಇದರಿಂದ ನೀವು ಸಂಪೂರ್ಣ ಗುಣಹೊಂದದಿದ್ದರು ಸಹ ನಿಮ್ಮ ಜೀವನದಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾತ್ರ ನೀವು ಖಂಡಿತವಾಗಿ ಕಾಣಬಹುದು
ಆದರೆ ಇದರಿಂದ ತೀವ್ರವಾದ ಆರೋಗ್ಯ, ಮಾನಸಿಕ ಮತ್ತು ವೈಯಕ್ತಿಕ ಪರಿಣಾಮಗಳನ್ನು ಎದುರಿಸುತ್ತಿರುವವರಿಗೆ ವೈದ್ಯಕೀಯ ಮೌಲ್ಯಮಾಪನ ಅಗತ್ಯವಾಗಿದ್ದು, ಭವಿಷ್ಯದ ಆರೋಗ್ಯದ ಅಪಾಯಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಜೊತೆಗೆ ಮನೆಯವರು ಮತ್ತು ಸಂಗಾತಿಯು ಸಹ ಅವರ ಕಷ್ಟವನ್ನು ಅರಿತು, ಅವರಿಗೆ ಆಸರೆಯಾಗಿರಿ, ದೂರಬೇಡಿ ಮತ್ತು ನಿರ್ಲಕ್ಷಿಸಬೇಡಿ.

Comments are closed.