ಮನೋರಂಜನೆ

ಬಿಜೆಪಿ ಸೇರಲಿರುವ ಮೆಗಾ ಸ್ಟಾರ್​?!

Pinterest LinkedIn Tumblr


ಟಾಲಿವುಡ್​ ಮೆಗಾ​ ಸ್ಟಾರ್​​​​, ಆಂಧ್ರ ಕಾಂಗ್ರೆಸ್​ನ ಹಿರಿಯ ನಾಯಕ ಚಿರಂಜೀವಿ ಬಿಜೆಪಿ ಸೇರ್ತಾರಾ..? ಇಂಥದ್ದೊಂದು ಚರ್ಚೆ ಆಂಧ್ರದಲ್ಲಿ ಶುರುವಾಗಿದೆ. ಇದಕ್ಕೆ ಪೂರಕವಾಗಿ ಕಳೆದ ರಾತ್ರಿ ಆಂಧ್ರ ಬಿಜೆಪಿ ನಾಯಕರು ಮೆಗಾಸ್ಟಾರ್​​​​ ಚಿರಂಜೀವಿ ಜತೆ ಈ ಸಂಬಂಧ ಮಹತ್ವದ ಮಾತುಕತೆ ನಡೆಸಿದ್ದಾರೆ.

ಚಿರಂಜೀವಿ ಬಿಜೆಪಿಗೆ ಬಂದರೆ ಆಂಧ್ರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ಥಾನ ಮತ್ತು ರಾಜ್ಯಸಭಾ ಸ್ಥಾನ ನೀಡೋ ಆಫರ್ ಅನ್ನು ಬಿಜೆಪಿ ನಾಯಕರು ನೀಡಿದ್ದಾರೆ. ಹೈಕಮಾಂಡ್ ನೀಡಿರುವ ಈ ಆಫರ್ ಕುರಿತು ಈಗಾಗಲೇ ರಾಜ್ಯ ನಾಯಕರು ಚಿರಂಜೀವಿಗೆ ತಲುಪಿಸಿದ್ದಾರೆ.

ಏಪ್ರಿಲ್ 2018ಕ್ಕೆ ಚಿರಂಜೀವಿ ರಾಜ್ಯಸಭೆ ಸದಸ್ಯತ್ವ ಅಂತ್ಯಗೊಂಡಿದ್ದು ಸಧ್ಯ ಚಿರಂಜೀವಿಗೆ ಯಾವುದೇ ರಾಜಕೀಯ ಅಧಿಕಾರವಿಲ್ಲ. ಪ್ರಜಾರಾಜ್ಯ ಸ್ಥಾಪಿಸಿ ಬಳಿಕ ಕಾಂಗ್ರೆಸ್​ನಲ್ಲಿ ವಿಲೀನ ಮಾಡಿದ್ದ ಮಾಜಿ ಕೇಂದ್ರ ಸಚಿವ ಚಿರಂಜೀವಿ ಬಿಜೆಪಿ ಪಾಲಾಗ್ತಾರಾ ಅನ್ನೋದನ್ನು ಕಾದು ನೋಡ್ಬೇಕಾಗಿದೆ. ಅಲ್ಲದೆ ಬಿಜೆಪಿ ಈಗಾಗಲೇ ಟಿಡಿಪಿಯ ನಾಲ್ವರು ರಾಜ್ಯ ಸಭೆ ಸದಸ್ಯರನ್ನು ಸೆಳೆದುಕೊಂಡು ಆಂಧ್ರದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳೋ ಕಾರ್ಯಕ್ಕೆ ಕೈ ಹಾಕಿದೆ.

Comments are closed.