ಮನೋರಂಜನೆ

ಕಿಸ್​ ಕೊಡುವುದರಲ್ಲಿ ಇಬ್ಬರಲ್ಲಿ ಯಾರು ಉತ್ತಮ: ಪರಿಣಿತಿ ಚೋಪ್ರಾ ಹೇಳಿದ್ದೇನು?

Pinterest LinkedIn Tumblr

ಮುಂಬೈ: ಬಾಲಿವುಡ್​ನ ಬೋಲ್ಡ್​ ನಟಿ ಹಾಗೂ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​ ಜೀವನ ಆಧಾರಿತ ಚಿತ್ರದಲ್ಲಿ ನೆಹ್ವಾಲ್​ ಪಾತ್ರಕ್ಕೆ ಬಣ್ಣ ಹಚ್ಚಿರುವ ಪರಿಣಿತಿ ಚೋಪ್ರಾ ತಮ್ಮ ಸಹನಟರಾದ ಅರ್ಜುನ್​ ಕಪೂರ್​ ಹಾಗೂ ಸಿದ್ಧಾರ್ಥ್​ ಮಲ್ಹೋತ್ರಾ ಇಬ್ಬರಲ್ಲಿ ಯಾರು ಉತ್ತಮ ಕಿಸ್ಸರ್​ ಎಂಬುದನ್ನು ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ನಟಿ ನೇಹಾ ಧೋಪಿಯಾ ನಡೆಸಿಕೊಡುವ ಬಿಎಫ್​ಎಫ್​ ವಿತ್​ ವೋಗ್​(BFFs with Vogue) ಎಂಬ ಚಾಟ್​ ಶೋನಲ್ಲಿ ನಟಿ ಪರಿಣಿತಿ ಚೋಪ್ರಾ ತಮ್ಮ ಸ್ನೇಹಿತೆ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಜತೆಯಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಪರಿಣಿತಿ ಇಂಡಸ್ಟ್ರಿಯಲ್ಲಿ ಒಬ್ಬ ನಟನೊಂದಿಗೆ ಡೇಟಿಂಗ್​ನಲ್ಲಿದ್ದರು ಎಂಬ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಾನಿಯಾ ಮಿರ್ಜಾ, ನಟನ ಹೆಸರನ್ನು ಮಾತ್ರ ಬಹಿರಂಗಪಡಿಸಲಿಲ್ಲ.

 

ಕಾರ್ಯಕ್ರಮದಲ್ಲಿ ಅರ್ಜುನ್​ ಕಪೂರ್​ ಮತ್ತು ಸಿದ್ಧಾರ್ಥ್​ ಮಲ್ಹೋತ್ರಾ ಇಬ್ಬರಲ್ಲಿ ಯಾರು ಉತ್ತಮ ಕಿಸ್ಸರ್​ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪರಿಣಿತಿ, ಅರ್ಜುನ್​ ಮತ್ತು ನಾನು ತುಂಬಾ ವಿಶೇಷ ಹಾಗೂ ವಿರಳವಾದ ಸಂಬಂಧವನ್ನು ಹೊಂದಿದ್ದೇವೆ. ನಾನು ಹೇಗಿರಬೇಕೆಂದುಕೊಂಡಿದ್ದೇನೆ ಆಗಿರಲು ಅರ್ಜುನ್​ ಸಹಕರಿಸುತ್ತಾರೆ. ಹೀಗಾಗಿ ಅರ್ಜುನ್​ ಮತ್ತು ಸಿದ್ಧಾರ್ಥ್​ ಇಬ್ಬರಲ್ಲಿ ನಾನು ಅರ್ಜುನ್​ ಹೆಸರನ್ನು ಹೇಳ ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಪರಿಣಿತಿ, ನಟ ಅರ್ಜುನ್​ ಜತೆ ನಮಸ್ತೆ ಇಂಗ್ಲೆಂಡ್​ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಬಳಿಕ ಯಾವ ಚಿತ್ರದಲ್ಲಿಯೂ ಅವರು ಒಂದಾಗಿಲ್ಲ. ಜಬಾರಿಯಾ ಜೋಡಿ ಎಂಬ ಚಿತ್ರದಲ್ಲಿ ಸಿದ್ಧಾರ್ಥ್​ ಜತೆ ನಟಿಸಿದ್ದು, ಆಗಸ್ಟ್​ 2 ಕ್ಕೆ ಚಿತ್ರ ತೆರೆ ಕಾಣಲಿದೆ.

Comments are closed.