
ಹಾಸನ: ಆ ಮಾರಗೌಡನಹಳ್ಳಿಯ ಕುಳ್ಳ ಇದ್ದಾನಲ್ಲ ಅವನು ಬಿಜೆಪಿಗೆ ವೋಟು ಹಾಕ್ತಾನೆ. ಆದರೆ, ಇಲ್ಲಿ ಕೆಲಸಕ್ಕಿದ್ದಾನೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಅವರು ಹೇಳಿದರು.
ಹಾಸನದಲ್ಲಿಂದು ಚೆಸ್ಕಾಂ ಮುಖ್ಯ ಕಾರ್ಯಪಾಲಕ ಎಂಜಿನಿಯರ್ ಕಚೇರಿಗೆ ಶಂಕುಸ್ಥಾಪನೆ ವೇಳೆ ಮಾತನಾಡಿದ ಅವರು, ನನ್ನ ಹತ್ರ ಕೆಲಸಕ್ಕೆ ಬರ್ತಾನೆ. ಆದರೆ, ಅವನು ವೋಟು ಹಾಕೋದು ಬಿಜೆಪಿಗೆ ಎಂದು ನಗುತ್ತಲೇ ತಮ್ಮ ಕ್ಷೇತ್ರದ ಮತದಾರನ ಬಗ್ಗೆ ಸಚಿವ ಹೆಚ್.ಡಿ ರೇವಣ್ಣ ಹಾಸ್ಯ ಚಟಾಕಿ ಹಾರಿಸಿದರು.
ಇನ್ನು ಆ ಮಾತನ್ನು ಕೇಳುತ್ತಿದ್ದಂತೆ ಪಕ್ಕದಲ್ಲಿದ್ದ ಲೈನ್ಮೆನ್ ನಾನು ಸತ್ತರೂ ಬಿಜೆಪಿಗೆ ಮತಹಾಕಲ್ಲಾ ಎಂದು ರೇವಣ್ಣ ಹೇಳಿಕೆಗೆ ಧ್ವನಿ ಸೇರಿದರು. ಮಾತು ಮುಂದುವರೆಸಿದ ರೇವಣ್ಣ, ನಾನು ಕಳೆದ 2006ರ ನಮ್ ಸರ್ಕಾರದಲ್ಲಿ ಲೈನ್ಮೆನ್ಗಳ ನೇಮಕಾತಿ ಮಾಡಿದ್ದೆ. ಯಡಿಯೂರಪ್ಪ ಮತ್ತು ಶೋಭಕ್ಕ ಇಬ್ಬರೂ ಸೇರಿ ಲೈನ್ಮೆನ್ ನೇಮಕಾತಿ ರದ್ದು ಮಾಡಿದರು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ನುಡಿದರು.
Comments are closed.