
ಇಂಗ್ಲೆಂಡ್: ಟೀಂ ಇಂಡಿಯಾ ಆರಂಭಿಕ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ಅವರು ತಮ್ಮ ಬೆರಳಿನ ಗಾಯದ ಸಮಸ್ಯೆಯಿಂದಾಗಿ ಐಸಿಸಿ ಕ್ರಿಕೆಟ್ ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಎರಡನೇ ಪಂದ್ಯದ ವೇಳೆ ಶಿಖರ್ ಧವನ್ ಬ್ಯಾಟ್ ಬೀಸುವಾಗ ಬಾಲ್ ಬೆರಳಿಗೆ ತಗುಲಿ ಗಾಯವಾಗಿತ್ತು. ಪರಿಣಾಮ ಅವರಿಗೆ ಮೂರು ವಾರಗಳ ಕಾಲ ವಿಶ್ರಾಂತಿ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದರು.
ಆದರೆ ಈಗ ಬೆರಳಿಗೆ ಗಾಯವಾಗಿರುವ ಸಮಸ್ಯೆ ಚೇತರಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗಬಹುದು ಎಂಬ ಕಾರಣಕ್ಕೆ ಅವರನ್ನು ಈ ಬಾರಿ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವ ವಿಷಯನ್ನು ಬಿಸಿಸಿಐ ಸ್ಪಷ್ಟಪಡಿಸಿದೆ.
ಸದ್ಯ ಧವನ್ ಸ್ಥಾನಕ್ಕೆ ಕೆ.ಎಲ್ ರಾಹುಲ್ ಅವರು ಆರಂಭಿಕ ಬ್ಯಾಟ್ಸ್ಮನ್ ಆಗಿ ಆಟ ಆಡಲಿದ್ದಾರೆ. ಅಷ್ಟೇ ಅಲ್ಲದೇ ಧವನ್ಗೆ ಗಾಯವಾದ ದಿನದಲ್ಲೇ ಬಿಸಿಸಿಐ ವಿಕೆಟ್ ಕೀಪರ್, ಎಡಗೈ ಬ್ಯಾಟ್ಮನ್ ರಿಷಬ್ ಪಂತ್ ಅವರನ್ನ ಅವಸರವಾಗಿ ಇಂಗ್ಲೆಂಡ್ ಕರೆಸಿಕೊಂಡಿತ್ತು.
ಮುಂದಿನ ಪಂದ್ಯಗಳಲ್ಲಿ ರಿಷಬ್ ಪಂತ್ ಅವರು ಕೂಡ ವಿಶ್ವಕಪ್ ಪಂದ್ಯದಲ್ಲಿ ಆಡುವ ಎಲ್ಲ ಲಕ್ಷಣಗಳು ಕಾಣುತ್ತಿದ್ದು ಸದ್ಯ ಜೂನ್ 16ರಂದು ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಪರ ನಾಲ್ಕನೇ ಕ್ರಮಾಂಕದಲ್ಲಿ ವಿಜಯ್ ಶಂಕರ್ ಅವರು ಆಟ ಆಡಿದ್ದರು.
ಜೂನ್ 22 ರಂದು ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡ 5 ಪಂದ್ಯವನ್ನು ಆಡಲಿದೆ.
Comments are closed.