ಅಂತರಾಷ್ಟ್ರೀಯ

ಪುತ್ರಿಯ ಜೀವ ಉಳಿಸಲು ಶಾರ್ಕ್​ ಜೊತೆ ಹೋರಾಡಿ ಗೆದ್ದ ವೀರ ತಂದೆ!!

Pinterest LinkedIn Tumblr


ಅಪ್ಪ ಮ್ಕಕಳ ಬಾಂಧವ್ಯ ಯಾವಾಗಲೂ ಬಣ್ಣಿಸಲಾಗದು, ಅದರಲ್ಲೂ ಮಕ್ಕಳಿಗೆ ಯಾವಾಗಲೂ ತನ್ನ ತಂದೆಯೇ ಮೊದಲ ಹೀರೋ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ತನ್ನ ತಂದೆಯ ಮೇಲಿನ ಪ್ರೀತಿ ಭಾವನೆ ಎಂದಿಗೂ ಹೇಳಲೂ ಪದಗಳಿಲ್ಲ.ಮಕ್ಕಳಿಗೆ ಅಪಾಯವಾದಾಗ ತಮ್ಮ ಪ್ರಾಣ ಪಣಕ್ಕಿಟ್ಟಾದರೂ ಮಗಳನ್ನು ಕಾಪಾಡುತ್ತಾರೆ. ಇದಕ್ಕೆ ನಾರ್ಥ್ ಕೆರೊಲಿನಾ ನಡೆದ ಒಂದು ಘಟನೆಯೇ ಉದಾಹರಣೆಯಾಗಿದೆ.

ಹೌದು ಅಮೆರಿಕಾದ ನಾರ್ಥ್ ಕೆರೊಲಿನಾದಲ್ಲಿ ತಂದೆಯೊಬ್ಬರು ಶಾರ್ಕ್ ಬಾಯಿಗೆ ತುತ್ತಾಗಬೇಕಿದ್ದ ಮಗಳನ್ನು ಉಳಿಸಿಕೊಳ್ಳಲು ತನ್ನ ಪ್ರಾಣವನ್ನು ಲೆಕ್ಕಿಸದೆ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ.

ಅಟ್ಲಾಂಟಿಕಾ ಸಾಗರದ ಬೀಚ್ ನಲ್ಲಿ ಮಗಳು ಪೈಗಿ ವಿಂಟರ್ ಹಾಗೂ ತಂದೆ ಚಾರ್ಲಿ ವಿಂಟರ್ ನಿಂತಿದ್ದ ವೇಳೆ ಬೃಹತ್ ಗಾತ್ರ ಶಾರ್ಕ್ ಪೈಗಿ ವಿಂಟರ್ ಮೇಲೆ ದಾಳಿ ಮಾಡಿದ್ದು, ಜೊತೆಗೆ ನೀರಿನಾಳಕ್ಕೆ ಆಕೆಯನ್ನು ಎಳೆದುಕೊಂಡು ಹೋಗಿದೆ. ಫೈರ್ ಫೈಟರ್ ಹಾಗೂ ಮಾಜಿ ಪ್ಯಾರಾ ಮೆಡಿಕ್ ಆದ ಚಾರ್ಲಿ ಅವರು ಕೂಡಲೇ ನೀರಿಗೆ ಧುಮುಕಿ ಶಾರ್ಕ್ ಮೂಗಿಗೆ ಬಲವಾಗಿ ಗುದ್ದುವ ಮೂಲಕ ಮಗಳನ್ನು ಕಾಪಾಡಿದ್ದಾರೆ. ಶಾರ್ಕ್ ಆಕೆಯ ಎಡಗಾಲನ್ನು ಕಚ್ಚಿ ತುಂಡಾಗಿಸಿದೆ. ಆದರೆ ತಂದೆ ಚಾರ್ಲಿ ಮಗಳ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತನ್ನ ಮಗಳನ್ನು ಬಿಡುವವರೆಗೂ ಕೂಡ ಬೃಹತ್ ಗಾತ್ರದ ಶಾರ್ಕ್ ಗೆ ಚಾರ್ಲಿ ವಿಂಟರ್ ಚೆನ್ನಾಗಿ ಗುದ್ದಿ . ಮಗಳನ್ನು ಬದುಕಿಸಿಕೊಂಡಿದ್ದಾರೆ. ಶಾರ್ಕ್​ ತನ್ನ ಮಗಳನ್ನು ಬಿಟ್ಟ ತಕ್ಷಣ ಮಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಆಕೆ ಇದೀಗಾ ಚೇತರಿಸಿಕೊಂಡಿದ್ದಾಳೆ.

ಏನೇ ಆಗಲಿ ನಾರ್ಥ್ ಕೆರೊಲಿನಾದಲ್ಲಿ ನಡೆದ ಈ ಘಟನೆಯಲ್ಲಿ ತಂದೆಯೇ ಮಕ್ಕಳ ಮೊದಲ ಹೀರೋ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ .

Comments are closed.