ಮನೋರಂಜನೆ

ಕೆಜಿಎಫ್-2 ನಲ್ಲಿ ಈ ಬಾಲಿವುಡ್ ನಟಿ

Pinterest LinkedIn Tumblr


ಅತ್ತ ಪ್ರಶಾಂತ್ ನೀಲ್ ಸಾರಥ್ಯದ ಕೆಜಿಎಫ್ ಚಾಪ್ಟರ್ _ 2 ಸೆಟ್ ಯಶ್​​​​​​​ ಆಗಮನಕ್ಕಾಗಿ ಕಾಯುತ್ತಿದೆ.. ಇತ್ತ ರಾಕಿ ಭಾಯ್ ಯಾವಾಗ ಕೆಜಿಎಫ್ ಸೆಟ್​​​​​ಗೆ ಹೋಗಿ ಕ್ಯಾಮೆರಾಗೆ ಪೋಸ್ ಕೊಡ್ತಾರೆ ಎಂದು ರಾಕಿಂಗ್ ಫ್ಯಾನ್ಸ್ ಕೂಡ ಕಾಯುತ್ತಿದ್ದಾರೆ.. ಈ ಕಾಯುವಿಗೆ ಕರಗಿ ಸಿಡಿಲ ಅಬ್ಬರವನ್ನು ತಡೆಯೋ , ಕುಸಿದ ಉಸಿರ ಕಾಯೋ ಸುಲ್ತಾನ, ನಾ ಬಂದೆ.. ನೀವೂ ರೆಡಿಯಾಗಿ ಎಂದಿದ್ದಾರೆ..! ಹಾಗಾದ್ರೆ ಯಾವಾಗ ದರ್ಶನ್ ಮೆಚ್ಚಿದ ಹೀರೋ ಕೆಜಿಎಫ್ ಅಖಾಡಕ್ಕೆ ಇಳಿಯೋದು ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ..

ಚಿತ್ರರಂಗದಲ್ಲಿ ಸಿನಿಮಾ ಶುರುವಾಗೋದು, ಸಿನಿಮಾ ರಿಲೀಸ್ ಆಗೋದು ಸುದ್ದಿಯಾದ್ರೆ ಈಗ ಹೀರೋ ಶೂಟಿಂಗ್ ಸೆಟ್​ಗೆ ಹೋಗುತ್ತಿರುವುದು ಸುದ್ದಿ.. ಅಷ್ಟರ ಮಟ್ಟಿಗೆ ಕೆಜಿಎಫ್ ಮೇಲೆ ಕನ್ನಡಿಗರ ನಿರೀಕ್ಷೆ ಇದೆ.. ಕನ್ನಡ ಚಿತ್ರರಂಗದ ಬಾವುಟವನ್ನು ದೇಶದ ಮುಗಿಲೆತ್ತರಕ್ಕೆ ಹಾರಿಸಿದ ಸಿನಿಮಾ ಕೆಜಿಎಫ್.. ಪಕ್ಕಾ ಪ್ಲಾನ್ ಮಾಡಿ ಶೂಟಿಂಗ್ ಅಡ್ಡಕ್ಕೆ ಧುಮುಕಿದ್ದಾರೆ ಡೈರೆಕ್ಟರ್ ಪ್ರಶಾಂತ್ ನೀಲ್.. ಈಗ ಕೆಜಿಎಫ್ ಡಾನ್ ಕ್ಯಾರೆಕ್ಟರ್ , ರಾಕಿ ಭಾಯ್ ಶೂಟಿಂಗ್ ಅಖಾಡಕ್ಕೆ ಇಳಿಯೋ ಡೇಟ್ ಕೂಡ ನಿಗದಿಯಾಗಿದೆ. ಆ ಶುಭ ದಿನವೇ ಜೂನ್ 6…

ಶೂಟಿಂಗ್ ಎಲ್ಲೆಲ್ಲಿ ನಡಿಯಲ್ಲಿದೆ ಅನ್ನೋ ವಿಚಾರವನ್ನು ಚಿತ್ರತಂಡ ಗೌಪ್ಯವಾಗಿ ಮೆಂಟೈನ್ ಮಾಡುತ್ತಿದೆ.. ಕೆಜಿಎಫ್ ಭಾಗ ಒಂದರ ಆಲ್ ಮೊಸ್ಟ್​​​​​​ ಆಲ್ ಶೂಟಿಂಗ್ ಕೋಲಾರದ ಕೆಜಿಎಫ್​​​ನಲ್ಲೇ ನಡೆದಿತ್ತು.. ಆದ್ರೇ ಈಗ ಬಂದಿರುವ ಮಾಹಿತಿ ಪ್ರಕಾರ ಮೈಸೂರಿನಲ್ಲಿ ಚಿತ್ರತಂಡ ಈಗಾಗಲೇ ಬಿಡು ಬಿಟ್ಟಿದ್ದು, ಮೈಸೂರಿನಿಂದಲೇ ಚಿತ್ರತಂಡವನ್ನು ಕೂಡಿಕೊಳ್ಳಲಿದ್ದಾರೆ ಮಾನ್​ಸ್ಟಾರ್ ರಾಕಿಭಾಯ್​​​..

ಕಳೆದ ಬಾರಿ ವಿಲನ್​ಗಳಿಂದ ಸಖತ್ ಸದ್ದು ಮಾಡಿತ್ತು ಕೆಜಿಎಫ್ ಚಾಪ್ಟರ್​-1.. ಅದರಂತೆ ಈಗ ಬಾಲಿವುಡ್​ ಮುನ್ನಾ ಭಾಯ್ ಸಂಜಯ್ ದತ್ತ್ ಹಾಗೂ ಹಾಟ್ ಆಂಡ್​ ಹಂಟಿಂಗ್ ನಟಿ ರವಿನಾ ಟಂಡನ್ ಕೆಜಿಎಫ್ ಬಳಗದಲ್ಲಿದ್ದಾರೆ..

ಹೊಂಬಾಳೆ ಫಿಲ್ಮ್ ನಡಿ ವಿಜಯ್ ಕಿರಂಗದೂರು ಅದ್ಧೂರಿಯಾಗಿ ಕೆಜಿಎಫ್-2 ನಿರ್ಮಾಣ ಮಾಡುತ್ತಿದ್ದು ಮುಂದಿನ ವರ್ಷದ ಕ್ರಿಸ್​ ಮಸ್​​ಗೆ ವಿಶ್ವದಾದ್ಯಂತ ಧಾಮ್ ಧೂಮ್ ಆಗಿ ಅನೇಕ ಅನೇಕ ಭಾಷೆಯಲ್ಲಿ ರಿಲೀಸ್ ಆಗಲಿದೆ.

Comments are closed.