ಕರ್ನಾಟಕ

ಒಂದೇ ಕುಟುಂಬದ ನಾಲ್ವರು ಎತ್ತಿನಗಾಡಿಯಿಂದ ಕೆರೆಗೆ ಬಿದ್ದು ಸಾವು

Pinterest LinkedIn Tumblr


ಹಾಸನ; ಎತ್ತಿನಗಾಡಿಯಲ್ಲಿ ಕೆರೆ ಬದಿಯಲ್ಲಿ ಚಲಿಸುತ್ತಿದ್ದಾಗ ಗಾಡಿ ಆಯತಪ್ಪಿ ಕೆರೆಗೆ ಜಾರಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಧಾರುಣ ಘಟನೆ ಹಾಸನದಲ್ಲಿ ನಡೆದಿದೆ.

ಮೃತ ದುರ್ದೈವಿಗಳನ್ನು ದಂಪತಿಗಳಾದ ರಾಜೇಗೌಡ(55) ಲಕ್ಷ್ಮೀ(50) ಹಾಗೂ ಅವರ ಸಂಬಂಧಿಕರ ಮಕ್ಕಳಾದ ರುಚಿತ (7) ದುಚಿತ (5) ಎಂದು ಗುರುತಿಸಲಾಗಿದೆ.

ರಾಜೇಗೌಡರ ಮನೆಯಲ್ಲಿದ್ದು ವ್ಯಾಸಾಂಗ ಮಾಡುತ್ತಿದ್ದ ಮೊಮ್ಮಕ್ಕಳು ತಾತ ಮತ್ತು ಅಜ್ಜಿಯ ಜೊತೆ ಜಮೀನಿನಲ್ಲಿ ಆಲೂಗೆಡ್ಡೆ ಬಿತ್ತನೆ ಮಾಡಲು ತೆರಳುತ್ತಿದ್ದ ವೇಳೆ ಈ ಅವಘಡ ಜರುಗಿದೆ.

ಅವಘಡ ಜರುಗುತ್ತಿದ್ದಂತೆ ನೂರಾರು ಸಂಖ್ಯೆಲ್ಲಿ ಗ್ರಾಮಸ್ಥರು ಕೆರೆಯ ಬಳಿ ಜಮಾಯಿಸಿ ಅವರನ್ನು ಕಾಪಾಡಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಿಲ್ಲ. ಎರಡು ಮೃತದೇಹಗಳು ಪತ್ತೆಯಾಗಿದ್ದು, ಉಳಿದೆರಡು ಮೃತ ದೇಹಗಳಿಗಾಗಿ ಅಗ್ನಿ ಶಾಮಕ ದಳ ಹಾಗೂ ಸ್ಥಳೀಯರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

Comments are closed.