ರಾಷ್ಟ್ರೀಯ

ಏಳನೇ ಹಂತದ ಲೋಕಸಭಾ ಚುನಾವಣೆ : ದೇಶದ ನಾನಾ ಭಾಗಗಳಲ್ಲಿ ಬಿರುಸಿನ ಮತದಾನ; ಯೋಗಿ, ರವಿಶಂಕರ್ ಪ್ರಸಾದ್ ಸೇರಿ ಅನೇಕರಿಂದ ಮತದಾನ

Pinterest LinkedIn Tumblr

ನವದೆಹಲಿ: ಏಳನೇ ಹಂತದ ಲೋಕಸಭಾ ಚುನಾವಣೆ ಮತದಾನ ಪ್ರಾರಂಭವಾಗಿದ್ದು ಬೆಳಗಿನ ಒಂಬತ್ತು ಗಂಟೆ ಒಳಗೆ ದೇಶದ ನಾನಾ ಭಾಗಗಳಲ್ಲಿ ಬಿರುಸಿನ ಮತದಾನ ನಡೆದಿದೆ.ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸೇರಿ ಅನೇಕರು ತಮ್ಮ ಹಕ್ಕು ಚಲಾಯಿಸಿದ್ದಾರೆ.

9 ಗಂಟೆಯವರೆಗೆ ದಾಖಲಾದ ಮತದಾನ ಪ್ರಮಾಣದಂತೆ ಬಿಹಾರದಲ್ಲಿ ಶೇ.-10.65, ಹಿಮಾಚಲ ಪ್ರದೇಶ ಶೇ. 0.87, ಮಧ್ಯಪ್ರದೇಶ ಶೇ. 7.16, ಪಂಜಾಬ್ ಶೇ. 4.64, ಉತ್ತರ ಪ್ರದೇಶ ಶೇ. -5.97ಪಶ್ಚಿಮ ಬಂಗಾಳ ಶೇ.10.54,, ಜಾರ್ಖಂಡ್ ಶೇ.13.19, ಚಂಡೀಗರ್ ಶೇ. 10.40 ಮತದಾನವಾಗಿದೆ.

ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ಪಟ್ನಾ ಮಹಿಳಾ ಕಾಲೇಜಿನ ಮತಗಟ್ಟೆ ಸಂಖ್ಯೆ 77ರಲ್ಲಿ ಮತದಾನ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ ಮತ್ತು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಮತ ಚಲಾಯಿಸಿದ್ದಾರೆ. ದಕ್ಷಿಣ ಕೊಲ್ಕತ್ತಾ ಪಾರ್ಲಿಮೆಂಟರಿ ಕ್ಷೇತ್ರದ ಮತಗಟ್ಟೆ 208ರಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ದಕ್ಷಿಣ ಕೊಲ್ಕತ್ತಾದ ಸಂಸತ್ ಕ್ಷೇತ್ರದಿಂದ ಬಿಜೆಪಿ ಲೋಕಸಭಾ ಅಭ್ಯರ್ಥಿ ಸಿ.ಕೆ. ಬೋಸ್ ಅವರು ಕೋಲ್ಕತಾದ ಸಿಟಿ ಕಾಲೇಜಿನಲ್ಲಿ ಮತದಾನ ಮಾಡಿದರೆ ಜಾಧವ್ ಪುರದಲ್ಲಿ ಕೋಲ್ಕತ್ತಾ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಹುಲ್ ಸಿನ್ಹಾ ಹಕ್ಕು ಚಲಾಯಿಸಿದ್ದಾರೆ.

ಜಲಂಧರ್ ನ ಗರ್ಹಿ ಗ್ರಾಮದಲ್ಲಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್ ಪುರದ ಮತಗಟೆ ಸಂಖ್ಯೆ 246ರಲ್ಲಿ ಮತ ಚಲಾಯಿಸಿದ್ದಾರೆ.

ಚಿಂಚೋಳಿ-ಕುಂದಗೋಳ ಬಿರುಸಿನ ಮತದಾನ
ಚಿಂಚೋಳಿ ಕುಂದಗೋಳದಲ್ಲಿ ಬೆಳಗಿನ 9 ಗಂಟೆ ವರೆಗೆ ಬಿರುಸಿನ ಮತದಾನವಾಗಿದೆ. ಚಿಂಚೋಳಿಯಲ್ಲಿ ಶೇ. 7.88 ಕುಂದಗೋಳದಲ್ಲಿ ಶೇ. 9.59ರಷ್ಟು ಮತ ಚಲಾವಣೆಯಾಗಿದೆ.

Comments are closed.