ರಾಷ್ಟ್ರೀಯ

56 ರೂ.ಗೆ ಕಿತ್ತಾಡಿದ ಆಂಧ್ರಪ್ರದೇಶದ ಸಚಿವನ ಹೆಂಡತಿ!

Pinterest LinkedIn Tumblr


ಆಂಧ್ರಪ್ರದೇಶ: ಆಂಧ್ರಪ್ರದೇಶದ ಮಂತ್ರಿಯ ಪತ್ನಿಯೊಬ್ಬರು ಚಿಲ್ಲರೆ ವಿಷಯಕ್ಕಾಗಿ ಟೋಲ್​ ಪ್ಲಾಜ್​ ಬಳಿ ಕಿತ್ತಾಡಿದ ಘಟನೆ ತೆಲಂಗಾಣದ ನಾಗ್ಲೊಂಡಾ ಜಿಲ್ಲೆಯಯಲ್ಲಿ ನಡೆದಿದೆ.

ಹೈದ್ರಾಬಾದ್-ಗುಂಟೂರ ಹೈವೇನಲ್ಲಿ ಹೊರಟಿದ್ದ ಆಂಧ್ರಪ್ರದೇಶದ ನಾಗರಿಕ ಸರಬರಾಜು ಸಚಿವ ಪ್ರತಿಪಾಟಿ ಪುಲ್ಲಾ ರಾವ್ ಪತ್ನಿ ಪಿ ವೆಂಕಟ ಕುಮಾರಿಗೆ ಟೋಲ್​ನವರು 56 ರೂಪಾಯಿ ನೀಡುವಂತೆ ಕೇಳಿದ್ದಾರೆ. ನಾನು ಮಿನಿಸ್ಟರ್ ಹೆಂಡತಿ..ನನಗೆ ದುಡ್ಡು ಕೇಳ್ತಿಯಾ.. ಫ್ರೀಯಾಗಿ ಬಿಡು ಅಂತ ಟೋಲ್ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಸದ್ಯ ಮಿನಿಸ್ಟರ್ ಹೆಂಡತಿ ಹೀಗೆ 56 ರೂಪಾಯಿಗಾಗಿ ಬೀದಿಯಲ್ಲಿ ಜಗಳಕ್ಕೆ ನಿಂತ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್​ ಆಗಿದ್ದು. ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.