ಮುಂಬೈ

ನೋ ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ಮಹಿಳಾ ಕಾನ್‌ಸ್ಟೇಬಲ್ ಮೇಲೆ ಲೈಂಗಿಕ ಕಿರುಕುಳ! ಮುಂದೆ ಮಹಿಳಾ ಕಾನ್‌ಸ್ಟೇಬಲ್ ಮಾಡಿದ್ದೇನು…?

Pinterest LinkedIn Tumblr

ಮುಂಬೈ: ನೋ ಪಾರ್ಕಿಂಗ್ ನಲ್ಲಿ ಬೈಕ್ ನಲ್ಲಿದ್ದ ಸವಾರನಿಗೆ ಬೈಕ್ ತೆಗೆಯಿರಿ ಎಂದು ಹೇಳಿದ್ದಕ್ಕೆ ಲೇಡಿ ಕಾನ್‌ಸ್ಟೇಬಲ್ ಮೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಸವಾರನನ್ನು ಬಂಧಿಸುವಲ್ಲಿ ಕಾನ್‌ಸ್ಟೇಬಲ್ ಯಶಸ್ವಿಯಾಗಿದ್ದಾರೆ.

ಮುಂಬೈನ ಅಗ್ರಿಪದದಲ್ಲಿ ಶುಕ್ರವಾರ ರಾತ್ರಿ 7 ಗಂಟೆ ಸುಮಾರಿನಲ್ಲಿ 28 ವರ್ಷದ ಬೈಕ್ ಸವಾರ ಕೃಷ್ಣ ಮೇಸ್ಕರ್ ನೋ ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿದ್ದ. ಅದನ್ನು ಕಂಡ ಕಾನ್‌ಸ್ಟೇಬಲ್ ಅನ್ನು ತೆಗೆಯುವಂತೆ ಸೂಚಿಸಿದ್ದಾರೆ. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಈ ವೇಳೆ ಗರಂ ಆದ ಬೈಕ್ ಸವಾರ ಕಾನ್‌ಸ್ಟೇಬಲ್ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ನಂತರ ಬೈಕ್ ಅನ್ನು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.

ಕೂಡಲೇ ಲೇಡಿ ಕಾನ್‌ಸ್ಟೇಬಲ್ ಮುಂದಿನ ಸಿಗ್ನಲ್ ನಲ್ಲಿದ್ದ ಪೊಲೀಸರಿಗೆ ಬೈಕ್ ನಂಬರ್ ನೀಡಿ ಬಂಧಿಸುವಂತೆ ಸೂಚಿಸಿದ್ದರು. ಅದರಂತೆ ಮುಂದಿನ ಸಿಗ್ನಲ್ ನಲ್ಲಿ ನಿಂತಿದ್ದ ಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ.

ಈತನ ವಿರುದ್ಧ ಲೈಂಗಿಕ ಕಿರುಕುಳ, ಕರ್ತವ್ಯ ನಿರತ ಕಾನ್‌ಸ್ಟೇಬಲ್ಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಮೇಲೆ ಪ್ರಕರಣ ದಾಖಲಿಸಲಾಗಿದೆ.

Comments are closed.