ರಾಷ್ಟ್ರೀಯ

ನೀವು ಮದುವೆ ಮನೆಯಲ್ಲಿ ಈ ರೀತಿಯ ‘ನಾಗಿನ್‌ ಡ್ಯಾನ್ಸ್‌’ ನೋಡಿರಲಿಕ್ಕಿಲ್ಲ ! ಸಕತ್ ವೈರಲ್

Pinterest LinkedIn Tumblr

ಬಹುತೇಕ ಸಾಂಪ್ರದಾಯಿಕ ಭಾರತೀಯ ಮದುವೆಗಳಲ್ಲಿ ಮದುವೆ ಗಂಡಿನ ಮೆರವಣಿಗೆ ಹಾಗೂ ಭವ್ಯ ಪ್ರವೇಶ ಬಹಳ ಮುಖ್ಯವಾದುದು. ಮದುವೆ ನಡೆಯುವ ಸ್ಥಳಕ್ಕೆ ವರ ಎಂಟ್ರಿ ಕೊಡುವುದು, ಗಮನ ಎಲ್ಲ ಮದುವೆ ಗಂಡಿನ ಮೇಲೆ ಇರುತ್ತದೆ.

ಆದರೆ, ಇತ್ತೀಚೆಗೆ ನಡೆದ ಭಾರತೀಯ ಮದುವೆಯೊಂದರಲ್ಲಿ ಮದುವೆ ಗಂಡಿಗಿಂತ ಆ ಕುದುರೆ ಮೇಲೆ ಕೂತಿದ್ದ ಮತ್ತೊಬ್ಬ ವ್ಯಕ್ತಿಯೇ ಹೆಚ್ಚು ಗಮನ ಸೆಳೆದಿದ್ದಾರೆ. ಆ ವ್ಯಕ್ತಿ ಕುದುರೆ ಮೇಲೆ ಕೂತುಕೊಂಡೇ ನಾಗಿನ್‌ ಡ್ಯಾನ್ಸ್ ಮಾಡಿದ್ದು, ಆತನ ಡ್ಯಾನ್ಸ್‌ ಸ್ಟೆಪ್ಸ್‌ ಅನ್ನು ಮದುವೆಗೆ ಬಂದಿದ್ದ ಅನೇಕ ಅತಿಥಿಗಳು ಮೆಚ್ಚಿಕೊಂಡು ನೋಡುತ್ತಿದ್ದರು. ಇದರಿಂದ ಆತನ ಹಿಂದಿದ್ದ ಮದುವೆ ಗಂಡನ್ನೇ ಹಲವರು ಮರೆತಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲೂ ಸದ್ದು ಮಾಡುತ್ತಿದ್ದು, ಹಲವರು ಆತನ ಡ್ಯಾನ್ಸ್ ಅನ್ನು ಮೆಚ್ಚಿಕೊಂಡಿದ್ದರೆ, ಇನ್ನೂ ಹಲವು ಟ್ವೀಟಿಗರು ಟ್ರೋಲ್‌ ಮಾಡುತ್ತಿದ್ದಾರೆ. ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಈ ವೀಡಿಯೋ ಶೇರ್‌ ಮಾಡಿದ್ದು, ಇದು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಹಲವರು ಇದನ್ನು ಅನಕೋಂಡಾ ಡ್ಯಾನ್ಸ್ ಎಂದು ಸಹ ಹೆಸರು ನೀಡಿದ್ದಾರೆ.

Comments are closed.