
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ನಾಲ್ಕು ದಶಕಗಳಿಂದ ಕಾರ್ಯೊನ್ಮುಖವಾಗಿರುವ ಯು.ಎ.ಇ. ಬಂಟ್ಸ್ 45ನೇ ವಾರ್ಷಿಕ ಸ್ನೇಹಮಿಲನ ಹಾಗೂ ಬಂಟ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭವು 2019 ಮೇ 3 ರ ಶುಕ್ರವಾರದಂದು ಮಧ್ಯಾಹ್ನ 2 ಗಂಟೆಯಿಂದ 11.೦೦ ವರಗೆ ದುಬಾಯಿ ಊದ್ ಮೆಹತಾ ರಸ್ತೆಯಲ್ಲಿರುವ ಇಂಡಿಯನ್ ಹೈಸ್ಕೂಲ್ ನ ಶೇಖ್ ರಾಶೀದ್ ಸಭಾಂಗಣದಲ್ಲಿ ನಡೆಯಲಿದೆ.
ಸಮಾರಂಭದ ಉದ್ಘಾಟನೆಯನ್ನು ಯು.ಎ.ಇ.ಯ ಹಿರಿಯ ಉಧ್ಯಮಿ ಹಾಗೂ ಕರ್ನಾಟಕಪರ ಸಂಘಟನೆಗಳ ಮಹಾಪೋಷಕರು ಡಾ| ಬಿ. ಆರ್. ಶೆಟ್ಟಿಯವರು ನೆರವೇರಿಸಿ ಕೊಡಲಿದ್ದಾರೆ. ಮುಖ್ಯ ಅತಿಥಿಯಾಗಿ ಅಲ್ ಕಾರ್ಗೊ ಲಾಜಿಸ್ಟಿಕ್ ಗ್ಲೋಬಲ್ ಸಿ.ಇ.ಒ. ಡಾ| ಶಶಿಕಿರಣ್ ಶೆಟ್ಟಿಯವರು, ಮತ್ತು ಗೌರವ ಅತಿಥಿಯಾಗಿ ಕರ್ನಾಟಕ ಚಂದನವನದ ನಿರ್ಮಾಪಕರು, ಸಾಹಿತಿ ಹಾಗು ನಾಯಕ ನಟರಾದ ಶ್ರೀ ರಿಶಬ್ ಶೆಟ್ಟಿಯವರು ಆಗಮಿಸಲಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಸಮಾವೇಶ ಗೊಳ್ಳಲಿರುವ ಬಂಟ ಬಾಂಧವರು ಹಾಗೂ ಆಹ್ವಾನಿತ ಅತಿಥಿಗಳ ಸಮ್ಮುಖದಲ್ಲಿ ಯು.ಎ.ಇ. ಬಂಟ್ಸ್ 2018-19ನೇ ಸಾಲಿನ ಪ್ರತಿಷ್ಠಿತ ” ಬಂಟ ವಿಭೂಷಣ ಪ್ರಶಸ್ತಿಯನ್ನು” ಪ್ರಖ್ಯಾತ ಸಾಹಿತಿ, ಸಂಶೋಧಕಿ, ಸಮಾಜ ಸೇವಕಿ ಡಾ| ಇಂದಿರಾ ಹೆಗ್ಡೆಯವರಿಗೆ ಪ್ರದಾನಿಸಲಾಗುವುದು.











ಡಾ| ಇಂದಿರಾ ಹೆಗ್ಡೆಯವರ ಹೆಜ್ಜೆ ಗುರುತುಗಳು…
ಕನ್ನಡ ಮತ್ತು ತುಳು ಭಾಷಾ ಸಾಹಿತಿ, ಉಪನ್ಯಾಸ ಸಂಶೋಧನೆ ಹಾಗೂ ಸಮಾಜ ಸೇವೆ, ಸಂಘಟನೆಗಳಲ್ಲಿ ಸದಾ ಸಕ್ರಿಯಾವಾಗಿರುವ ಪ್ರತಿಭಾವಂತರು ಡಾ| ಇಂದಿರಾ ಹೆಗ್ಡೆಯವರು.
ಕರ್ನಾಟಕ ಕಡಲ ತೀರದ ಮಂಗಳೂರು ತಾಲೂಕಿನ ಯಳತ್ತೂರು ಗುತ್ತು ಶ್ರೀಮತಿ ಸಿಂಧೂ ಶೆಟ್ಟಿ ಹಾಗೂ ಪಳ್ಳಿ ದಿಗಂಬ ಬೆಟ್ಟು ಶ್ರೀ ರಾಜು ದಂಪತಿಗಳ ಮಗಳಾಗಿ 1949 ಮಾರ್ಚ್ 14 ರಂದು ಜನಿಸಿ, ಉತ್ತಮ ಪರಿಸರದಲ್ಲಿ ಬೆಳೆದು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿ ಮುಗಿಸಿ ನಂತರದ ಉನ್ನತ ವ್ಯಾಸಂಗವನ್ನು ಮೈಸೂರಿನ ವಿಶ್ವ ವಿದ್ಯಾಲಯದಲ್ಲಿ ಬಿ. ಎ. ಪದವಿ ಹಾಗೂ ಮಾನಸಗಂಗೋತ್ರಿಯಲ್ಲಿ ಎಂ.ಎ. ಸ್ನಾತಕೋತರ ಪದವಿಯನ್ನು ಪಡೆದಿದ್ದಾರೆ.
ಪೊಳಲಿ ಅಮ್ಮುಂಜೆ ಗುತ್ತು ಸೀನಪ್ಪ ಹೆಗ್ಡೆಯವರ ಮಗ ಶ್ರೀ ಸೀತಾರಾಂ ರವರನ್ನು ಬಾಳಾ ಸಂಗಾತಿಯನ್ನಾಗಿ ಪಡೆದಿರುವ ಇವರಿಗೆ ಎರಡು ಮಕ್ಕಳು, ಪುತ್ರಿ ಸರಿತಾ ಪುತ್ರ ಶರತ್. ಬೆಂಗಳೂರು ಬಂಟರ ಸಂಘದ ಕಾರ್ಯದರ್ಶಿ ಹಾಗೂ ಬೆಂಗಳೂರು ತುಳು ಕೂಟದ ಅಧ್ಯಕ್ಷರಾಗಿದ್ದ ತನ್ನ ಪತಿಯವರ ಸಮಾಜ ಸೇವೆ, ಸಂಘಟನಾ ಚತುತರೆಯನ್ನು ತಾವು ಸಹ ಮೈಗೂಡಿಸಿಕೊಂಡು ಮುನ್ನಡೆಯಲು ಸಹಕಾರಿಯಾಯಿತು.
ತಮ್ಮ 33ನೇ ವಯಸ್ಸಿನಲ್ಲಿ ಸಾಹಿತ್ಯ ಲೋಕವನ್ನು ಪ್ರವೇಶಿಸಿದ ಡಾ| ಇಂದಿರಾ ಹೆಗ್ಡೆಯವರು ಮೂರು ಕಥಾ ಸಂಕಲನ, ನಾಲ್ಕು ಕಾದಂಬರಿ, ಒಂದು ಕವನ ಸಂಕಲನ ಇವರ ಪ್ರಕಟಿತ ಕೃತಿಗಳು. “ಗುತ್ತಿನಿಂದ ಸೈನಿಕ ಜಗತ್ತಿಗೆ” ಕೃತಿ, ಸೈನಿಕ ಜೀವನದ ಅನುಭವ ಕಥನ. ’ಬದಿ’ ಜನಪ್ರಿಯ ಕಾದಂಬರಿ, “ಬಂಟರು” ಒಂದು ಸಮಾಜೋ-ಸಾಂಸ್ಕೃತಿಕ ಅಧ್ಯಯನ’ “ನಿಬಂದ” ಪ್ರಬಂಧಕ್ಕೆ ಡಾಕ್ಟರೇಟ್ ಗೌರವ.








ತುಳುವಿನಲ್ಲೂ ಕೃತಿಗಳ ಪ್ರಕಟ, ಪ್ರವಾಸ ನೆಚ್ಚಿನ ಹವ್ಯಾಸ.ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿ, ಉಪಾದ್ಯಕ್ಷೆಯಾಗಿ ಸಂಘಟನೆ, ಸಮಾಜ ಸೇವೆಯಲ್ಲಿ ನಿರತರು. ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಜಾನಪದ ಅಕಾಡೆಮಿಯಿಂದ “ಜನಪದ ತಜ್ಞೆ” ಪ್ರಶಸ್ತಿ ಹಾಗೂ ಇನ್ನಿತರ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಗೌರವಗಳು.ಇಂದಿರಾ ಹೆಗ್ಗಡೆಯವರು ವನಿತಾ, ಕಸ್ತೂರಿ, ಸುಧಾ, ತರಂಗ, ಉದಯವಾಣಿ, ಪ್ರಜಾಮತ, ತುಷಾರ, ಮಯೂರ ಪ್ರಜಾವಾಣಿ, ಮುಂತಾದ ಪತ್ರಿಕೆಗಳಿಗೆ ಸಣ್ಣ ಕಥೆಗಳನ್ನು ಬರೆಯುವ ಮೂಲಕ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದವರು. ಇವರ ಬದಿ ಮತ್ತು ಮಂಥನ ಎನ್ನುವ ಎರಡು ಕಾದಂಬರಿಗಳೂ ಸುಧಾ ಮತ್ತು ಪ್ರಜಾಮತದಲ್ಲಿ ಧಾರವಾಹಿಯಾಗಿ ಪ್ರಕಟವಾಗಿವೆ.
ವೈಚಾರಿಕತೆ ಇವರ ಬರವಣಿಗೆಯಲ್ಲಿ ಎದ್ದು ಕಾಣುತ್ತದೆ. ಇವರು ಮೂರು ಕಥಾಸಂಕಲನಗಳನ್ನು, ಬದಿ ಮುಂತಾಧ ನಾಲ್ಕು ಕಾದಂಬರಿಗಳನ್ನು ಒಂದು ಕವನ ಸಂಕಲನವನ್ನು ಎರಡು ಜೀವನ ಚರಿತ್ರೆಗಳನ್ನು ಹೊರತಂದಿದ್ದಾರೆ. ನವ ಕರ್ನಾಟಕ ಪ್ರಕಾಶನ ಹೊರ ತಂದ ‘ಗುತ್ತಿನಿಂದ ಸೈ£ಕ ಜಗತ್ತಿಗೆ’ ಎಂಬ ಕೃತಿ ಸೈನಿಕ ಜೀವನ ಅನುಭವ ಕಥನ. ಪತಿ ಎಸ್ ಆರ್ ಹೆಗ್ಗೆಯವರೊಂದಿಗೆ ಸೇರಿ ರಚಿಸಿದ ಸೈನಿಕ ಜೀವನದ ಬಗೆಗಿನ ವಿಶಿಷ್ಠ ಕೃತಿ. ಇದು 2016ರಲ್ಲಿ ಮರುಮುದ್ರಣವಾಗಿದೆ. ಮಕ್ಕಳಿಗಾಗಿ ಬರೆದ ನವ ಸರ್ ಎಂ. ವಿಶ್ವೇಶ್ವರಯ್ಯನವರ ಜೀವನಚರಿತ್ರೆಯು ನವಕರ್ನಾಟಕ ಪ್ರಕಾಶನದ ಮಾಲಿಕೆಯಲ್ಲಿ 2016ರಲ್ಲಿ ಹೊರಬಂದಿದೆ. ಅದೇ ವರುಷ ಮರು ಮುದ್ರಣವಾಗಿದೆ. 2017ರಲ್ಲಿ ಮೂರನೆಯ ಮುದ್ರಣವಾಗಿದೆ.












ಚಿದಾನಂದ ಮೂರ್ತಿಯವರ ಸಲಹೆಯಂತೆ ಕ್ಷೇತ್ರ ಕಾರ್ಯ ಮೂಲಕ ಇವರು ಶೋಧಿಸಿ ರಚಿಸಿದ ಇವರ ಮೊದಲ ಸಂಶೋಧನಾ ಬರಹ “ಬಂಟರು ಒಂದು ಸಮಾಜೋ ಸಾಂಸ್ಕøತಿಕ ಅಧ್ಯಯನ’ ಇವರಿಗೆ ಬಹಳ ಹೆಸರು ತಂದುಕೊಟ್ಟ ಕೃತಿ. 2004 ಬೆಳಕುಕಂಡ ಈ ಕೃತಿಯನ್ನು ಇದನ್ನು ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ. 2009ರಲ್ಲಿ ಇದು ದ್ವಿತೀಯ ಮುದ್ರಣ ಕಂಡಿದೆ. ಈ ಕೃತಿಯ ಆಂಗ್ಲ ಅನುವಾದವನ್ನು ಕರ್ನಾಟಕ ಸರಕಾರದ ಕುವೆಂಪು ಭಾಷಾ ಪ್ರಾಧಿಕಾರವು 2014ರಲ್ಲಿ ಪ್ರಕಟಿಸಿದೆ. ಈ ವಿóಶಿಷ್ಟ ಕೃತಿ ಇವರಿಗೆ “ಸಂಶೋಧಕಿ” ಎಂಬ ಕೀರ್ತಿ ತಂದಿದೆ ಹಾಗೂ ಇವರನ್ನು ವಿದ್ವಾಂಸರ ಸಾಲಲ್ಲಿ ನಿಲ್ಲಿಸಿದೆ. ಈ ಕೃತಿಯನ್ನು ಓದಿ
“ಅಮೃತ ಸೋಮೇಶ್ವರರಂತಹ ಹಿರಿಯರು “ಒಂದು ಸಂಸ್ಥೆ ಮಾಡಬಹುದಾದ ಕೆಲಸವನ್ನು ಒಬ್ಬರೇ ಯಶಸ್ವಿಯಾಗಿ ನಿರ್ವಹಿಸಿದ್ದೀರಿ. ನೀವು ಮಾಡಿದ ಕ್ಷೇತ್ರಕಾರ್ಯ, ಸಂಗ್ರಹಿಸಿದ ಮಾಹಿತಿ ಅಪಾರ. ಸಾಮಾನ್ಯರಿಗೆ ಇಷ್ಟು ಪರಿಶ್ರಮ ಪಡಲು ಸಾಧ್ಯವಿಲ್ಲ. ಇಷ್ಟು ದೊಡ್ಡ ಕೆಲಸ ಮಾಡಿದ ತಮ್ಮನ್ನು ಅಭಿನಂದಿಸುವುದು ಅವಶ್ಯ” ಎಂದು ಬೆನ್ನು ತಟ್ಟಿದ್ದಾರೆ.














ಅಕಾಡೆಮಿಕ್ ವಲಯದಲ್ಲಿ ಅತ್ಯಂತ ಉನ್ನತ ಗೌರವದ ಪದವಿಯಲ್ಲಿದ್ದ ಡಾ|| ಬಿ.ಎ. ವಿವೇಕ ರೈಯವರು ವಿಚಾರ ಸಂಕಿರಣವೊಂದರಲ್ಲಿ ಮೆಚ್ಚುಗೆಯ ನುಡಿಗಳನ್ನು ನುಡಿಯುತ್ತಾರೆ. “ಇಡೀ ಕರ್ನಾಟಕದ ಸಂಸ್ಕøತಿಯ ಅಧ್ಯಯನದಲ್ಲಿ ಈ ಗ್ರಂಥದ ಮಹತ್ವ ಬಹಳ ಮಹತ್ತರವಾದುದು. ಇತಿಹಾಸಕ್ಕೆ ಸಂದು ಹೋದ ಸಂಸ್ಕøತಿಯ ಒಳಗೆ ಇರುವಂತಹ ಅನೇಕ ವೈರುಧ್ಯಗಳನ್ನು ಮತ್ತು ಅನೇಕ ಸೃಜನಶೀಲತೆಯ ಅಂಶಗಳನ್ನು ಗುರುತಿಸುವುದಕ್ಕೆ ಈ ಗ್ರಂಥ ಮುಖ್ಯವಾಗುತ್ತದೆ. ನಾನಂತೂ ಬಹಳ ಸಂತೋಷಪಟ್ಟು ತೃಪ್ತಿ ಪಟ್ಟ ಮತ್ತು ಅನೇಕ ಬಾರಿ ನಾವು ಯಾವುದೇ ವಿಶ್ವ ವಿದ್ಯಾಲಯ ಮಾಡಲಾಗಲಿಲ್ಲವಲ್ಲ ಎಂದು ನಾಚಿಕೆ ಪಟ್ಟ ಗ್ರಂಥ ಇದು. ಕರ್ನಾಟಕದ ಸಂಸ್ಕøತಿಯನ್ನು ಅಧ್ಯಯನ ಮಾಡುವವರು ಗೊತ್ತಿಲ್ಲದವರು ಹೊರಗಿನವರು ಈ ಗ್ರಂಥವನ್ನು ಓದಬೇಕು. ತಮ್ಮ ಸಂಸ್ಕøತಿಯೊಂದಿಗೆ ಹೋಲಿಸಬೇಕು ಮತ್ತು ಕರ್ನಾಟಕದ ಏಕೀಕರಣ ದೃಷ್ಟಿಯಿಂದ ಈ ಗ್ರಂಥ ಬಹಳ ಮಹತ್ತ್ವವಾದುದು”
ಹೀಗೆ ಪಂಡಿತ -ಪಾಮರರಿಂದ ಮೆಚ್ಚುಗೆ ಪಡೆದ ಸಂಶೋಧನಾ ಕೃತಿಗಳು ತೀರಾ ಅಪರೂಪ. ಅಂತಹ ವಿಶಿಷ್ಟ ಕೃತಿಯಾಗಿ ಹಲವು ಚರ್ಚೆಗಳನ್ನು ಸಂಶೋಧನೆಗೆ ಆಕರಗಳನ್ನು ಹುಟ್ಟು ಹಾಕಿದ ಕೃತಿ ತಾವು ಬಯಸಿದ್ದರೆ ಈ ಕೃತಿಯಿಂದ ಪಿ.ಹೆಚ್.ಡಿ ಪಡೆಯಬಹುದಿತ್ತು. ಸಮುದಾಯದ ಬಗೆಗಿನ ತನ್ನ ಕುತೂಹಲ ಅಧ್ಯಯನದ ರೂಪುರೇಷೆಗಳನ್ನು ಪಡೆಯುತ್ತಾ ಇನ್ನಷ್ಟು ಓದಿಗೆ ಓದುಗರನ್ನು ಲೇಖಕಿಯನ್ನು ಹಚ್ಚುವುದಕ್ಕೆ ಕಾರಣವಾಗಿದೆ. ಪತಿ ಎಸ್.ಆರ್ ಹೆಗ್ಗಡೆಯವರಿಗೆ ಕೊಟ್ಟ ಮಾತಿನಂತೆ ತನ್ನ ಅಧ್ಯಯನದ ಮುಂದಿನ ಭಾಗವಾಗಿ ಡಿ.ಲಿಟ್ ಪದವಿಗಾಗಿ ಇನ್ನೊಂದು ಸಂಶೋಧನಾ ಕೃತಿ ‘ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ’ ಎನ್ನುವ ಕೃತಿ ನಿರ್ಮಾಣಕ್ಕೂ ಕಾರಣವಾಯಿತು. ಬಹಳ ಇಷ್ಟಪಟ್ಟು ನಡೆಸಿದ ಸಂಶೋಧನೆಯಿಂದ ಡಿ.ಲಿಟ್ ಪದವಿಯನ್ನು ಹಂಪಿ ಕನ್ನಡ ವಿ.ವಿ ಯಿಂದ ಪಡೆದರು. ಪತಿಯ ಪ್ರೋತ್ಸಾಹ, ಬೆಂಬಲ ಸಾಹಿತ್ಯದ ಪ್ರೇಮ ಪತ್ನಿಯನ್ನು ಲೇಖಕಿ ಮಾತ್ರವಲ್ಲ ಸಂಶೋಧಕಿಯಾಗಿಯೂ ಬೆಳೆಸಿದೆ. ಹೇಳಬೇಕಾದ ಸತ್ಯಗಳನ್ನು ನುಡಿಯಲು ನಿರ್ಭಿಡೆಯಿಂದ ನಡೆಸಲು ನ್ಯತಿಕ ಬೆಂಬಲವನ್ನು ನೀಡಿದೆ.
ಮುಂದೆ ಡಿಲಿಟ್ ಪದವಿಗಾಗಿ ಸಿದ್ಧಪಡಿಸಿ ಇವರು ಮಂಡಿಸಿದ ‘ನಿಬಂಧ’ ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ” ಒಟ್ಟು ತುಳುನಾಡಿನ ನೆಲಮೂಲದ ಜಾತಿ ರಹಿತ ಸಮಾಜದÀ ಉಪಾಸನಾ ಆಚರಣೆಗಳನ್ನು ಒಳಗೊಂಡ ಕೃತಿದೀ ಕೃತಿ ಇವರಿಗೆ ಡಾಕ್ಟರೇಟ್ ಪದವಿ ತಂದು ಕೊಟ್ಟಿದೆ. 2012ರಲ್ಲಿ ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾದ ಈ ಕೃತಿ 2016ರಲ್ಲಿ ಮರು ಮುದ್ರಣ ಆಗಿದೆ. (ಈಗ ಕನ್ನಡ ಪ್ರತಿಗಳು ಲಭ್ಯ ಇಲ್ಲ)
“ಮೂಲತಾನದ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಪಾಡ್ದನ” ಕೃತಿಯನ್ನು 2014ರಲ್ಲಿ ಜಾನಪದ ವಿಶ್ವವಿದ್ಯಾಲಯ ಪ್ರಕಟಿಸಿದೆ. ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು, ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಚೇಳಾರುಗುತ್ತು ಅಗೊಳಿ ಮಂಜನ್ನಾಯ್ಗೆರ್ -ಸಾಂಸ್ಕøತಿಕ ಐತಿಹಾಸಿಕ ಶೋಧ ಇವರ ಮತ್ತೊಂದು ಶೋಧ ಕೃತಿ.
‘ತುಳುವರೆ ಅಟಿಲ್ ಅರಗಣೆ’ ತುಳುಭಾಷೆಯ ತುಳುನಾಡಿನ ಸಾಂಪ್ರದಾಯಿಕ ಅಡುಗೆಯ ಬಗ್ಗೆ ಅರಿವು ನೀಡುವ ಕೃತಿ. ಇದನ್ನು ಆಂದ್ರದ ದ್ರಾವಿಡ ವಿಶ್ವವಿದ್ಯಾಲಯ ಪ್ರಕಟಿಸಿದೆ.
‘ನುಡಿ ಚಿತ್ರ’ (ಯಸ್ ಆರ್ ಹೆಗ್ಗಡೆ ಬದುಕು ಬರಹ) ಕೃತಿಗೆ ಗೌರವ ಸಂಪಾದಕರಾಗಿ ಇವರು ದುಡಿದಿದ್ದಾರೆ.
ಇವರು ಬರೆದ ಯಸ್ ಆರ್ ಹೆಗ್ಡೆಯವರ ಜೀವನ ಚರಿತ್ರೆ ಕಾಂತಾವರ ಕನ್ನಡ ಸಂಘದ ಮಾಲಿಕೆಯಲ್ಲಿ ಹೊರ ಬಂದಿದೆ.
ಇತಿಹಾಸ ಅಕಾಡೆಮಿಯ ರಾಜ್ಯಮಟ್ಟದ ಅನೇಕ ಸಮ್ಮೆಳನಗಳಲ್ಲಿ ಇವರು ಸಂಶೋಧನಾ ಪ್ರಬಂಧಗಳ್ನು ಮಂಡಿಸಿದ್ದಾರೆ.
ಇವರ ಅಹತ ಸಣ್ಣ ಕಥೆ ತೆಲುಗಿಗೆ ಅನುವಾದ ಗೊಂಡು ತೆಲುಗು ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಅನೇಕ ಪ್ರಶಸ್ತಿ ಬಹುಮಾನಗಳನ್ನು ಪಡೆದಿರುವ ಇವರ ಸಂಶೋದನಾ ಕೆಲಸಕ್ಕೆ ಹಿರಿಯ ವಿದ್ವಾಂಸರ ಮೆಚ್ಚು ನುಡಿಗಳು ಸಂದಿವೆ.
ಕರ್ನಾಟಕ ಜಾನಪದ ಅಕಾಡೆಮಿಯ 2015ರ ಸಾಲಿನ ಗದ್ಗಿಮಠ ಹೆಸರಲ್ಲಿ ನೀಡುವ “ಜಾನಪದ ತಜ್ಞೆ” ಗೌರವ ಪ್ರಶಸ್ತಿ ಲಭಿಸಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ 2015ರ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
‘ಸಪ್ತಕನ್ಯೆಯರ ಕನ್ಯೆಬೂಮಿಯಲ್ಲಿ ನಮ್ಮ ನಡೆ’ ಇವರ ಮೊದಲನೆಯ ಪ್ರವಾಸೀ ಬರಹ. ಇದು ಐ.ಬಿ. ಯಚ್ ಪ್ರಕಾಶನದಿಂದ ಹೊರಬಂದಿದೆ. ಈ ಕೃತಿ 2017ರ ಕರ್ನಟಕ ಸಾಹಿತ್ಯ ಅಕಾಡದೆಮಿ ಪುಸ್ತಕ ಬಹುಮಾನ’ ಪಡೆದಿದೆ.
2018ರಲ್ಲಿ ಇವರ ಬಂದ ಪ್ರವಾಸ ಕೃತಿ “ಇಂದ್ರ ಪ್ರಸ್ಥದಿಂದ ಐತಿಹಾಸಿಕ ನಡೆ’ .
ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ “ಸಿರಿ ಬಾರಿ ಲೋಕ –ತುಳುನಾಡು” ಮೇ 15ರಂದು ಬಿಡುಗಡೆ ಆಗಲಿದೆ.
‘ತುಳುನಾಡಿನ ಪರಂಪರೆಯ ಕಂಬುಲ’ ಕರ್ನಾಟಕ ಜಾನಪದ ಅಕಾಡೆಮಿಯಿಂದ “ಬಾರ್ಕೂರಿನ ಕುಂಡೋದರ ಮತ್ತು ಅಳಿಯ ಸಂತಾನ ಕಟ್ಟು” ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಪ್ರಕಟ ಆಗಲಿದೆ.
ಇವರು ಪತಿಯೊಂದಿಗೆ ಭಾರತದ ಆಯ್ದ ಭಾಗಗಳಿಗೆ ಪ್ರವಾಸ ಹೋಗಿದ್ದಾರೆ ಹಾಗೆಯೇ ಕೆಲವು ವಿದೇಶಗಳುನ್ನೂ ನೋಡಿ ಬಂದಿದ್ದಾರೆ.
ಈಗ ಮಕ್ಕಳ ಮತ್ತು ಮಿತ್ರರ ಸಹಕಾರದಿಂದ ಪತಿಯ ನೆನಪಿನಲ್ಲಿ ಯಸ್ ಆರ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ರಚಿಸಿ ಬರವಣಿಗೆಯ ಜೊತೆಗೆ ರಚನಾತ್ಮಕ ಕೆಲಸ ಮಾಡುತ್ತಿದ್ದಾರೆ.
ಸಮಾಜ ಸೇವೆ ಇವರ ಆಸಕ್ತಿಯ ಕ್ಷೇತ್ರ. ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳ ಬೆಳವಣಿಗೆಗೆ ಶ್ರಮಿಸುವುದು, ಆಶಕ್ತ ರೋಗಿಗಳಿಗೆ ಆರ್ಥಿಕ ನೆರವು ನೀಡುವುದು ಇವರ ಟ್ರಸ್ಟ್ನ ಮೂಲ ಉದ್ದೇಶ.
ಕರ್ನಾಟಕ ಕಡಲ ತೀರದ ಸಾಹಿತಿಗಳಲ್ಲಿ ಹಿರಿಯ ಸ್ಥಾನದಲ್ಲಿ ಪ್ರಸಿದ್ದಿ, ಗೌರವವನ್ನು ಪಡೆದಿರುವ ಡಾ| ಇಂದಿರಾ ಹೆಗ್ಡೆಯವರ ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಬಾರಿ ಪ್ರತಿಷ್ಠಿತ “ಬಂಟ ವಿಭೂಷಣ ಪ್ರಶಸ್ತಿ” ನೀಡಿ ಗೌರವಿಸುತ್ತಿರುವುದು ಸಮಸ್ಥ ಅನಿವಾಸಿ ತುಳು ಮತ್ತು ಕನ್ನಡ ಬಂಧು ಬಾಂಧವರಿಗೆ ಹರ್ಷವಾಗುತ್ತಿದೆ.
ಅಭಿನಂದನೆಗಳು
ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ
Comments are closed.