
ಎದೆಯೊಳಗಿನ ತಮ ತಮ ತಮಟೆ… ಎಂದು ಕನ್ನಡಿಗರ ಮನ ಗೆದ್ದಿದ್ದ ಗಾಯಕ ನವೀನ್ ಸಜ್ಜು ಈಗ ಮತ್ತೊಮ್ಮೆ ಕರುನಾಡ ಜನರ ಹೃದಯ ಗೆದ್ದಿದ್ದಾರೆ. ಜನಪ್ರಿಯ ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್-6 ನಲ್ಲಿ ತಮ್ಮ ನಡೆ ನುಡಿಗಳ ಮೂಲಕವೇ ಮನೆಮಾತಾಗಿದ್ದವರು ನವೀನ್. ಇದೀಗ ಬಿಗ್ಬಾಸ್ ಕೊನೆಯ ಹಂತಕ್ಕೆ ಬಂದು ತಲುಪಿದೆ. ಮನೆಯಲ್ಲಿ ಐವರು ಸ್ಪರ್ಧಿಗಳು ಮಾತ್ರ ಉಳಿದಿದ್ದು, ಇನ್ನೇನು ಮೂರು ದಿನಗಳಲ್ಲಿ ಬಿಗ್ಬಾಸ್-6 ಗ್ರ್ಯಾಂಡ್ ಫಿನಾಲೆ ಕೂಡ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಅದರಂತೆ ಮಂಗಳವಾರ ನಡೆದ ಎಪಿಸೋಡ್ನಲ್ಲಿ ಈ ಬಾರಿಯ ಬಿಗ್ಬಾಸ್-6 ವಿನ್ನರ್ ನೀವಾದರೆ ಏನು ಮಾಡುತ್ತೀರಿ ಎಂದು ಸ್ಫರ್ಧಿಗಳನ್ನು ಪ್ರಶ್ನಿಸಲಾಗಿತ್ತು.
ಈ ಪ್ರಶ್ನೆಗೆ ಕವಿತಾ, ರಶ್ಮಿ, ಶಶಿ, ಆಂಡಿ ಒಂದೊಂದು ರೀತಿಯ ಉತ್ತರ ನೀಡಿದ್ದರೆ, ಯುವ ಗಾಯಕ ನವೀನ್ ನೀಡಿದ ಉತ್ತರ ಪ್ರೇಕ್ಷಕರ ಮನತಟ್ಟಿದೆ. ಹೌದು, ತಾನು ಬಿಗ್ಬಾಸ್ ಗೆದ್ದರೆ ಹಳ್ಳಿಯನ್ನು ದತ್ತು ತೆಗೆದುಕೊಳ್ಳುತ್ತೇನೆ ಎನ್ನುವ ಮೂಲಕ ನವೀನ್ ಮಣ್ಣಿನ ಮಗ ಎಂದು ನಿರೂಪಿಸಿದರು.
ನವೀನ್ ನೀಡಿದ ಈ ಉತ್ತರಕ್ಕೆ ಅವರ ಅಭಿಮಾನಿಗಳೂ ಕೂಡ ಫಿದಾ ಆಗಿದ್ದಾರೆ. ಬಿಗ್ಬಾಸ್ ಬರುವುದಕ್ಕಿಂತಲೂ ಮುಂಚಿತವಾಗಿ ಅದ್ಭುತ ಗಾಯನದ ಮೂಲಕ ಸ್ಟಾರ್ ಎನಿಸಿಕೊಂಡಿದ್ದರು. ಈಗ ಸಿಕ್ಕಿರುವ ವೇದಿಕೆಯ ಮೂಲಕ ಒಂದಷ್ಟು ಸಾಮಾಜಿಕ ಕೆಲಸಕ್ಕೂ ಕೈ ಹಾಕುವ ಸೂಚನೆ ನೀಡಿದ್ದಾರೆ. ಬಿಗ್ಬಾಸ್ ಸ್ಪರ್ಧಿಯ ಸಾಮಾಜಿಕ ಕಳಕಳಿ ಕೇಳಿ ಬಗ್ಗೆ ಹಲವರು ಸಾಮಾಜಿಕ ಜಾಲತಾಣದಲ್ಲಿ ನವೀನ್ರನ್ನು ಕೊಂಡಾಡುತ್ತಿದ್ದಾರೆ.
ಸೋಷಿಯಲ್ ಮೀಡಿಯಾಗಳಲ್ಲಿ ಯುವ ಗಾಯಕನ ಪರ ಅಲೆಯಿದ್ದು, ಈ ಬಾರಿಯ ಬಿಗ್ಬಾಸ್ ಚಾಂಪಿಯನ್ ಆಗಿ ನವೀನ್ ಸಜ್ಜು ಹೊರ ಹೊಮ್ಮಲಿದ್ದಾರೆ ಎನ್ನಲಾಗುತ್ತಿದೆ. ಅದರಂತೆ ಅಭಿಮಾನಿಗಳು ಫೇಸ್ಬುಕ್, ಇನ್ಸ್ಟಾಗ್ರಾಂ ಮತ್ತು ಟ್ವಿಟರ್ನಲ್ಲಿ ನವೀನ್ ಸಜ್ಜುಗೆ ವೋಟ್ ನೀಡಿ, ಬಡ ಜನರಿಗೆ ಸೇವೆ ಮಾಡಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡುತ್ತಿದ್ದಾರೆ.
Comments are closed.