ಕರ್ನಾಟಕ

ಬೆಂಗಳೂರಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ಕಾಲೇಜು ಹಾಸ್ಟೆಲಿನಲ್ಲಿ ಬೆಡ್ ಮೇಲೆ ಮಲಗಿರುವ ಸ್ಥಿತಿಯಲ್ಲೇ ಪತ್ತೆ

Pinterest LinkedIn Tumblr

ಬೆಂಗಳೂರು: ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಹಾಸ್ಟೆಲ್ ನಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಕೊತ್ತನೂರು ಕೆ. ನಾರಾಯಣಪುರ ಸಮೀಪದ ಖಾಸಗಿ ಕಾಲೇಜು ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದೆ. ಮುಂಬೈ ಮೂಲದ ಸೋಫಿಯಾ ದಮನಿ ಎಂಬಾಕೆಯೇ ಸಾವನ್ನಪ್ಪಿರುವ ದುರ್ದೈವಿ. ಈಕೆ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಳು.

ಸೋಫಿಯಾ ನಾಲ್ಕನೇ ಸೆಮಿಸ್ಟರ್ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿಯಾಗಿದ್ದು ಈಕೆಯ ಶವವು ಹಾಸ್ಟೆಲ್ ಕೋಣೆಯಲ್ಲಿನ ಬೆಡ್ ಮೇಲೆ ಮಲಗಿರುವ ಸ್ಥಿತಿಯಲ್ಲೇ ಪತ್ತೆಯಾಗಿದೆ.

ಬುಧವಾರ ಸಂಜೆ ಘಟನೆ ಬೆಳಕು ಕಂಡಿದ್ದು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಲ್ಗಿದೆ. ಗಮನಾರ್ಹ ವಿಷಯವೆಂದರೆ ಸೋಫಿಯಾ ಬುಧವಾರ ಬೆಳಿಗ್ಗೆ ತನ್ನ ಸಹಪಾಠಿಯೊಡನೆ ಮಾತನಾಡಿದ್ದಳು. ತಾನು ಈ ದಿನ ಕಾಲೇಜಿಗೆ ಬರಲ್ಲ, ನೀವು ಹೋಗಿ ಬನ್ನಿ ಎಂದಿದ್ದಳು. ಆದರೆ ಸಂಜೆ ಕಾಲೇಜಿನಿಂದ ಹಿಂತಿರುಗುವ ವೇಳೆಗೆ ಆಕೆ ಸಾವನ್ನಪ್ಪಿರುವುದು ಗೊತ್ತಾಗಿದೆ.

ಸೋಫಿಯಾ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದು ಪೋಲೀಸರು ಮುಂಬೈ ನಲ್ಲಿರುವ ಆಕೆಯ ಪೋಷಕರ ಆಗಮನದ ನಿರೀಕ್ಷೆಯಲ್ಲಿದ್ದಾರೆ.

Comments are closed.