ಕರಾವಳಿ

ಲೋಕಸಭಾ ಚುನಾವಣೆ ಟಿಕೇಟ್ ನೀಡಲು ಟ್ವೀಟರ್‌ ಅಭಿಯಾನ ಮಾಡಿದ ಜೆ.ಪಿ. ಹೆಗ್ಡೆ ಅಭಿಮಾನಿಗಳು!

Pinterest LinkedIn Tumblr

ಉಡುಪಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಉಡುಪಿ-ಚಿಕ್ಕಮಗಳುರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂಬ ಬಗ್ಗೆ ಈಗ ಬಹಳಷ್ಟು ಚರ್ಚೆ ಆರಂಭವಾಗಿದ್ದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆಗೆ ಟಿಕೇಟ್ ನೀಡಬೇಕೆಂದು ಅವರ ಅಭಿಮಾನಿ ಬಳಗ ವಿಶಿಷ್ಟವಾಗಿ ಟ್ವಿಟರ್ ಅಭಿಯಾನಕ್ಕೆ ಮುಂದಾಗಿದೆ.

(ಕೆ. ಜಯಪ್ರಕಾಶ್ ಹೆಗ್ಡೆ)

ಜೆಪಿ ಹೆಗ್ಡೆಯವರ ಪರ ಟ್ವೀಟರನಲ್ಲಿ ಬಿಜೆಪಿ ಕಾರ್ಯಕರ್ತರು ಇತ್ತೀಚೆಗೆ ಸದ್ದು ಮಾಡಿದ್ದಾರೆ‌. ಜಯಪ್ರಕಾಶ್ ಹೆಗ್ಡೆಯವರು ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಬಿಜೆಪಿ ಸಂಸದರಾಗಬೇಕು ಎಂಬ ಬೇಡಿಕೆ ಮೊದಲಿಂದಲೂ ಇತ್ತು . ಅದರಂತೆಯೇ ಬಿಜೆಪಿ ಕಾರ್ಯಕರ್ತರು ತಮ್ಮ ಬೇಡಿಕೆಯನ್ನು ಟ್ವೀಟರ್ ಮೂಲಕ ಪಕ್ಷ ನಾಯಕರಿಗೆ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ.‌ ಜೆಪಿ ಹೆಗ್ಡೆಯವರಿಗೆ ಟಿಕೇಟು ನೀಡಬೇಕು , ಮೋದಿಜಿ ಆಡಳಿತದಲ್ಲಿ ಜೆಪಿ ಹೆಗ್ಡೆಯವರಂತಹ ಸಮರ್ಥ ದಕ್ಷ ಆಡಳಿತ ಚತುರರು ಸಂಸದರಾಗಬೇಕು ಹಾಗಾದಾಗ ಮಾತ್ರ ಸಮಗ್ರ ಕ್ಷೇತ್ರದ ಅಭಿವೃದ್ದಿ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಯಪ್ರಕಾಶ್ ಹೆಗ್ಡೆಯವರು ಸಂಸದರಾಗಿ ಸಚಿವರಾಗಿ ಶಾಸಕರಾಗಿ ಹಿರಿಯ ರಾಜಕೀಯ ಅನುಭವಿಗಳು ಹಾಗೂ ಕ್ಷೇತ್ರದ ಬಗ್ಗೆ ಸಮಗ್ರ ಪರಿಚಯ ಹೊಂದಿರುತ್ತಾರೆ , ತಳಮಟ್ಟದ ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿರುವ ಅವರ ಆಡಳಿತವನ್ನು ಹಿಂದೊಮ್ಮೆ ಜನತೆ ನೋಡಿದ್ದಾರೆ , ಅಂತಹ ಜನಸ್ಪಂದನೆಯ ನಾಯಕರು ನಮಗೆ ಇನ್ನೊಮ್ಮೆ ಬೇಕು ಎಂಬಂತೆ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಾರ್ಯಕರ್ತರು ಧ್ವನಿಸಿದ್ದಾರೆ .

ಅವರಿಗೆ ನೀವು ಟೀಕೆಟ್ ನೀಡಿ , ಜಯಗೊಳಿಸುವುದು ನಮ್ಮ ಕರ್ತವ್ಯ ಎಂಬಂತೆ ಬಿಜೆಪಿ ಕಾರ್ಯಕರ್ತರು ಟ್ವೀಟ್ ಮಾಡಿದ್ದಾರೆ.‌ #JPH4UdupiChikmagalur2019 ಹೆಸರಿನಲ್ಲಿ ಒಟ್ಟು ಮೂರುವರೆ ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳೂ ಬಂದಿವೆ ‌ ಇನ್ನೂ ಹೆಚ್ಚುತ್ತಲೆ ಇದೆ. ಅದು ರಾಷ್ಟ್ರಮಟ್ಟದಲ್ಲಿ ಎಂಟನೇ ಸ್ಥಾನ ಮತ್ತು ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದು ಟ್ರೆಂಡ್ ಆಗಿದ್ದು ಬಹು ಮೆಚ್ಚುಗೆಯಾಗಿತ್ತು.‌ ಈ‌ ಧ್ವನಿಗೆ ಸ್ಪಂದಿಸಿ ಪಕ್ಷದ ಹಿರಿಯರು ಟಿಕೇಟು ನೀಡಿದರೆ ಜೆಪಿ ಹೆಗ್ಡೆಯವರು ಈ ಬಾರಿ ಎರಡು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದು ದಾಖಲೆ ನಿರ್ಮಿಸುವ ವಿಶ್ವಾಸವಿದೆ‌ ಎಮ್ದು ಅಭಿಮಾನಿಗಳು ತಿಳಿಸಿದ್ದಾರೆ.

Comments are closed.