ಕರಾವಳಿ

ಕೊಳವೆಬಾವಿ ಕೊರೆಸುವವರಿಗೆ ನೋಂದಣಿ ಕಡ್ಡಾಯ; ತಪ್ಪಿದ್ರೆ ಶಿಸ್ತು ಕ್ರಮ

Pinterest LinkedIn Tumblr

ಉಡುಪಿ : ಕರ್ನಾಟಕ ಅಂತರ್ಜಲ ( ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಮಯ ಹಾಗೂ ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012 ರನ್ವಯ ಬೋರ್ವೆಲ್ ಕೊರೆಯುವ ರಿಗ್ ಯಂತ್ರ ಮಾಲಿಕರು/ಏಜೆನ್ಸಿಯವರು ಕಡ್ಡಾಯವಾಗಿ ಅಂತರ್ಜಲ ಪ್ರಾಧಿಕಾರದಿಂದ ನೋಂದಣಿ(7ಎ) ಹೊಂದಿರಬೇಕಾಗುತ್ತದೆ.

ಮುಂದುವರೆದು ಕೊಳವೆಬಾವಿ ಕೊರೆಸುವವರು (ಸರ್ಕಾರಿ/ಖಾಸಗಿ) ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ 7ಎ ಹೊಂದಿರುವ ರಿಗ್ ಯಂತ್ರದ ಬಗ್ಗೆ ಖಾತ್ರಿ ಪಡಿಸಿಕೊಂಡು ಕೊಳವೆ ಬಾವಿ ಕೊರೆಸುವುದು ಕಡ್ಡಾಯವಾಗಿರುತ್ತದೆ. ತಪ್ಪಿದ್ದಲ್ಲಿ ಇಲಾಖಾ ನಿಯಮಾನುಸಾರ ಕ್ರಮ ಜರಗಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂ ವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ, ಅಂತರ್ಜಲ ನಿರ್ದೇಶನಾಲಯ, ರಜತಾದ್ರಿ ,ಮಣಿಪಾಲ, ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Comments are closed.