
ಚೆನ್ನೈ: ತಮಿಳುನಾಡಿನ ತಿರುತ್ತನಿಯ ಗಜರಿ ಅಂಗಡಿಯೊಂದರಲ್ಲಿ ಪಂಚಲೋಹದಿಂದ ತಯಾರಿಸಿದ ಒಂದು ಅಡಿ ಎತ್ತರದ ನಂದಿ ವಿಗ್ರಹ ಪತ್ತೆಯಾಗಿದೆ. ವ್ಯಾಪಾರಿ ನೂರ್ಮ ಎಂಬುವವರನ್ನು ಬಂಧಿಸಲಾಗಿದೆ. ಸಿಐಡಿಗೆ ಪ್ರಕರಣ ಕುರಿತು ಮಾಹಿತಿ ನೀಡಲಾಗಿದೆ.
ಖಚಿತ ಮಾಹಿತಿ ಪಡೆದಿದ್ದ ತಮಿಳುನಾಡು ಪೊಲೀಸರು ಗುಜರಿ ಅಂಗಡಿ ಮೇಲೆ ದಾಳಿ ನಡೆಸಿದ್ದರು. ನಂದಿ ವಿಗ್ರಹವನ್ನು ವಶ ಪಡಿಸಿಕೊಳ್ಳಲಾಗಿದ್ದು, 35 ಕೆಜಿ ತೂಕವಿದೆ.
ಎಸ್‌ಯುವಿಯಲ್ಲಿ ಬಂದ ತಂಡವೊಂದು ನಂದಿ ವಿಗ್ರಹವನ್ನು ನೂರ್ಮ ಅವರ ಅಂಗಡಿಗೆ ಕೊಟ್ಟು ಹೋಗಿದ್ದರು. ಈ ತಂಡಕ್ಕೆ ಪೊಲೀಸರು ಶೋಧನೆ ನಡೆಸಿದ್ದಾರೆ.
ವ್ಯಾಪಾರಿ ನೂರ್ಮ ವಿಗ್ರಹವನ್ನು ಮಾರಟಕ್ಕೆ ಇಟ್ಟಿಲ್ಲ ಎಂದು ಸಮರ್ಥನೆ ನೀಡಲು ಮುಂದಾಗಿದ್ದಾರೆ. ಅನುಮಾನಗೊಂಡು ಬಲಗೊಂಡು ಹೆಚ್ಚಿನ ಪ್ರಶ್ನೆಗಳನ್ನು ಕೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ವಿಗ್ರಹವನ್ನು ಕೋರ್ಟ್‌ಗೆ ಕಳುಹಿಸಿದ ನಂತರ ಅಪರೂಪದ ವಿಗ್ರಹಗಳ ಸಂಗ್ರಹ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.