
ನ್ಯೂಯಾರ್ಕ್: ಅಮೆರಿಕಾದ ಜನಪ್ರಿಯ ನಿಯತಕಾಲಿಕೆ ‘ಟೈಮ್ ಮ್ಯಾಗಜಿನ್’ ಪ್ರತಿವರ್ಷ ಪ್ರಭಾವಿ ವ್ಯಕ್ತಿಗಳ ಪರಿಚಯ ಮಾಡಿಕೊಡುತ್ತದೆ. ಅಂತೆಯೇ 2018ರಲ್ಲಿ 25 ಯುವ ಪ್ರತಿಭೆಗಳ ಸಾಧನೆಯನ್ನು ಹೇಳ ಹೊರಟಿದ್ದು, ಆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಜೊತೆಗೆ, ಅಸಾಮಾನ್ಯ ಯುವ ಪ್ರತಿಭೆಗಳನ್ನು ಪಟ್ಟಿ ಮಾಡಲಾಗಿದೆ.
ಈ ವರ್ಷದ ನಿಯತಕಾಲಿಕೆ ಬಹಳಷ್ಟು ವಿಶೇಷವಾಗಿದ್ದು, ಭಾರತೀಯ ಮೂಲದ ಮೂವರು ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಲಾಗಿದೆ. ರಿಷಭ್ ಜೈನ್, ಕಾವ್ಯ ಕೊಪ್ಪರಾಪು, ಅಮಿಕಾ ಜಾರ್ಜ್ ಅವರ ಸಾಧನೆ ಯುವಜನತೆಗೆ ಸ್ಪೂರ್ತಿದಾಯಕವಾಗಿದೆ.
19 ವರ್ಷದ ಅಮಿಕಾ ಜಾರ್ಜ್ ಬಡತನವನ್ನು ನಿರ್ಮೂಲನೆ ಮಾಡಲು ಪಣ ತೊಟ್ಟಿರುವ ಯುವಪ್ರತಿಭೆ. ಬಡತನದ ಕಾರಣದಿಂದ ಸ್ಯಾನಿಟರಿ ಪ್ಯಾಡ್ಗಳನ್ನು ಪಡೆಯಲಾಗದ ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ಗಳು ಹಾಗೂ ನೈರ್ಮಲ್ಯ ಉತ್ಪನ್ನಗಳನ್ನು ವಿತರಿಸುವ ಮಹತ್ತರ ಕಾರ್ಯಕ್ಕೆ ಮುಂದಾಗಿದ್ದಾರೆ.
ಅಮಿಕಾ #FreePeriods ಎಂಬ ಅಭಿಯಾನವನ್ನು ಆರಂಭಿಸಿದರು. ಬಡತನ ನಿರ್ಮೂಲನೆ ಮಾಡಲು ಸಹಾಯ ಮಾಡುವ 2 ಲಕ್ಷ ಜನರ ಸಹಿಗಳನ್ನು ಸಂಗ್ರಹಿಸಿದರು. ನಂತರದ ದಿನಗಳಲ್ಲಿ ಈ ಅಭಿಯಾನಕ್ಕೆ ಇಂಗ್ಲೆಂಡ್ ಸರ್ಕಾರದ ಬೆಂಬಲಬವೂ ಸಹ ಸಿಕ್ಕಿ, ಮೊದಲ ಬಾರಿಗೆ ದೇಣಿಗೆ ನೀಡುವ ಕಾರ್ಯಕ್ಕೆ ಉತ್ತೇಜನ ನೀಡಿತು.
14 ವರ್ಷದ ರಿಷಭ್ ಜೈನ್ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ನ್ನು ಗುಣಪಡಿಸುವ ಸಾಫ್ಟ್ವೇರ್ನ್ನು ಅಭಿವೃದ್ಧಿಪಡಿಸಿದ್ದಾರೆ. ಈತ ಕಂಡುಹಿಡಿದ ‘ಅಲ್ಗಾರಿದಮ್’ ಪ್ಯಾಂಕಿಯಾಟ್ರಿಕ್ ಕ್ಯಾನ್ಸರ್ನ್ನು ಗುಣಪಡಿಸಲು ಸಹಕಾರಿಯಾಗಿದೆ.
18 ವರ್ಷದ ಕಾವ್ಯ ಕೊಪ್ಪರಾಪು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಇವರು ಮೆದುಳು ಕ್ಯಾನ್ಸರ್ನ್ನು ಗುಣಪಡಿಸುವ ಸಾಫ್ಟ್ವೇರ್ನ್ನು ಕಂಡುಹಿಡಿದಿದ್ದಾರೆ. ಕಳೆದ 30 ವರ್ಷಗಳಿಂದ ಮೆದುಳು ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳನ್ನು ಗುಣಪಡಿಸಬಹುದಾಗಿದೆ.
ಇವರ ಮಹತ್ತರ ಸಾಧನೆಯನ್ನು ಗುರುತಿಸಿರುವ ‘ಟೈಮ್ ನಿಯತಕಾಲಿಕೆ’ ವಿಶೇಷ ಗೌರವ ಸಲ್ಲಿಸಿದೆ. ಹೀಗೆ ಅಸಾಮಾನ್ಯ ಸಾಧನೆ ಮಾಡಿರುವ ಪ್ರತಿಭೆಗಳನ್ನು ವಿಶ್ವದಾದ್ಯಂತ ಹುಡುಕಿ ಅವರಿಗೆ ವಿಶೇಷ ಗೌರವ ಸಲ್ಲಿಸುವ ಕಾರ್ಯದಲ್ಲಿ ಟೈಮ್ ನಿಯತಕಾಲಿಕೆ ನಿರತವಾಗಿದೆ.
Comments are closed.