ಗಲ್ಫ್

ಇನ್ನು ಮುಂದೆ ಯುಎಇ ಜೊತೆ ಭಾರತ ರೂಪಾಯಿಯಲ್ಲೇ ವ್ಯವಹಾರ ನಡೆಸುತ್ತೆ !

Pinterest LinkedIn Tumblr

ಅಬುಧಾಬಿ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಹಾಗೂ ಭಾರತ ಇನ್ನು ತಮ್ಮ ತಮ್ಮ ಕರೆನ್ಸಿಯಲ್ಲೇ ವಹಿವಾಟು ನಡೆಸಲಿವೆ. ರಫ್ತಿಗಾಗಿ ಅಮೆರಿಕ ಡಾಲರ್‌ ಲೆಕ್ಕದಲ್ಲಿ ಈಗ ವಹಿವಾಟು ನಡೆಯುತ್ತಿತ್ತಾದರೂ ಇನ್ನು ಎರಡೂ ದೇಶಗಳು ತಮ್ಮ ಕರೆನ್ಸಿಗಳಲ್ಲೇ ವಹಿವಾಟು ನಡೆಸಲಿವೆ. ಈ ಸಂಬಂಧ ಯುಎಇ ವಿದೇಶಾಂಗ ಸಚಿವ ಝಾಯೆದ್‌ ಅಲ್‌ ನಹ್ಯಾನ್‌ ಜತೆಗೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಯುಎಇ ಪ್ರವಾಸದಲ್ಲಿರುವ ಸುಷ್ಮಾ ಇಂಧನ, ಭದ್ರತೆ, ವ್ಯಾಪಾರ, ಹೂಡಿಕೆ, ಬಾಹ್ಯಾಕಾಶ, ರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ಕುರಿತು ಮಾತುಕತೆ ನಡೆಸಿದ್ದಾರೆ.

ಮಹಾತ್ಮಾ ಗಾಂಧಿ 150ನೇ ಜನ್ಮದಿನದ ಹಿನ್ನೆಲೆಯಲ್ಲಿ ಅಬುಧಾಬಿಯಲ್ಲಿ ಗಾಂಧಿ-ಝಾಯೆದ್‌ ಡಿಜಿಟಲ್‌ ಮ್ಯೂಸಿಯಂ ಅನ್ನು ಸುಷ್ಮಾ ಉದ್ಘಾಟಿಸಲಿದ್ದಾರೆ. ಈ ಮ್ಯೂಸಿಯಂನಲ್ಲಿ ಮಹಾತ್ಮಾ ಗಾಂಧಿ ಹಾಗೂ ಆಧುನಿಕ ಯುಎಇ ಹರಿಕಾರ ಶೇಖ್‌ ಝಾಯೆದ್‌ ಸಾಧನೆ ಹಾಗೂ ಜೀವನ ವಿವರಗಳು ಇರಲಿವೆ. ಇದೇ ವೇಳೆ ಅಬುಧಾಬಿಯಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಸುಷ್ಮಾ ಮಾತನಾಡಲಿದ್ದಾರೆ.

Comments are closed.