ಕರಾವಳಿ

ತೂಕ ಹೆಚ್ಚಿಸಿಕೊಳ್ಳಲು ಪರದಾಡುವವರಿಗೆ ಈ ಹಣ್ಣು ಉತ್ತಮ

Pinterest LinkedIn Tumblr

ಹೌದು ನಾವು ಗೊತ್ತಿಲ್ಲದೇ ಹಲವಾರು ಹಣ್ಣುಗಳನ್ನು ತಿನ್ನುತ್ತೇವೆ, ಆದರೆ ಅದರಿಂದ ಆಗುವ ಲಾಭಗಳನ್ನು ತಿಳಿದುಕೊಂಡು ತಿಂದರೆ ಎಷ್ಟು ಲಾಭ ಗೊತ್ತಾ, ಅದೇ ರೀತಿ ಸೀತಾಫಲ ಹಣ್ಣು ತಿನ್ನುವುದರಿಂದ ನಮಗೆ ಏನೇನು ಲಾಭಗಳು ಇವೆ ಅನ್ನೋದು ತಿಳಿಯೋಣ ಬನ್ನಿ.

ಪ್ರತಿದಿನ ಊಟದ ನಂತರ ಈ ಹಣ್ಣನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುವುದು ಜತೆಗೆ ಸೀತಾಫಲಗಳಲ್ಲಿ ರಿಬೊಫ್ಲಾವಿನ್ ಮತ್ತು ವಿಟಮಿನ್ ‘ಸಿ’ ಅಂಶ ಹೇರಳವಾಗಿದೆ. ಇವುಗಳು ಕಣ್ಣಿಗೆ ಒಳ್ಳೆಯದು. ದೃಷ್ಟಿ ಸಾಮರ್ಥ್ಯ ಹೆಚ್ಚಿಸಲು ನೆರವಾಗುತ್ತವೆ ಮತ್ತು ಪ್ರತಿದಿನ ಊಟದ ನಂತರ ಈ ಹಣ್ಣನ್ನು ಸೇವಿಸು ವುದರಿಂದ ಜೀರ್ಣಶಕ್ತಿ ಹೆಚ್ಚುವುದು.

ಸೀತಾಫಲಗಳಲ್ಲಿ ರಿಬೊಫ್ಲಾವಿನ್ ಮತ್ತು ವಿಟಮಿನ್ ‘ಸಿ’ ಅಂಶ ಹೇರಳವಾಗಿದೆ. ಇವುಗಳು ಕಣ್ಣಿಗೆ ಒಳ್ಳೆಯದು. ದೃಷ್ಟಿ ಸಾಮರ್ಥ್ಯ ಹೆಚ್ಚಿಸಲು ನೆರವಾಗುತ್ತವೆ.

ಹಿಮೋಗ್ಲೋಬಿನ್ ಕಣಗಳು ರಕ್ತದಲ್ಲಿ ಕಮ್ಮಿ ಇದ್ದರೆ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ. ಸೀತಾಫಲ ಹಣ್ಣನ್ನು ಸೇವಿ ಸುತ್ತಾ ಇದ್ದರೆ ಹಿಮೋಗ್ಲೋಬಿನ್‌ ಪ್ರಮಾಣ ಹೆಚ್ಚುತ್ತದೆ.

ತಲೆ ತುಂಬಾ ಹೇನು, ಸೀರುಗಳಿವೆ? ಹಾಗಿದ್ದರೆ ತಲೆ ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಸೀತಾಫಲ ಬೀಜದ ಪುಡಿಯನ್ನು ನೀರಿನಲ್ಲಿ ಕಲಸಿ ಕೂದಲ ಬುಡಕ್ಕೆ ಹಚ್ಚಿ ನೋಡಿ. ಒಣಗಿದ ಎಲೆಗಳ ಚೂರ್ಣ ಚರ್ಮರೋಗಕ್ಕೆ ದಿವ್ಯ ಔಷಧ.

ತೂಕ ಹೆಚ್ಚಿಸಿಕೊಳ್ಳಲು ಪರದಾಡುವವರಿಗೆ ಈ ಹಣ್ಣು ಉತ್ತಮ ಮಾರ್ಗ. ಇದರ ತಿರುಳಿನ ಜೊತೆಗೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಪ್ರತಿನಿತ್ಯ ಸೇವಿಸುತ್ತಾ ಬಂದರೆ ತೂಕ ಕ್ರಮೇಣ ಹೆಚ್ಚುತ್ತದೆ.

ಮ್ಯಾಗ್ನೀಷಿಯಂಗೆ ಹೃದ್ರೋಗಗಳು ಬಾರದಂತೆ ಕಾಪಾಡುವ ಶಕ್ತಿ ಇದೆ. ಇದು ಸೀತಾಫಲದಲ್ಲಿ ಹೆಚ್ಚಾಗಿದೆ. ಇವು ಒತ್ತಡಕ್ಕೆ ಒಳಗಾದಾಗ, ಸೋಂಕು ರೋಗಗಳಿಂದ ರಕ್ಷಣೆ ಪಡೆಯಲು ನೆರವಾಗುತ್ತವೆ.

ಕುರುವಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೀತಾಫಲ ಗಿಡದ ಎಲೆ ಹೇಳಿ ಮಾಡಿಸಿದ ಮದ್ದು. ಈ ಎಲೆಗಳನ್ನು ಜಜ್ಜಿ ಕುರುವಿನ ಮೇಲೆ ಕಟ್ಟಬೇಕು. ಇದರಿಂದ ಕುರು ಬೇಗ ಗುಣವಾಗುತ್ತದೆ. ಹಣ್ಣಿನ ತಿರುಳನ್ನು ಉಪ್ಪಿನ ಜತೆ ಬೆರೆಸಿ ಲೇಪಿಸಿದರೆ ಕುರುಗಳು ಹಣ್ಣಾಗಿ ಬೇಗ ಒಡೆಯುತ್ತವೆ.

ಗರ್ಭಪಾತದ ಅಪಾಯವನ್ನು ತಡೆಯುವ ಶಕ್ತಿ ಈ ಹಣ್ಣಿಗಿದೆ. ಗರ್ಭಿಣಿಯರು ಇದನ್ನು ಸೇವಿಸುವುದರಿಂದ ಗರ್ಭದಲ್ಲಿರುವ ಶಿಶುವಿನ ಮೆದುಳು ವಿಕಾಸವಾಗುತ್ತದೆ. ಅಷ್ಟೇ ಅಲ್ಲದೇ ಹೆರಿಗೆ ನಂತರ ಅಮ್ಮಂದಿರ ತೂಕ ಕಡಿಮೆಯಾಗುತ್ತದೆ. ಆದ್ದರಿಂದ ಆ ವೇಳೆಯಲ್ಲಿ ಇದರ ಸೇವನೆ ಒಳ್ಳೆಯದು.

ಹೊಟ್ಟೆ ಉರಿ ಮತ್ತು ವಿಪರೀತ ದಾಹವಾಗುತ್ತಿದ್ದರೆ ಸೀತಾಫಲ ಹಣ್ಣಿನ ರಸಕ್ಕೆ ಸಕ್ಕರೆ ಸೇರಿಸಿ ಸೇವಿಸಬೇಕು. ಈ ರಸವನ್ನು ಹೊಟ್ಟೆ ಮೇಲೆ ಲೇಪನ ಮಾಡಿದರೂ ದಾಹ ನಿವಾರಣೆಯಾಗುತ್ತದೆ.

ಸೀತಾಫಲ ಗಿಡದ ತೊಗಟೆಯ ಕಷಾಯವನ್ನು ನಿಯಮಿತ ವಾಗಿ ಸೇವಿಸಿದರೆ ಭೇದಿ, ಆಮಶಂಕೆ ಗುಣವಾಗುತ್ತದೆ. ಸೀತಾಫಲದಲ್ಲಿ ಅನ್ನಾಂಗ ಅಂಶ (ಸಿ, ಬಿ6, ಮ್ಯಾಗ್ನಿಷಿಯಂ, ಪೊಟಾಷಿಯಂ, ಅಲ್ಪ ಪ್ರಮಾಣದಲ್ಲಿ ಬಿ2, ಶರ್ಕರ ಪಿಷ್ಠ) ಹೇರಳವಾಗಿದೆ. ಇವು ದೇಹಕ್ಕೆ ಪುಷ್ಟಿ ನೀಡುತ್ತವೆ.

ಕ್ಯಾನ್ಸರ್ ಪ್ರತಿರೋಧಕ ಗುಣ ಸೀತಾಫಲಕ್ಕಿದೆ ಮತ್ತು ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣಕ್ಕೆ ಬರಲು ಸೀತಾಫಲ ಒಳ್ಳೆಯ ಮದ್ದು. ಇದರಲ್ಲಿ ನಿಯಾಸಿನ್ ಮತ್ತು ಡಯಟೆರಿ ಫೈಬರ್ ಅಧಿಕ ಪ್ರಮಾಣದಲ್ಲಿ ಇರುವ ಕಾರಣ, ಇದು ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಲು ನೆರವಾಗುತ್ತದೆ.

ಸೀತಾಫಲವನ್ನು ಮಕ್ಕಳಿಗೆ ಜ್ಯೂಸ್‌ ಮಾಡಿ ಕುಡಿಸುವುದು ಬಲು ಉತ್ತಮ. ಹಾಲಿನ ಜೊತೆ ಜ್ಯೂಸ್‌ ಮಾಡುವ ಬದಲು, ಒಂದು ಕೋಳಿ ಮೊಟ್ಟೆ ಹಾಗೂ ಜೇನುತುಪ್ಪದ ಜೊತೆ ಕೊಟ್ಟರೆ ಮಕ್ಕಳಲ್ಲಿ ಶಕ್ತಿ ವೃದ್ಧಿಸುತ್ತದೆ.

ಸೀತಾಫಲದಲ್ಲಿನ ಬೀಜ ತೆಗೆದು ಮಿಕ್ಸಿಯಲ್ಲಿ ರುಬ್ಬಿ ಕೊಳ್ಳಬೇಕು. ಒಂದು ಪ್ಯಾನ್‌ನಲ್ಲಿ ಹಾಲು ಕಾಯಿಸಿ ಅದಕ್ಕೆ ಮೊಟ್ಟೆ ಹಾಕಿ ಕದಡಬೇಕು. ಇದಕ್ಕೆ ಜೇನು ತುಪ್ಪ ಹಾಗೂ ರುಬ್ಬಿಕೊಂಡ ಸೀತಾಫಲದ ತಿರುಳನ್ನು ಸೇರಿಸಿ ಚಿಕ್ಕ ಉರಿಯಲ್ಲಿ ಬಿಸಿ ಮಾಡಬೇಕು. ಈ ಸಮಯದಲ್ಲಿ ತಿರುವುತ್ತಾ ಇರಬೇಕು. ಅದನ್ನು ತಣ್ಣಗೆ ಮಾಡಿ ಮಕ್ಕಳಿಗೆ ಕೊಟ್ಟರೆ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಮೊಟ್ಟೆ ತಿನ್ನದವರು ಅದನ್ನು ಇಲ್ಲದೆಯೂ ಮಾಡಬಹುದು.

ಸೀತಾಫಲವು ಬಾಯಿಯ ಆರೋಗ್ಯಕ್ಕೂ ಒಳ್ಳೆಯದು. ಈ ಹಣ್ಣಿನ ತಿರುಳು ಹಲ್ಲು ಮತ್ತು ದವಡೆ ನೋವಿನ ವಿರುದ್ಧ ಸಮರ್ಥವಾಗಿ ಹೋರಾಡುತ್ತದೆ.

Comments are closed.