ಕರಾವಳಿ

ಹೆಣ್ಣು-ಗಂಡು ಇಬ್ಬರಲ್ಲಿ ಸಂತಾನ ಶಕ್ತಿ ಕಡಿಮೆಯಾಗಲು ಈ ಪಾನೀಯ ಕೂಡ ಕಾರಣವಂತೆ..?

Pinterest LinkedIn Tumblr

ಹೌದು ಇವತ್ತಿನ ಆಧುನಿಕ ಸಮಾಜದಲ್ಲಿ ಜೀವನ ಕ್ರಮಗಳು ತುಂಬಾನೇ ಬದಲಾಗಿದೆ ಹಾಗಾಗಿ ಕೆಲವೊಂದು ಬದಲಾವಣೆಗಳು ನಮ್ಮಲ್ಲಿ ಕಂಡುಬರುತ್ತವೆ ಮತ್ತು ಕೆಲವೊಂದು ಏರುಪೇರುಗಳು ಆಗುತ್ತವೆ ಯಾವ ರೀತಿ ಅನ್ನೋದು ಇಲ್ಲಿದೆ ನೋಡಿ.

ಸೋಡಾ, ಮತ್ತಿತರ ತಂಪು ಪಾನೀಯಕ್ಕೆ ಗುಡ್‌ ಬೈ ಹೇಳಲೇಬೇಕು. ಈ ಕೃತಕ ಪಾನೀಯ ಕುಡಿಯುವುದರಿಂದ ಹೆಣ್ಣು-ಗಂಡು ಇಬ್ಬರಲ್ಲಿ ಸಂತಾನ ಶಕ್ತಿ ಕಡಿಮೆಯಾಗುವುದೆಂದು ಅಧ್ಯಯನ ಎಚ್ಚರಿಕೆ ನೀಡಿದೆ.

ಸೋಡಾ ಹಾಗೂ ಇತರ ಅಲ್ಕೋಹಾಲ್ ಪಾನೀಯ ಕುಡಿಯುವುದರಿಂದ ಗರ್ಭಧಾರಣೆಯ ಸಾಧ್ಯತೆ 20% ಕಡಿಮೆಯಾಗುವುದೆಂದು Epidemiology ಎಂಬ ಜರ್ನಲ್‌ ಹೇಳಿದೆ.

ಇದಕ್ಕೂ ಮೊದಲು ನಡೆಸಿದ ಅಧ್ಯಯನದಲ್ಲಿ ಬಿಯರ್‌, ಹಾಗು ಇತರ ಪಾನೀಯಗಳು ಮೈ ತೂಕ ಹೆಚ್ಚಿಸುವುದು, ಟೈಪ್‌ 2 ಮಧುಮೇಹ, ಚಿಕ್ಕ ಪ್ರಾಯದಲ್ಲಿಯೇ ಋತುಮತಿಯಾಗುವುದು, ವೀರ್ಯಾಣುಗಳ ಸಾಮರ್ಥ್ಯ ಕುಗ್ಗುವುದು ಮುಂತಾದ ಸಮಸ್ಯೆಗಳಿಗೆ ಒಂದು ಕಾರಣವಾಗಿದೆ ಎಂದು ಹೇಳಿದೆ.ಕೆನಡಾದಲ್ಲಿ ನಡೆಸಿದ ಈ ಅಧ್ಯಯನದಲ್ಲಿ 21-45 ವರ್ಷದೊಳಗಿನ 3,828 ಮಹಿಳೆಯರು ಹಾಗೂ 1,045 ಪುರುಷರು ಭಾಗವಹಿಸಿದ್ದರು.

Comments are closed.