ಕರಾವಳಿ

ಇಸಬು, ಕರಪಾಣಿ, ಹುಳುಕಡ್ಡಿ ಮುಂತಾದ ಚರ್ಮ ರೋಗಗಳಿಗೆ ರಾಮಬಾಣ ಈ ಕಾಯಿ..

Pinterest LinkedIn Tumblr

 

ಹೌದು ಆಯುರ್ವೇದದಲ್ಲಿ ಇರುವ ಕೆಲವೊಂದು ಔಷದಿಯ ಕಾಯಿಗಳಲ್ಲಿ ಈ ಕಾಯಿ ಸಹ ಒಂದು ಯಾವ ಕಾಯಿ ಮತ್ತು ಯಾವ ರೀತಿಯಾಗಿ ಬಳಸಬೇಕು ಅನ್ನೋದು ಇಲ್ಲಿದೆ ನೋಡಿ.
ಜಾಪತ್ರೆ ಮತ್ತು ಜಾಯಿಕಾಯಿಗಳನ್ನು ಅಡಿಕೆಪುಡಿಯೊಂದಿಗೆ ಸೇರಿಸಿ ಬಳಸುವರು ಇದು ಲೈಂಗಿಕ ಕ್ರಿಯೆಯನ್ನು ಪ್ರಚೋದಿಸುವುದು ಜೀರ್ಣಶಕ್ತಿ ಹೆಚ್ಚಿಸುವುದು.

ದೇಹಾಲಸ್ಯದಿಂದ ಅಳುಗರೆಯುವ ಮಗುವಿಗೆ ಜೇನುತುಪ್ಪದಲ್ಲಿ ಜಾಯಿಕಾಯಿ ತೇದು ಸ್ವಲ್ಪ ಗಂಧವನ್ನು ನೆಕ್ಕಿಸಿದರೆ ಮಗು ಚೆನ್ನಾಗಿ ನಿದ್ರಿಸುವುದು.

ರೋಗಿಯ ಜೊಲ್ಲು ರಸದಲ್ಲಾಗಲಿ ಮೂತ್ರದಲ್ಲಾಗಲಿ ಜಾಯಿಕಾಯಿ ತೇದು ಆ ಗಂಧ ಹಚ್ಚಿದರೆ ಹುಳುಕಡ್ಡಿ ಇಸಬು ಕರಪಾಣಿ ಇತ್ಯಾದಿ ಚರ್ಮ ರೋಗಗಳು ಗುಣವಾಗುತ್ತವೆ.

ಅಂಗಸುಖ ಅನುಭವಿಸುವುದಕ್ಕೆ ಒಂದು ಗಂಟೆ ಮುಂಚೆ ಜೇನುತುಪ್ಪದಲ್ಲಿ ಕಲಸಿದ ಜಾಯಿಕಾಯಿ ಚೂರ್ಣ ಸೇವಿಸಿದರೆ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಉಲ್ಲಾಸ ಕಂಡುಬರುವುದು ಮತ್ತು ವೀರ್ಯ ವಿಸರ್ಜನೆ ತಡವಾಗಿ ಆಗುವುದು.

ಜಾಯಿಕಾಯಿ ಚೂರ್ಣವನ್ನು ಬಾಳೆಹಣ್ಣಿನೊಂದಿಗೆ ಸೇವಿಸಿದರೆ ಅಜೀರ್ಣದ ದೆಸೆಯಿಂದ ತಲೆದೋರುವ ಭೇದಿ ನಿಲ್ಲುವುದು.

ಒಂದು ಊಟದ ಚಮಚ ನೆಲ್ಲಿಕಾಯಿ ರಸದಲ್ಲಿ 1 ಚಿಟಿಕೆ ಜಾಯಿಕಾಯಿ ಚೂರ್ಣ ಸೇರಿಸಿ ದಿನಕ್ಕೆ ಮೂರಾವರ್ತಿಯಂತೆ ಸೇವಿಸುತ್ತಿದರೆ ಅಜೀರ್ಣ ದೈನಂದಿನ ಚಟುವಟಿಕೆಗಳಲ್ಲಿ ಅನಾಸಕ್ತಿ ಮಾನಸಿಕ ಉದ್ವೇಗ ಬಿಕ್ಕಳಿಕೆ ಮೆರಗುಳಿತನ ಈ ಲಕ್ಷಣಗಳುಳ್ಳ ರೋಗಿಗಳಲ್ಲಿ ಕ್ರಮೇಣ ಸುಧಾರಣೆ ಕಂಡುಬರುವುದು ಆದರೆ ಜಾಯಿಪತ್ರೆಯನ್ನಾಗಲಿ ಜಾಯಿಕಾಯಿಯನ್ನಾಗಲಿ ಅವಶ್ಯಕತೆಗಿಂತ ಹೆಚ್ಚು ಪ್ರಮಾಣದಲ್ಲಿ ಬಳಸಿದ್ದೇ ಆದಲ್ಲಿ ದೇಹಕ್ಕೆ ಹಾನಿಉಂಟಾಗುವುದು.

ಜಾಯಿಕಾಯಿಯನ್ನು ಚೆನ್ನಾಗಿ ಜಜ್ಜಿ ಪುಡಿ ಮಾಡಿ ಎಣ್ಣೆಯಲ್ಲಿ ಬೇಯಿಸಿಈ ಎಣ್ಣೆ ತಿಕ್ಕುವುದರಿಂದ ತಲೆಶೂಲೆ ಕೀಲು ನೋವು ಬಿಟ್ಟು ಹೋಗುವುದು ದೀರ್ಘಕಾಲದಿಂದ ಗುಣವಾಗದಿರುವ ವ್ರಣಗಳಿಗೂ ಈ ತೈಲ ಹಚ್ಚಬಹುದು.

ಜಾಯಿಕಾಯಿ ಉಪಯೋಗಗಳು
ಇದರ ಹಣ್ಣಿನಲ್ಲಿ ಎರಡು ಭಾಗಗಳಿವೆ. ತಿರುಳು(Nutmeg) ಹಾಗೂ ಅದನ್ನು ಆವರಿಸಿರುವ ಸಿಪ್ಪೆ(Mace).ಎರಡೂ ಮಾರುಕಟ್ಟೆಯಲ್ಲಿ ಬೆಲೆಬಾಳುವುವಂತಹುದು. ಒಂದೇ ಮರದಲ್ಲಿ ಜಾಯಿಕಾಯಿ ಮತ್ತು ಜಾಯಿಪತ್ರೆ ಎಂಬ ಎರಡು ಸಾಂಬಾರ ಪದಾರ್ಥಗಳಿರುವುದೇ ಇದರ ವಿಶೇಷತೆ. ತಿರುಳು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ,ಔಷಧಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಜಾಯಿಪತ್ರೆ ಸಾಂಬಾರ ಪದಾರ್ಥಗಳಲ್ಲಿ ಉಪಯೋಗವಾಗುತ್ತದೆ.ಇದು ಸುವಾಸಿತ,ಉತ್ತೇಜಕ ಹಾಗೂ ವಾತಹರ.ಹೆಚ್ಚಿನ ಪ್ರಮಾಣದಲ್ಲಿ ಇದು ಇಂದ್ರಿಯಸ್ಠಂಭವೂ (Narcotic)ಆಗಿರುವುದು. ಹೊಂಬಣ್ಣದ ಬೀಜದೊಳಗೆ ಸುಂದರವಾದ ಕೆಂಪುಬಣ್ಣದ ಪತ್ರೆಯನ್ನು ಕಾಣುತ್ತೇವೆ. ಇದು ಒಳಗಿನ ಬೀಜಕ್ಕೆ ಕವಚವಿದ್ದಂತೆ. ಕವಚವನ್ನು ಬೇರ್ಪಡಿಸಿ ಒಣಗಿಸಿ ಶೇಖರಿಸಿಡುತ್ತಾರೆ. ಜಾಯಿಕಾಯಿನ ಹೊರಕವಚ ಒಡೆದರೆ ಕಾಯಿದೊರೆಯುತ್ತದೆ. ಇವೆರಡಕ್ಕೂ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ.

ಮಸಾಲೆ’ಯಾಗಿ,’ಅಡುಗೆಮನೆಯ ಔಷಧಿ’ಯಾಗಿ ಇದರ ಬಳಕೆಗಳು:

ನಮ್ಮ ಮನಸ್ಸನ್ನು ಸಾಂತ್ವನಗೊಳಿಸುವ ಶಕ್ತಿಯಿದೆ.
ಇದರ ‘ಬೀಜ’ ಹಾಗೂ ‘ಪ’ತ್ರೆ ವಿವಿಧ ಔಷಧಿಗಳಲ್ಲಿ ಉಪಯೋಗಿಸುತ್ತಾರೆ.
‘ಹುರಿದ ಜಾಯಿಪುಡಿ’ನ್ನು ಬೆಲ್ಲದ ಜೊತೆ ಸೇರಿಸಿ ತಿಂದರೆ ಅಜೀರ್ಣದ ಭೇದಿ ನಿಲ್ಲುತ್ತದೆ.
ಇದರ ಚೂರ್ಣವನ್ನು ಬಾಳೆಹಣ್ಣಿನೊಂದಿಗೆ ತಿಂದರೂ ಭೇದಿ ಶಮನವಾಗುತ್ತದೆ.
‘ಜಾಯಿಪತ್ರೆ’ಗಳನ್ನು ‘ಅಡಿಕೆಪುಡಿ’ಯೊಂದಿಗೆ ಸೇವಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ.
ನಿದ್ರಾಹೀನತೆಯ ಪರಿಹಾರಕ್ಕಾಗಿ,
ತಲೆಗೆ ಬಳಸುವ ಎಣ್ಣೆಗಾಗಿ
ಪುಡಿಯನ್ನು ಕುದಿಯುವ ನೀರಿಗೆ ಹಾಕಿಬಾಯಿಮುಕ್ಕಳಿಸಿದರೆ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
‘ಜಾಯಿಪುಡಿ’ಯನ್ನು ಸೈಂಧವ ಲವಣದೊಡನೆ ಸೇರಿಸಿ ಹಲ್ಲುಜ್ಜುವುದರಿಂದ ವಸಡುಗಳ ರಕ್ತಸ್ರಾವ ನಿಲ್ಲುತ್ತದೆ.
‘ಜಾಯಿಕಾಯಿ’ಯನ್ನು ಅತಿಯಾಗಿ ಬಳಸಿದರೆ ಅಮಲನ್ನು ತರುತ್ತದೆ. ಆದ್ದರಿಂದ ಇದನ್ನು ಅತಿಯಾಗಿ ಸೇವನೆಮಾಡುವುದು ಒಳ್ಳೆಯದಲ್ಲ.

Comments are closed.