Uncategorized

ಶಬರಿಮಲೆಗೆ 50 ವರ್ಷ ಮೀರಿದ ಮಹಿಳಾ ಪೊಲೀಸ್​ ಪೇದೆಗಳ ನೇಮಕ

Pinterest LinkedIn Tumblr


ಶಬರಿಮಲೆ: ಇದೇ ಮೊದಲ ಬಾರಿಗೆ ಶಬರಿಮಲೆ ಕರ್ತವ್ಯಕ್ಕೆ 15 ಮಹಿಳಾ ಪೊಲೀಸ್​ ಪೇದೆಗಳನ್ನು ನೇಮಿಸಲಾಗಿದೆ.

ಋತುಸ್ರಾವದ ಮಹಿಳೆಗೆ ಪ್ರವೇಶಕ್ಕೆ ಮಹಿಳೆಯರು ದೇವಾಲಯ ಪ್ರವೇಶಕ್ಕೆ ಮುಂದಾದಾಗ ಅವರನ್ನು ತಡೆಯಲು ಮಹಿಳಾ ಪೇದೆಗಳು ಇರಬೇಕಾಗುತ್ತದೆ ಎಂಬ ಉದ್ದೇಶದಿಂದ 50ರ ಗಡಿದಾಟಿದ ಮಹಿಳೆಯರನ್ನು ನೇಮಕಮಾಡಲಾಗಿದೆ.

ದೇವಾಸ್ಥಾನದ ಕರ್ತವ್ಯಕ್ಕೆ ನಿಯೋಜನೆ ಆದರೂ ಈ ಮಹಿಳೆಯರಿಗೆ ದೇವರ ದರ್ಶನ ಮಾತ್ರ ನೀಡಲಾಗಿಲ್ಲ. ದೇವಾಲಯದ ಹೊರಗಡೆ ನಾವು ಪ್ರಾರ್ಥನೆ ಮಾಡುತ್ತೇವೆ ಎಂದು ಮಹಿಳೆ ಪೇದೆಯೊಬ್ಬರು ತಿಳಿಸಿದರು.

ನಾವು ಇಲ್ಲಿ ಕೆಲಸಕ್ಕೆ ಬಂದಿದ್ದು, ಅದನ್ನು ನಾವು ಮಾಡಲೇ ಬೇಕಿದೆ. ಸುಪ್ರೀಂ ನಿರ್ಧಾರದ ಬಗ್ಗೆ ನಾವು ಮಾತನಾಡುವುದಿಲ್ಲ ಎಂದು ಮತ್ತೊಬ್ಬ ಪೇದೆ ಸ್ಪಷ್ಟಪಡಿಸಿದರು.

ವಿಶೇಷ ಪೂಜೆ ಹಿನ್ನಲೆ ದೇವಸ್ಥಾನ ತೆರೆಯಲಾಗಿದ್ದು, ನಾಳೆ ರಾತ್ರಿ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುವುದು. ಈ ಹಿಂದೆ ದೇವಸ್ಥಾನ ತೆರೆದಾಗ 12 ಮಹಿಳೆಯರು ದೇವರ ದರ್ಶನ ಪಡೆಯಲು ಮುಂದಾದರೂ ಆದರೆ, ಪ್ರತಿಭಟನಾಕಾರರು ತಡೆಯೊಡ್ಡಿದ ಹಿನ್ನಲೆ ಅವರ ಪ್ರಯತ್ನ ವಿಫಲವಾಯಿತು.

ಮಹಿಳೆಯರ ಪ್ರವೇಶವನ್ನು ರಾಷ್ಟ್ರದ ಎರಡು ರಾಜಕೀಯ ಪಕ್ಷಗಳು ರಾಜಕೀಯ ವಿಷಯವನ್ನಾಗಿ ಸ್ವೀಕರಿಸಿದ್ದು, ಸುಪ್ರೀಂಕೋರ್ಟ್​ ಆದೇಶದಂತೆ ಇದುವರೆಗೂ ಯಾವುದೇ ಮಹಿಳೆಯರು ಚಿನ್ನದ ಮೆಟ್ಟಿಲು ಹತ್ತಲು ಸಾಧ್ಯವಾಗಿಲ್ಲ.

Comments are closed.