ಕರ್ನಾಟಕ

ಬೆಂಗಳೂರಿನಲ್ಲಿ ಕಸ ಹಾಕಿದ್ರೆ ಎಫ್​ಐಆರ್​..!

Pinterest LinkedIn Tumblr

ಬೆಂಗಳೂರು  : ಇನ್ನು ಮುಂದೆ ಸಿಲಿಕಾನ್​ ಸಿಟಿಯ ರಸ್ತೆ ಬದಿಯಲ್ಲಿ, ಎಲ್ಲೆಂದರಲ್ಲಿ ಕಸ ಹಾಕೋಕು‌ ಮುನ್ನ ಒಮ್ಮೆ ಯೋಚಿಸೋದು ಒಳ್ಳೇಯದು. ಯಾಕಂದ್ರೆ ಎಲ್ಲೆಂದರಲ್ಲಿ ಕಸ ಬೀಸಾಡಿದ್ರೆ ನಿಮ್ಮ ಮೇಲೆ ದಂಡ ಹಾಗೂ ಎಫ್ಐಆರ್ ಬೀಳುತ್ತೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ತೆರವು ವಿಚಾರದಲ್ಲಿ ಮುಖ್ಯ ನ್ಯಾಯಮೂರ್ತಿ ಫುಲ್​​ ಗರಂ ಆಗಿದ್ದು, ಪೌರಕಾಯ್ದೆ ಅನ್ವಯ ಎಲ್ಲೆಂದರಲ್ಲಿ ಕಸ ಬಿಸಾಡುವವರ ವಿರುದ್ಧ ದಂಡ ವಿಧಿಸಿ ಕೇಸ್ ದಾಖಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ಮೊದಲಿನಿಂದಲೂ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಇದ್ದೇಇದೆ. ಇನ್ನು ಬಿಬಿಎಂಪಿ ಅಧಿಕಾರಿಗಳು ಎಷ್ಟೇ ಸರ್ಕಸ್ ಮಾಡಿದ್ದರು ಕಸ ಸಮಸ್ಯೆ ಮಾತ್ರ ಬಗೆಹರಿಸಿರಲಿಲ್ಲ. ರಸ್ತೆ ಬದಿಯಲ್ಲಿಯೂ ಕಸದ ರಾಶಿ ಕೊಳೆಯೋಕೆ ಶುರು ಆಗಿತ್ತು.ಇದರಿಂದ ಕೆಂಡಾಮಂಡಲ ಆಗಿದ್ದ ಹೈಕೋರ್ಟ್ ದೀಪಾವಳಿ ಒಳಗೆ ಕಸದ ಸಮಸ್ಯೆಯನ್ನು ಬಗೆಹರಿಸಿ ಸಿಲಿಕಾನ್ ಸಿಟಿಯನ್ನು ಸ್ಮಾರ್ಟ್ ಸಿಟಿ ಮಾಡುವಂತೆ ಸೂಚಿಸಿ ಡೆಡ್ ಲೈನ್ ನೀಡಿತ್ತು.

ಅದರಂತೆ ಇವತ್ತು ವಿಚಾರಣೆ ನಡೆಸಿದ ಹೈಕೋರ್ಟ್ ಎಷ್ಟೇ ಬಿಬಿಎಂಪಿ‌ ಕೆಲಸ ಮಾಡಿದ್ದರು ಕಸದ ರಾಶಿ ರೋಡ್ ಗೆ ಬೀಳೋದು‌ ಮಾತ್ರ ಕಡಿಮೆ ಆಗಿಲ್ಲ ಹಾಗಾಗಿ ಇನ್ನು ಮುಂದೆ ಕಸ ರೋಡ್ ಗೆ ಹಾಕೋರ ಮೇಲೆ FIR ದಾಖಲು‌ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.

ಅಧಿಕಾರಿಗಳ ಉತ್ತರಕ್ಕೆ ಕರಂ ಆದ ಹೈಕೋರ್ಟ್ ಸಿಜೆ..!

ಇನ್ನು ದೀಪಾವಳಿ ಒಳಗೆ ಬೆಂಗಳೂರನ್ನು ಕಸ ಮುಕ್ತ, ಹಾಗೂ ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದಿದ್ದ ಬಿಬಿಎಂಪಿ‌ ಅಧಿಕಾರಿಗಳು ಇವತ್ತು ಹೈಕೋರ್ಟ್ ಸಿಜೆ ಮುಂದೆ ಮೌನವಾಗಿದ್ದರು ಜೊತೆಗೆ ರಸ್ತೆ ಬದಿಯ ಕಸದ ಸ್ಥಳಗಳನ್ನು ಗುರುತಿಸಿ ರಂಗೋಲಿ ಹಾಕಿದರು. ಜನ ಅದರ ಮೇಲೆಯೇ ಕಸ ಹಾಕುತ್ತಿದ್ದಾರೆ ಏನು ಮಾಡಬೇಕು ಸ್ವಾಮಿ ಅಂದ್ರು.

ಪೊಲೀಸ್ ಇಲಾಖೆಗೂ ಕ್ಲಾಸ್ ತೆಗೆದುಕೊಂಡ ಹೈಕೋರ್ಟ್..!

ಇದರಿಂದ ಕೆಂಡಾಮಂಡಲ‌ ಆದ ಹೈಕೋರ್ಟ್ ಸಿಜೆ ಬೀಟ್ ಪೊಲೀಸರು ಏನ್ ಮಾಡುತ್ತಿದ್ದಾರೆ ಪೊಲೀಸ್ ಇಲಾಖೆ ಯಾಕೆ ಇಷ್ಟೊಂದು ನಿರ್ಲಕ್ಷ್ಯ ಮಾಡುತ್ತಿದೆ. ಇನ್ನು ಮೇಲೆ ಬೀಟ್ ಪೊಲೀಸರು ಕಸ ಹಾಕುವರ ಮೇಲೆ ಕಣ್ಣಿಟ್ಟು, ಯಾರೆ ಕಸ ಹಾಕಿದ್ದರು ಅವರ ಮೇಲೆ FIR ದಾಖಲು ಮಾಡಿ ಎಂದರು. ಇದೇ ವೇಳೆಯಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ 50 ಜನರಿಗೆ ದಂಡ ಹಾಕಿರುವುದಾಗಿ ಬಿಬಿಎಂಪಿ ಅಧಿಕಾರಿಗಳು ಹೈಕೋರ್ಟ್ ಸಿಜೆಗೆ ಹೇಳಿದ್ದರು.

ಒಟ್ಟಿನಲ್ಲಿ ಎರಡು ಗಂಟಗಳ‌ ಕಾಲ ನಡೆದ ವಿಚಾರಣೆ ಬಳಿಕ ಅರ್ಜಿ ವಿಚಾರಣೆಯನ್ನು ನವೆಂಬರ್ 15 ಕ್ಕೆ ಮುಂದೂಡಿದ್ದು. ಅವತ್ತು ಮತ್ತೆ ಇದೇ ರೀತಿ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಿ ಎಂದು ಬಿಬಿಎಂಪಿಗೆ ಹೈಕೋರ್ಟ್ ಖಡಕ್ ವಾರ್ನಿಂಗ್ ಕೊಟ್ಟಿದ್ದು ಸ್ಮಾರ್ಟ್ ಸಿಟಿ ಮಾಡಲು ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಯಾವ ರೀತಿ ಕೆಲಸ ಮಾಡುತ್ತದೆ ಎನ್ನುವುದನ್ನು ನೋಡಬೇಕಾಗಿದೆ.

Comments are closed.