
ಬೆಂಗಳೂರು: ಕೆಲವಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಶನಿವಾರವೂ ಮುಂದುವರಿದಿದೆ. ಬೆಂಗಳೂರು ಹಾಗೂ ಸುತ್ತಮುತ್ತಲೂ ಭಾರೀ ಮಳೆಯಾಗಿದೆ. ನಗರದ ಮಲ್ಲೇಶ್ವರಂ, ಮೆಜೆಸ್ಟಿಕ್, ಕಾರ್ಪೊರೇಷನ್, ಲಾಲ್ಬಾಗ್, ಶಾಂತಿನಗರ, ಎಂ.ಜಿ. ರಸ್ತೆ ಮೊದಲಾದ ಪ್ರದೇಶದಲ್ಲಿ ಭರ್ಜರಿ ಮಳೆಯಾಗಿದೆ.
ಬೆಂಗಳೂರು ಹೊರವಲಯದ ನೆಲಮಂಗಲ ಸುತ್ತಮುತ್ತಲೂ ವರ್ಷಧಾರೆಯಾಗಿದೆ. ನೆಲಮಂಗಲ, ದಾಸರಹಳ್ಳಿ, ಮಾದನಾಯಕನಹಳ್ಳಿ, ನವಯುಗ ಟೋಲ್ ಇತ್ಯಾದಿ ಸ್ಥಳಗಳಲ್ಲಿ ಮಳೆ ಭೋರ್ಗರೆಯಿತು. ಇದರಿಂದಾಗಿ ಬೆಂಗಳೂರು ನಗರದೊಳಗೆ ವಿಪರೀತ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಸಂಜೆಯ ನಂತರ 2-3 ಗಂಟೆ ನಿರಂತರವಾಗಿ ಧಾರಾಕಾರ ಮಳೆಯಾಗಿದೆ.
Comments are closed.