ಮನೋರಂಜನೆ

ಹುಡುಗನೊಬ್ಬನ ಪ್ರೀತಿಯ ಬಲೆಗೆ ಬಿದ್ದು ಮೋಸ ಹೋದ ವಿಚಾರ ಬಹಿರಂಗಪಡಿಸಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

Pinterest LinkedIn Tumblr


ಮುಂಬೈ: ಉದ್ಯಮಿ ರಾಜ್​ ಕುಂದ್ರಾ ಅವರನ್ನು ಮದುವೆಯಾಗಿ ಹ್ಯಾಪಿಯಾಗಿರುವ ಬಾಲಿವುಡ್​ ನಟಿ ಹಾಗೂ ಕನ್ನಡತಿ ಶಿಲ್ಪಾ ಶೆಟ್ಟಿ ಅವರು ಒಂದು ಕಾಲದಲ್ಲಿ ಹುಡುಗನೊಬ್ಬನ ಪ್ರೀತಿಯ ಬಲೆಗೆ ಬಿದ್ದು ಮೋಸ ಹೋದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಕೇವಲ ಬೆಟ್ಟಿಂಗ್​ಗಾಗಿ ನನ್ನೊಂದಿಗೆ ಸಂಬಂಧ ಬೆಳೆಸಿದ್ದ ಎಂಬ ವಿಷಯವನ್ನು ಶಿಲ್ಪಾ ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನನ್ನ ಸ್ನೇಹಿತೆಯರು ನನ್ನೊಂದಿಗೆ ಸಂಬಂಧ ಬೆಳೆಸುವಂತೆ ಹುಡುಗನೊಬ್ಬನಿಗೆ ಬೆಟ್ಟಿಂಗ್​ ಮಾಡಿದ್ದರು. ಇದೊಂದು ಸಿನಿಮಾ ಶೈಲಿಯಲ್ಲಿತ್ತು. ನಂತರ ಅದು ನಿಜವಾದ ಪ್ರೀತಿಗೆ ತಿರುಗಿತ್ತು. ಆದರೆ, ಕೊನೆಯಲ್ಲಿ ಬೆಟ್ಟಿಂಗ್​ನಲ್ಲಿ ಗೆಲ್ಲುವ ಉದ್ದೇಶದಿಂದ ಸಂಬಂಧ ಬೆಳೆಸಿದೆ ಎಂದು ಹೇಳುವ ಮೂಲಕ ಹುಡುಗ ಪ್ರೀತಿಗೆ ಕೊನೆಯಾಡಿದ. ಈ ವೇಳೆ ನಾನು ಖಿನ್ನತೆಗೆ ಒಳಗಾದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಆ ಕ್ಷಣ ನಾನು ಹೃದಯಾಘಾತಕ್ಕೆ ಒಳಗಾದೆ ಎಂದು ಶಿಲ್ಪಾ ಹೇಳಿದ್ದಾರೆ.

ಆಗೋದೆಲ್ಲ ಒಳ್ಳೆಯದಕ್ಕೆ ಎಂಬಂತೆ ಕೊನೆಯಲ್ಲಿ ರಾಜ್​ ಕುಂದ್ರಾ ನನ್ನ ಬಾಳಿನಲ್ಲಿ ಬಂದರು. ಕುಂದ್ರಾ ಜತೆಗಿನ ಪ್ರೀತಿ ಆರಂಭವಾದ ಬಗ್ಗೆ ತಿಳಿಸಿದ ಶಿಲ್ಪಾ, ಕುಂದ್ರಾ ಅವರು ಲಂಡನ್​ನಿಂದ ಮುಂಬೈಗೆ ಪ್ರಯಾಣ ಬೆಳಸಿದಾಗಲೆಲ್ಲ ನನಗಾಗಿ ಕೆಲವು ವಸ್ತುಗಳನ್ನು ನೀಡುತ್ತಿದ್ದರು. ಮೊದಲ ದಿನ ಬಣ್ಣಬಣ್ಣದ ಬ್ಯಾಗ್​ ಒಂದನ್ನು ಕಳುಹಿಸಿದರು. ಅದರ ಮುಂದಿನ ದಿನ ಮತ್ತೊಂದು ಬ್ಯಾಗ್​ ಕಳುಹಿಸಿಕೊಡುತ್ತಿದ್ದರಂತೆ.

ಇದರಿಂದ ಮತ್ತೊಮ್ಮೆ ಪ್ರೀತಿಯಲ್ಲಿ ಸಿಲುಕಿ ವಿಚಲಿತರಾಗಲು ಶಿಲ್ಪಾ ಅವರಿಗೆ ಇಷ್ಟವಿರಲಿಲ್ಲ. ತಕ್ಷಣವೇ ಫೋನ್​ ತೆಗೆದುಕೊಂಡು ನಮ್ಮಿಬ್ಬರ ನಡುವೆ ಏನು ಸಂಭವಿಸಿಲ್ಲ. ನನಗೆ ಮುಂಬೈನಿಂದ ಲಂಡನ್​ಗೆ ಸ್ಥಳಾಂತರಗೊಳ್ಳುವ ಆಸಕ್ತಿಯಿಲ್ಲ ಎಂದು ಕುಂದ್ರಾಗೆ ಹೇಳಿದ್ದರಂತೆ. ಆದರೆ, ನಿಮಗೆ ಇಷ್ಟ ಬಂದ ಕಡೆ ನೆಲೆಸೋಣ ಎಂದು ಹೇಳಿ ಕುಂದ್ರಾ ಅವರು ಮುಂಬೈನ ವಿಳಾಸ ನೀಡಿ ಭೇಟಿಯಾಗುವಂತೆ ಕೇಳಿಕೊಂಡಿದ್ದರು. ಅಂದು ನಮ್ಮ ಮೊದಲು ಡೇಟಿಂಗ್​ ಪ್ರಾರಂಭವಾಯಿತು ಎಂದು ಹೇಳಿದ್ದಾರೆ.

Comments are closed.