
ಶಿಮ್ಲಾ: ಟೆಂಪೋ ಟ್ರಾಕ್ಸ್ ಕಂದಕಕ್ಕೆ ಉರುಳಿ ಮೂವರು ದಂಪತಿ ಸೇರಿದಂತೆ 13 ಜನ ದುರ್ಮರಣವನ್ನಪ್ಪಿದ ಘಟನೆ ಹಿಮಾಚಲಪ್ರದೇಶದ ಸನೈಲ್‌ನಲ್ಲಿ ಶನಿವಾರ ನಡೆದಿದೆ.
ಕುದ್ದುವಿನಿಂದ 3 ಕಿ.ಮೀ ದೂರದಲ್ಲಿ ಈ ಅಪಘಾತ ನಡೆದಿದ್ದು HP 02 069 ನೋಂದಣಿ ಸಂಖ್ಯೆಯ ವಾಹನ ತಿಯುನಿಯಿಂದ ಸ್ವಾರಾ ಕಡೆಗೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ.
ವಾಹನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ, ಎಂದು ಶಿಮ್ಲಾ ಎಸ್ಪಿ ಓಂಪತಿ ಜಮ್ವಾಲ್ ಸ್ಪಷ್ಟಪಡಿಸಿದ್ದಾರೆ.
ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಗಂಭೀರವಾಗಿ ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಕಾರಿಯಾಗದೆ ರೊಹ್ರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತರನ್ನು ಮತ್ವರ್ ಸಿಂಗ್ (48) ಅವರ ಪತ್ನಿ ಬಸಂತಿ ದೇವಿ (44), ಪುತ್ರ ಮುನೀಶ್ (24), ಪ್ರೇಮ್ ಸಿಂಗ್ (38) ಅವರ ಪತ್ನಿ ಪೂನಮ್(30), ಮಗು ರಿಧಿಮಾ (6), ಅತ್ತರ್ ಸಿಂಗ್ (44) ಪತ್ನಿ ಮುನ್ನಾ ದೇವಿ , ಬಿಟ್ಟು (42), ಬಂದಿ ದೇವಿ (48) ನೆರ್ ಸಿಂಗ್ (35), ಮನೋಜ್ 9350 ಮತ್ತು ಅನಿಲ್ (28) ಎಂದು ಗುರುತಿಸಲಾಗಿದೆ.
Comments are closed.