ರಾಷ್ಟ್ರೀಯ

ಬಿಜೆಪಿ ತೆಕ್ಕೆಗೆ ಬಿಎಸ್ ಪಿ ನಾಯಕಿ ಮಾಯಾವತಿ?

Pinterest LinkedIn Tumblr


ರಾಯ್‌ಪುರ: ಮಹತ್ವದ ವಿದ್ಯಮಾನವೊಂದರಲ್ಲಿ ಕಾಂಗ್ರೆಸ್‌ಗೆ ಕೈ ಕೊಟ್ಟಿರುವ ಮಾಯಾವತಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಚತ್ತೀಸ್‌ಗಢ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸಿಡಿದೆದ್ದು ಜನತಾ ಕಾಂಗ್ರೆಸ್‌ (ಛತ್ತೀಸ್‌ಗಢ) ಎಂಬ ಪಕ್ಷ ಸ್ಥಾಪನೆ ಮಾಡಿಕೊಂಡಿರುವ ಅಜಿತ್‌ ಜೋಗಿ ಅವರೊಂದಿಗೆ ಮೈತ್ರಿ ಘೋಷಿಸಿದ್ದಾರೆ.

ಈ ನಿಟ್ಟಿನಲ್ಲಿ ಮಾಯಾವತಿ ವಿರುದ್ಧ ಚತ್ತೀಸ್‌ಗಢ ಕಾಂಗ್ರೆಸ್ ಮುಖಂಡರು ಅಸಮಾಧಾನಗೊಂಡು ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಪೂರ್ವವಾಗಿ ಮಾಡಿಕೊಂಡ ಈ ಮೈತ್ರಿ ಮೂಲಕ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಬಿಎಸ್ ಪಿ ಜೋಗಿ ಅವರೊಂದಿಗೆ ಕೈ ಜೋಡಿಸಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ. ಮಹಾಮೈತ್ರಿಕೂಟದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ಗೆ ದೊಡ್ಡ ಆಘಾತವಾಗಿದೆ.

ಈ ಮುನ್ನ ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಳ್ಳುವ ಇರಾದೆಯನ್ನು ಕಾಂಗ್ರೆಸ್‌ ವ್ಯಕ್ತಪಡಿಸಿತ್ತು. ಛತ್ತೀಸ್‌ಗಢದಲ್ಲಿ ಶೇ.12 ದಲಿತ ಮತಗಳಿದ್ದು, ಇವುಗಳ ಮೇಲೆ ಕಾಂಗ್ರೆಸ್‌ ಕಣ್ಣಿಟ್ಟಿತ್ತು.

ಈಗ ಮಾಯಾ ನಡೆಯಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ‘ಬಿಜೆಪಿ ಅಣತಿಯ ಮೇರೆಗೆ ಈ ಮೈತ್ರಿ ನಡೆದಿದೆ’ ಎಂದು ಕಿಡಿಕಾರಿದೆ.

Comments are closed.