ಕರಾವಳಿ

ಸೆ. 15: ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ -ಬಿ.ಎಂ. ರೋಹಿಣಿ‌ ಸಮ್ಮೇಳನಾಧ್ಯಕ್ಷೆ

Pinterest LinkedIn Tumblr

ಮಂಗಳೂರು : ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಸೆ. 15, ಶನಿವಾರದಂದು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಜರಗಲಿದೆ. ಹಿರಿಯ ಸಾಹಿತಿ, ಲೇಖಕಿ ಹಾಗೂ ಸಂಘಟಕಿ ಶ್ರೀಮತಿ ಬಿ.ಎಂ. ರೋಹಿಣಿ‌ ಅವರು ಸಮ್ಮೇಳನಾಧ್ಯಕ್ಷೆಯಾಗಿ ಮಾರ್ಗದರ್ಶನ ನೀಡಲಿರುವರು.

ಸಮ್ಮೇಳನದಂದು ಮುಂಜಾನೆ 8.30ಕ್ಕೆ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢ ಶಾಲೆ ವಠಾರದಿಂದ ಕನ್ನಡ ಭುವನೇಶ್ವರಿ ದಿಬ್ಬಣ ಹೊರಡಲಿರುವುದು ಮೆರವಣಿಗೆಯನ್ನು ಬೆಳ್ಮಣ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯ ಕೃಷ್ಣಪ್ಪ ಪೂಜಾರಿ ಉದ್ಘಾಟಿಸಲಿದ್ದು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪಿ.ಎಚ್. ಇಸ್ಮಾಯಿಲ್ ಪುಷ್ಪಾರ್ಚನೆಗೈಯ್ಯುವರು. ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ರಾಷ್ಟ್ರಧ್ವಜಾರೋಹನಗೈಯಲಿದ್ದು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ‌ಎಸ್. ಪ್ರದೀಪ ಕುಮಾರ ಕಲ್ಕೂರ ಪರಿಷತ್ತಿನ ಧ್ವಜಾರೋಹಣ ಮಾಡುವರು.

ಶಾಲಾ ವಿದ್ಯಾಥಿಗಳಿಂದ ನಾಡಗೀತೆ- ರೈತಗೀತೆ ಬಳಿಕ ಎಸ್. ವಿ. ಪಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು, ವಿ.ವಿ, ಮಂಗಳ ಗಂಗೋತ್ರಿಯ ಪ್ರಾಧ್ಯಾಪಕ ಪ್ರೊ. ಬಿ. ಶಿವರಾಮ ಶೆಟ್ಟಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಪ್ರದೀಪ ಕುಮಾರ ಕಲ್ಕೂರರವರಿಂದ ಆಶಯ ಭಾಷಣ, ಬಳಿಕ ಬಿ.ಎಂ. ರೋಹಿಣಿ ಅವರಿಂದ ಸಮ್ಮೇಳನಾಧ್ಯಕ್ಷರ ನುಡಿ. ರತ್ನ ಎಜುಕೇಶನ್ ಟ್ರಸ್ಟ್‌ನ ಕೋಶಾಧಿಕಾರಿ ರತ್ನಾವತಿ ಕೆ.ಶೆಟ್ಟಿ ಪುಸ್ತಕ ಪ್ರದರ್ಶನ ಉದ್ಘಾಟಿಸುವರು. ರವೀಂದ್ರ ಶೆಟ್ಟಿ ಉಳಿದೊಟ್ಟು ಪುಸ್ತಕ ಬಿಡುಗಡೆಗೊಳಿಸುವರು. ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.

ಕೊಣಾಜೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ರಶೀದಾಬಾನು, ಸೋಮೇಶ್ವರ ಕ್ಷೇತ್ರ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಧನಲಕ್ಷ್ಮೀಗಟ್ಟಿ, ರತ್ನ‌ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀಮತಿ ಸೌಮ್ಯ ಆರ್. ಶೆಟ್ಟಿ ಉಪಸ್ಥಿತರಿರುತ್ತಾರೆ.

ಬೆಳಿಗ್ಗೆ 11ರಿಂದ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. 10.45ರಿಂದ ಸಾಹಿತ್ಯ-ಅಭಿರುಚಿ ಕುರಿತು ಚಿಂತನೆ ನಡೆಯಲಿರುವುದು. ‘ಕವಿತೆಯ’ ಬಗ್ಗೆ ಅಕ್ಷಯ ಆರ್. ಶೆಟ್ಟಿ ‘ಕಥೆಕಾದಂಬರಿ’ ಕುರಿತು ಹಂಝ ಮಲಾರ್, ‘ವಿದ್ಯುನ್ಮಾನ ಮಾಧ್ಯಮ’ ದ ಬಗ್ಗೆ ಡಾ. ವಿಶ್ವನಾಥ ಬದಿಕಾನ ಚಿಂತನೆ ನಡೆಸಲಿರುವರು.

ಮಧಾಹ್ನ 1.15ಕ್ಕೆ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಹರೇಕಳ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ, ವಿದ್ಯಾರ್ಥಿ ಕವಿಗೋಷ್ಠಿ ನಡೆಯಲಿದೆ. ಗೋಷ್ಠಿಯ ಅಧ್ಯಕ್ಷತೆಯನ್ನು ಗಾಯತ್ರಿ ಎಸ್. ಉಡುಪ ಕಿನ್ನಿಗೋಳಿ ವಹಿಸಲಿದ್ದಾರೆ.

ಮಧ್ಯಾಹ್ನ 3ಗಂಟೆಗೆ ಸನ್ಮಾನ-ಸಮಾರೋಪ :

ಎಸ್. ಪ್ರದೀಪ ಕುಮಾರ ಕಲ್ಕೂರರ ಅಧ್ಯಕ್ಷ್ಷತೆಯಲ್ಲಿ ಜರಗಲಿರುವ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ವಸತಿ ಮತ್ತು ಗ್ರಾಮಾಭಿವೃದ್ಧಿ ಸಚಿವ ಯು.ಟಿ. ಖಾದರ್ ಸನ್ಮಾನಿಸುವರು.

ನಿವೃತ್ತ ಪ್ರಾಂಶುಪಾಲ. ವಿಮರ್ಶಕ ಡಾ| ಸತ್ಯನಾರಾಯಣ ಮಲ್ಲಿಪಟ್ಟಣ ಸಮಾರೋಪ ಭಾಷಣ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಜಯರಾಮ ಶೆಟ್ಟಿ, ಅಜಿಲಾಡಿ ಬೀಡು ಭಾಸ್ಕರ್ ಶೆಟ್ಟಿ, ವಿದ್ಯಾರತ್ನ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಹೀಮ್ ಹಮೀದ್ ಪಾಲ್ಗೊಳ್ಳುವರು.

ಸನ್ಮಾನಿಸಲ್ಪಡುವವರು:

ಕೃಷ್ಣ ಶೆಟ್ಟಿ ಕುಡುಮಲ್ಲಿಗೆ (ಸಾಹಿತ್ಯ), ನಾರಾಯಣ ಕೆ.ಸಿ. ( ದೇಶಸೇವೆ), ಜೂಲಿಯಟ್ ಬಿ. ಪಿಂಟೋ (ಭಾರತ ಸೇವಾದಳ), ಮಾಧವ ಉಳ್ಳಾಲ (ಪರಿಸರ), ಡಾ. ಸಿ ಲೆನಿಟಾ ಡಿ’ಸೋಜ (ವೈದ್ಯಕೀಯ), ಕೆ. ಹುಸೈನ್‌ಕುಂಞಮೋನು (ಸಮಾಜ ಸೇವೆ) ಬಿ.ಬಾಳಪ್ಪ ಪೂಜಾರಿ (ಯೋಗಾಸನ).

ರತ್ನ‌ಎಜುಕೇಶನ ಟ್ರಸ್ಟ್‌ನ ಅಧ್ಯಕ್ಷರವೀಂದ್ರ ಶೆಟ್ಟಿ ಉಳಿದೊಟ್ಟು ಗೌರವಾಧ್ಯಕ್ಷರಾಗಿದ್ದುಕೊಂಡು ವಿವಿಧ ಸಮಿತಿಗಳ ಸದಸ್ಯರೆಲ್ಲರೂ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳ ಸಹಿತ ಸದ್ಯಸರು ಸಮ್ಮೇಳನದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ ಎಂದು ಮಂಗಳೂರು ತಾಲೂಕು ಘಟಕ ಕನ್ನಡ ಸಾಹಿತ್ಯ ಪರಿಷತ್ತ್‌ನ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Comments are closed.