ಕರ್ನಾಟಕ

ಬೆಳಗಾವಿಯಲ್ಲಿ ಬಂದ್ ಇಫೆಕ್ಟ್; ರೈಲಿನಲ್ಲಿ ಹೆರಿಗೆ, ತಾಯಿ ಮಗು ಆರೋಗ್ಯ!

Pinterest LinkedIn Tumblr

ಬೆಳಗಾವಿ: ಇಂಧನ ಬೆಲೆ ಏರಿಕೆ ಖಂಡಿಸಿ ಇಂದು ದೇಶಾದ್ಯಂತ ಕರೆ ನೀಡಿರುವ ಬಂದ್ ಕಾರಣ ವಾಹನ ಸೌಲಭ್ಯವಿಲ್ಲದೇ ಗರ್ಭಿಣಿಯೊಬ್ಬರು ರೈಲಿನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕೊಲ್ಲಾಪುರ – ಹೈದರಾಬಾದ್ ಎಕ್ಸ್‍ಪ್ರೆಸ್ ರೈಲಿನ ಪ್ರಯಾಣದ ವೇಳೆ ಜಿಲ್ಲೆಯ ರಾಯಭಾಗ ರೇಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ.

ಯಲ್ಲಮ್ಮ ಪತ್ರೋಟ ಎಂಬವರು ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ಬಳಿಕ ತಾಯಿ ಹಾಗೂ ಮಗುವನ್ನು 108 ವಾಹನದ ಮೂಲಕ ರಾಯಭಾಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ

ಭಾರತ್ ಬಂದ್ ನಿಂದಾಗಿ ವಾಹನ ಸೌಲಭ್ಯವಿಲ್ಲದ ಕಾರಣ ಗರ್ಭಿಣಿ ಯಲ್ಲಮ್ಮರನ್ನ ರೈಲಿನ ಮೂಲಕ ಮಹಾರಾಷ್ಟ್ರದ ಮಿರಜನಿಂದ ಆಸ್ಪತ್ರೆಗೆ ದಾಖಲಿಸಲು ಕರೆತರಲಾಗುತ್ತಿತ್ತು. ಈ ವೇಳೆ ಅವರಿಗೆ ಕುಡಚಿ ರೈಲ್ವೆ ನಿಲ್ದಾಣದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ವಿಷಯದ ತಿಳಿದ ರೈಲ್ವೇ ಸಿಬ್ಬಂದಿ ತಕ್ಷಣ 108 ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆ ವೇಳೆಗೆ ಸ್ಥಳಕ್ಕೆ ಬಂದ 108ರ ಸಿಬ್ಬಂದಿ ಮಹಿಳೆಯ ಸ್ಥಿತಿ ಕಂಡು ರೈಲಿನಲ್ಲೇ ಹೆರಿಗೆ ಮಾಡಿಸಿದ್ದಾರೆ. ಅರ್ಧ ಗಂಟೆಗಳಕಾಲ ರೈಲು ನಿಲ್ಲಿಸಲಾಗಿತ್ತು. ಮಾನವೀಯತೆ ಮೆರೆದ ರೈಲ್ವೇ ಸಿಬ್ಬಂದಿ ಹಾಗೂ 108 ಸೇವೆಯ ಸಿಬ್ಬಂದಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments are closed.