ಕರಾವಳಿ

ದೇಹಕ್ಕೆ ಹೆಚ್ಚು ತಂಪು ನೀಡುವುದರ ಜೊತೆಗೆ ಹಲವು ಸಮಸ್ಯೆಗೆ ರಾಮಬಾಣ ಈ ಬೀಜ

Pinterest LinkedIn Tumblr

ಕಾಮಕಸ್ತೂರಿ, ಈ ಹೆಸರನ್ನ ಹೆಚ್ಚಿನವರು ಕೇಳದಿದ್ದರೂ ಈ ಗಿಡವನ್ನ ನೋಡಿರುತ್ತಾರೆ, ಆದರೆ ಇದು ಕಾಮಕಸ್ತೂರಿ ಎಂದು ತಿಳಿದಿರುವುದಿಲ್ಲ. ಇದನ್ನ ಹೆಚ್ಚಾಗಿ ಮನೆಯ ಮುಂದೆ ಅಲಂಕಾರಕ್ಕಾಗಿ ಬೆಳೆಸಿರುತ್ತಾರೆ, ಇನ್ನು ಹೆಚ್ಚಿನದಾಗಿ ಹೇಳಬೇಕೆಂದರೆ ಇದನ್ನ ಹೂವಿನ ಮಾಲೆಯನ್ನ ಕಟ್ಟುವಾಗ ಹೂವುಗಳ ಮದ್ಯದಲ್ಲಿ ಬಳಸುತ್ತಾರೆ. ಇದು ಹೆಚ್ಚು ಸುವಾಸನೆಯನ್ನ ಹೊಂದಿರುತ್ತದೆ.

ಇನ್ನು ಕಾಮಕಸ್ತೂರಿಯು ಹೆಚ್ಚಾಗಿ ತುಳಸಿ ಗಿಡವನ್ನ ಹೋಲುತ್ತದೆ. ಇದರ ಎಲೆಗಳು ತುಳಸಿಯ ಎಲೆಗಳಂತೆಯೇ ಇರುತ್ತವೆ, ಸ್ವಲ್ಪ ಅಗಲವಾದ ಎಲೆಗಳನ್ನ ಹೊಂದಿರಿಯುತ್ತದೆ. ಕಾಮಕಸ್ತೂರಿಯು ಹಸಿರಾದ ಎಲೆಗಳನ್ನ ಹೊಂದಿದ್ದು, ಬಿಳಿ ಮತ್ತು ಗುಲಾಬಿ ಬಣ್ಣದ ಹೂವುಗಳನ್ನ ಹೊಂದಿರುತ್ತದೆ. ಕಾಮ ಕಸ್ತೂರಿಯ ಬೀಜಗಳು ಗ್ರಂಧಿಗೆ ಅಂಗಡಿಗಳಲ್ಲಿ ಸಿಗುತ್ತವೆ.

* ಒಂದು ಚಮಚ ಕಾಮಕಸ್ತೂರಿ ಬೀಜಗಳಲನ್ನ ಒಂದು ಲೋಟ ನೀರಿನಲ್ಲಿ ರಾತ್ರಿ ನೆನೆಹಾಕಿ, ಬೆಳಗ್ಗೆ ಕಾಮಕಸ್ತೂರಿ ಬೀಜಗಳು ಚನ್ನಾಗಿ ನೆನೆದು ಅಂಟಂಟಾಗಿ ಲೋಳೆಯಂತಾಗಿರುತ್ತವೆ. ಇದಕ್ಕೆ ಪುಡಿ ಮಾಡಿದ ಕಲ್ಲು ಸಕ್ಕರೆಯನ್ನ ಹಾಕಿ ಕುಡಿದರೆ ಮಲಬದ್ಧತೆ ಹಾಗು ಮೂಲವ್ಯಾದಿ ಸಮಸ್ಯೆ ದೂರವಾಗುತ್ತದೆ. ಇದು ದೇಹಕ್ಕೆ ತಂಪು ನೀಡುವುದರಿಂದ ದೇಹದ ಉಷ್ಣಾಂಶವು ಕೊಂಚ ಹತೋಟಿಯಲ್ಲಿರುತ್ತದೆ.
* ಕಾಮಕಸ್ತೂರಿಯು ದೇಹಕ್ಕೆ ಹೆಚ್ಚು ತಂಪು ನೀಡುವುದರಿಂದ ಇದು ರಕ್ತ ಬೀದಿಗೆ ಬಹಳ ಉಪಯೋಗಕಾರಿ.
* ಕಾಮಕಸ್ತೂರಿ ಗಿಡದ ಹಸಿ ಎಲೆಗಳನ್ನ ಜಜ್ಜಿ ಅದರ ರಸವನ್ನ ಚನ್ನಾಗಿ ಶೋಧಿಸಿ ಅದಕ್ಕೆ ಜೇನು ತುಪ್ಪ ಬೆರೆಸಿ ಒಂದು ಚಮಚದಷ್ಟು ಸೇವಿಸಿದರೆ ಗಂಟಲು ಸಮಸ್ಯೆ ದೂರವಾಗುತ್ತದೆ.
* ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ನೀರನ್ನ ಹಾಕಿ ಚನ್ನಾಗಿ ಕುದಿಸಿ ಅದಕ್ಕೆ ಕಾಮಕಸ್ತೂರಿ ಗಿಡದ ನಾಲ್ಕೈದು ಎಲೆಗಳನ್ನ ಹಾಕಿ ಚನ್ನಾಗಿ ಕುದಿಸಿ, ನಂತರ ಅದನ್ನ ಒಂದು ಲೋಟಕ್ಕೆ ಶೋಧಿಸಿ ಅದಕ್ಕೆ ಒಂದು ಚಮಚಾಚ್ ಜೇನು ತುಪ್ಪವನ್ನ ಬೆರೆಸಿ ಸೇವಿಸಿದರೆ ಶೀತ, ಜ್ವರ, ಕಡಿಮೆಯಾಗುತ್ತದೆ.
* ಕಾಮಕಸ್ತೂರಿ ಗಿಡದ ಹೂವುಗಳನ್ನ ಚನ್ನಾಗಿ ಕುದಿಸಿ ಅದಕ್ಕೆ ಜೇನುತುಪ್ಪವನ್ನ ಸೇರಿಸಿ ಸೇವಿಸಿದರೆ ಅಜೀರ್ಣತೆ ಹಾಗು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನ ಗುಣಪಡಿಸುತ್ತದೆ.
* ಕಾಮ ಕಸ್ತೂರಿ ಬೀಜಗಳನ್ನ ನೀರಿನಲ್ಲಿ ನೆನೆಹಾಕಿ ಅದಕ್ಕೆ ಸ್ವಲ್ಪ ಸಕ್ಕರೆ ಹಾಗು ಬಣ್ಣವನ್ನ ಸೇರಿಸಿ, ಫ್ರಿಜ್ ನಲ್ಲಿಟ್ಟರೆ ಆಗಾಗ ಸೇವಿಸಬಹುದು, ಇದು ದೇಹಕ್ಕೆ ತಂಪುನೀಡುತ್ತದೆ ಹಾಗು ಬಾಯಾರಿಕೆಯನ್ನ ನಿವಾರಿಸುತ್ತದೆ. ಬೇಸಿಗೆ ಕಾಲದಲ್ಲಿ ಇದು ತುಂಬಾ ಉಪಯುಕ್ತಕಾರಿ.

Comments are closed.