ರಾಷ್ಟ್ರೀಯ

ಮತ್ತೆ ದಾಖಲೆಯ ಕುಸಿತ ಕಂಡ ರೂಪಾಯಿ ಮೌಲ್ಯ; ಡಾಲರ್ ಒಂದಕ್ಕೆ 70.82 ಕ್ಕೆ ಇಳಿಕೆ!

Pinterest LinkedIn Tumblr

ನವದೆಹಲಿ: ವಿದೇಶಿ ಬಂಡವಾಳದ ಹೊರಹರಿವಿನ ಹೆಚ್ಚಳದ ಹಿನ್ನೆಲೆಯಲ್ಲಿ ಭಾರತದ ರೂಪಾಯಿ ದರ ಮತ್ತೆ 23 ಪೈಸೆಯಷ್ಟು ಕುಸಿತ ದಾಖಲಿಸಿದ್ದು ಡಾಲರ್ ಎದುರು ರೂಪಾಯಿ ಮೌಲ್ಯ 70.82 ಕ್ಕೆ ಇಳಿದಿದೆ.

ಇಂಟರ್ ಬ್ಯಾಂಕ್ ಫಾರಿನ್ ಎಕ್ಸ್ ಚ್ಜ಼ೆಂಜ್ ಮಾರುಕಟ್ಟೆಯಲ್ಲಿ ಡಾಲರ್ ಎದುರು ಅಂತಿಮವಾಗಿ ಭಾರತೀಯ ರೂಪಾಯಿ ದಾಖಲೆಯ್ ಮಟ್ಟದ ಕುಸಿತದೊಡನೆ 70.82 ಕ್ಕೆ ತಲುಪಿದೆ.

ವಿದೇಶಿ ವಿನಿಮಯ ಡೀಲರ್ ಗಳು, ಆಮದುದಾರರ ಖರೀದಿ, ಕಚ್ಚಾ ತೈಲ ಬೆಲೆ, ಮತ್ತು ಬಂಡವಾಳದ ಹೊರಹರಿವು ಹೆಚ್ಚಳದಿಂದಾಗಿ ದೇಶೀಯ ಹಣದ ಮಾರುಕಟ್ಟೆಯಲ್ಲಿ ಏರಿಳತವಾಗಿದೆ. ಅಲ್ಲದೆ ವಿದೇಶೀ ಮಾರುಕಟ್ಟೆಯಲ್ಲಿ ವಿದೇಶೀ ಕರೆನ್ಸಿಗಳ ನಡುವೆ ಡಾಲರ್ ನ ಮೌಲ್ಯ ಬಲವರ್ಧನೆಯು ಸಹ ರೂಪಾಯಿಯ ಮೇಲೆ ಒತ್ತಡ ಹಾಕುತ್ತಿದೆ.

ಇದಕ್ಕೆ ಮುನ್ನ ಡಾಲರ್ ಎದುರು ರೂಪಾಯಿ ಮೌಲ್ಯ 49 ಪೈಸೆ ಕುಸಿತವಾಗಿ 70.59 ರೂ. ಆಗಿತ್ತು.

Comments are closed.