ಕುಂದಾಪುರ: ನಮ್ಮ ದೇಶ ಕೃಷಿ ಪ್ರಧಾನ ರಾಷ್ಟ್ರ. ಆದರೆ ಜನರು ಕೃಷಿಯಿಂದ ಮಿಮುಖರಾಗುತ್ತಿದ್ದು ಸರಕಾರಿ ಉದ್ಯೋಗ, ಕೆಲಸಕ್ಕಗಿ ಬೇರೆ ದೇಶಕ್ಕೆ ವಲಸೆ ಹೋಗುವ ಪರಿಪಾಠಕ್ಕೆ ಮೊರೆಹೋಗುತ್ತಿದ್ದು ವಿದೇಶದಲ್ಲಿ ಒಳ್ಳೆ ಕೆಲಸ, ಕೈ ತುಂಬಾ ಸಂಬಳ ಪಡೆಯುವ ಕುಂದಾಪುರ ತಾಲೂಕಿನ ಅನಿವಾಸಿ ಭಾರತೀಯರೊಬ್ಬರು ಅಲ್ಲಿನ ಉದ್ಯೋಗದ ಜೊತೆ ಸ್ವಂತ ಗ್ರಾಮದಲ್ಲಿ ವಿವಿಧ ಕೃಷಿ ಮಾಡಿ ಎಲ್ಲರಿಗೆ ಮಾದರಿಯಾಗಿದ್ದಾರೆ. ಈ ಕುರಿತ ಒಂದು ಸ್ಟೋರಿಯಿಲ್ಲಿದೆ ನೋಡಿ.

ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಜನ್ಸಾಲೆಯಲ್ಲಿರುವ ಆ ಕಟ್ಟಡ ಒಂದಾನೊಂದು ಕಾಲದಲ್ಲಿ ಪಾಳುಬಿದ್ದಿತ್ತು. ಅಕ್ಕಪಕ್ಕದ ಜಾಗ ಒಂದು ರೀತಿಯಾಗಿ ಹಡಿಲು ಬಿದ್ದಿತ್ತು. ಆದರೆ ಈಗ ಹಾಗಿಲ್ಲ. ಈ ಕಟ್ಟದಲ್ಲಿ ಇದೀಗಾ ಮೊಲಗಳ ಕಲರವ, ಬರಡು ಭೂಮಿಯಲ್ಲಿ ಸಮೃದ್ಧ ಅನಾನೆಸ್ ಕೃಷಿ ತುಂಬಿದೆ. ಅಷ್ಟೆ ಅಲ್ಲ ಕಾಳು ಮೆಣಸು ಬಳ್ಳಿಗಳು ಅತ್ಯಾಧುನಿಕ ಶೈಲಿಯಲ್ಲಿ ಹರಡಿದೆ. 1500ಕ್ಕೂ ವಿವಿಧ ಜಾತಿಯ ಮತ್ತು ವಿವಿಧ ಆಕೃತಿ ಮೊಲಗಳು, 55 ಲಕ್ಷಕ್ಕೂ ಮಿಕ್ಕ ಅನಾನೆಸ್, ಎರಡು ಎಕ್ರೆ ಪ್ರದೇಶದಲ್ಲಿ ತಲೆಯೆತ್ತಿದೆ ಕಾಳುಮೆಣಸು ಕೃಷಿ. ಇದೆಲ್ಲವೂ ಸಂಪೂರ್ಣ ಹೈಟೆಕ್ ಜೊತೆಗೆ ದೇಶೀಮಾದರಿ ಕೃಷಿ ಎನ್ನೋದು ವಿಶೇಷ.

(ಸತೀಶ್ಚಂದ್ರ ಶೆಟ್ಟಿ)
ಅಷ್ಟಕ್ಕೂ ಇದನ್ನೆಲ್ಲಾ ಮಾಡುತ್ತಿರೋರ ಬಗ್ಗೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ. ಇಂಜಿನಿಯರಿಂಗ್ ಓದಿ ದುಬೈನಲ್ಲಿ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಫ್ಯಾಕ್ಟರಿ ಇನ್ ಚಾರ್ಜ್ ಅಗಿರುವ ಸತೀಶ್ಚಂದ್ರ ಶೆಟ್ಟಿ ಮೂಲತಃ ಜನ್ಸಾಲೆಯವರು. ಪೂರ್ವಿಕರು ಬಿಟ್ಟುಹೋದ ಭೂಮಿ ಹಾಳಾಗಬಾರದೆಂದು ಒಂದಷ್ಟು ವಿಭಿನ್ನ, ಇನ್ನೊಂದಷ್ಟು ಹೊಸತನದ ಕೃಷಿ ಆರಂಭಿಸಿದ ಅನಿವಾಸಿ ಭಾರತೀಯ ಈತ. ವಿದೇಶದಲ್ಲೇ ಕೂತು ಜನ್ಸಾಲೆಯಲ್ಲಿ ನಡೆಯುತ್ತಿರುವ ಕೃಷಿ ಆಗು ಹೋಗು ಅರಿಯುವಷ್ಟು ಅಧುನಿಕ ಟೆಚ್ ಕೃಷಿಗೆ ಕೊಟ್ಟಿದ್ದಾರೆ. ಮೊಲದ ಫಾರಂ ಆಗಲಿ ಆನಾನೆಸ್ ಕೃಷಿ, ಪೆಪ್ಪರ್ ತೋಟದ ಹಿಂದೆ ಹಣದ ಉದ್ದೇಶದ ಬದಲು ಮತ್ತಷ್ಟು ಯುವಕರು ಕೃಷಿಯತ್ತ ಬರಬೇಕೆನ್ನೋದು ಇವರ ಉದ್ದೇಶ.
ಸತೀಶ್ಚಂದ್ರ ಶೆಟ್ಟಿ ಮೊದಲು ಕೋಳಿ ಫಾರಂ, ಆಡು ಸಾಕಣಿಕೆ, ಜೇನು, ಹಾಲಿನ ಡೈರಿ ಮಾಡುವ ಉದ್ದೇಶವಿಟ್ಟಿಕೊಂಡಿದ್ದರೂ, ಹೊಸತನದ ತುಡಿತ ಮೊಲ ಸಾಕಣಿಕೆ ಕೇಂದ್ರವಾಯಿತು. ಸುಮಾರು 55 ಲಕ್ಷ ರೂ. ವೆಚ್ಚದಲ್ಲಿ ಆತ್ಯಾಧುನಿಕ ಮೊಲ ಸಾಕಣಿಕೆ ಕೇಂದ್ರ ಇದಾಗಿದ್ದು, ಅವಳಿ ಜಿಲ್ಲೆಯಲ್ಲಿ ಇಷ್ಟು ದೊಡ್ಡ ಮೊಲ ಸಾಕಾಣಿಕೆ ಕೇಂದ್ರ ಇಲ್ಲ. ಮೊಲದ ಮಾಂಸ ಕೋಲೆಸ್ಟ್ರಾಲ್ ರಹಿತವಾಗಿದ್ದು, ಈ ಫಾರಮ್ನಿಂದ ಮೊಲ ಮಾಂಸಕ್ಕಾಗಿ ಹೆಚ್ಚು ಹೊಗದೆ ತಳಿಗಾಗಿ ಮತ್ತು ಲ್ಯಾಬ್ಗಳಿಗೆ ಪೂರೈಸಲಾಗುತ್ತದೆ. ಚಿಕ್ಕಮಗಳೂರು ರ್ಯಾಬಿಟ್ ಫಾರಮ್ ಮೊಲ ಸಪ್ಲೆ ಮಾಡುತ್ತದೆ. ಹತ್ತು ಮರಿಗಳಿರುವ ಒಂದು ಬಾಕ್ಸ್ ಮೊಲಕ್ಕೆ 20 ಸಾವಿರ ಬೆಲೆ ಇದೆ. ಲ್ಯಾಬ್ನಲ್ಲಿ ನ್ಯೂಜಿಲ್ಯಾಂಡ್ ವೈಟ್ ಎಂದು ಕರೆಸಿಕೊಳ್ಳುವ ಬಿಳಿಬಣ್ಣದ ಮೊಲಕ್ಕೆ ಹೆಚ್ಚು ಬೇಡಿಕೆ ಇದೆ. ಪಾರಮ್ನಲ್ಲಿರುವ ಮರಿಗಳಿಗೆ ಹದಿನೈದು ದಿನ ತಾಯಿ ಹಾಲು ಕೊಟ್ಟನಂತರ ಫುಡ್ ನೀಡಲಾಗುತ್ತದೆ. ಮೆಡಿಕಲ್ ಚೆಕ್ಅಪ್ ಕೂಡಾ ನಡೆಯುತ್ತದೆ. ನ್ಯೂಜಿಲ್ಯಾಂಡ್ ವೈಟ್, ನ್ಯೂಜಿಲ್ಯಾಂಡ್ ಜಾಯಿಂಟ್, ಸೋವಿಯತ್ ಚಿಂಚೋಲಾ, ಕ್ಯಾಲಿಪೋರ್ನಿಯಾ ವೈಟ್, ಡೆಚ್ ಹೀಗೆ ಥರಾಹೇವಾರಿ ಮೊಲಗಳಿವೆ. ಒಂದೊಂದು ಮೊಲಕ್ಕೂ ಒಂದುಒಂದು ಗೂಡು. ಬಾಯಿ ತಾಗಿದರೆ ಬರುವ ನೀರು, ಸಮಯಕ್ಕೆ ಸರಿಯಾಗಿ ದಿನಕ್ಕೆ ಮೂರು ಬಾರಿ ಆಹಾರ ನೀಡಲಾಗುತ್ತದೆ.
ಒಟ್ಟಿನಲ್ಲಿ ಕೈತುಂಬಾ ಸಂಬಳ ವಿದೇಶದಲ್ಲಿ ಕೆಲಸ ಸಿಕ್ಕರೆ ದೇಶವನ್ನೇ ಮರೆಯುವ ಕಾಲಘಟ್ಟದಲ್ಲಿ ಸ್ವದೇಶದಲ್ಲಿ ಕೃಷಿ ಮಾಡುವ ಮೂಲಕ ಅನಿವಾಸಿ ಭಾರತೀಯ ಇಟ್ಟ ಈ ಕ್ರಾಂತಿಕಾರಿ ಹೆಜ್ಜೆ ಎಲ್ಲಾ ಯುವಕರಿಗೆ ಮಾದರಿಯಾಗಬೇಕಿದೆ.
(ವರದಿ, ಚಿತ್ರ- ಯೋಗೀಶ್ ಕುಂಭಾಸಿ)
Comments are closed.