ಕರಾವಳಿ

ಬೋಟ್‌ನಿಂದ ಸಮುದ್ರಕ್ಕೆ ಬಿದ್ದರೂ 6 ಗಂಟೆಗಳ ಕಾಲ ಈಜಿ ಸಾವನ್ನೇ ಗೆದ್ದು ಬಂದ ನಾಗರಾಜ್

Pinterest LinkedIn Tumblr

ಮಂಗಳೂರು : ಮಂಗಳೂರಿನಿಂದ ಗುರುವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಬೋಟ್‌ನಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದು 6 ಗಂಟೆಗಳ ಕಾಲ ಪ್ರಾಣ ಕೈಯಲ್ಲಿ ಹಿಡಿದು ಕಡಲಿನಲ್ಲಿ ಈಜಿ ಬದುಕಿ ಬಂದ ಘಟನೆ ಗುರುವಾರ ರಾತ್ರಿ ನಡೆದಿದೆ.

ಮೀನುಗಾರಿಕೆಗೆ ಹೊಗಿದ್ದಾಗ ಸಂಜೆಯ ವೇಳೆ ಬೋಟ್​ನಲ್ಲಿದ್ದ ತಮಿಳುನಾಡಿನ ಕಾರ್ಮಿಕ ನಾಗರಾಜ್ ಬೋಟ್‌ನಿಂದ ಆಯತಪ್ಪಿ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿದ್ದು. ತಕ್ಷಣವೇ ಆತನ ರಕ್ಷಣೆಗೆ ಮುಂದಾಗಿದ್ದರೂ ಆತ ಸಿಕ್ಕಿರಲಿಲ್ಲ.

ಬೋಟ್‌ನಲ್ಲಿದ್ದವರು ಇತರ ಬೋಟ್‌ನವರಿಗೆ ವಿಚಾರ ತಿಳಿಸಿದ್ದು, ಸುಮಾರು 40 ಬೋಟ್​ಗಳಲ್ಲಿ ಸಮುದ್ರದಲ್ಲಿ ಹುಡುಕಾಡಿದರೂ ಆತನ ಪತ್ತೆಯಾಗಿರಲಿಲ್ಲ.

ಆದರೆ ಕೊನೆಗೆ ಈ ವಿಚಾರವನ್ನು ಎನ್‌ಎಮ್‌ಪಿಟಿಯಲ್ಲಿರುವ ಕೋಸ್ಟ್‌ ಗಾರ್ಡ್‌ ಸಿಬಂದಿಗೆ ತಿಳಿಸಿದಾಗ ಎನ್ ಎಂ ಪಿ ಟಿ ಯಿಂದ ಹೊರಟ ಕೋಸ್ಟ್ ಗಾರ್ಡ್ ನೌಕೆಯವರು ಆ ಸ್ಥಳದಲ್ಲಿ ಹುಡುಕಾಡಿ 6 ಗಂಟೆಗಳ ಬಳಿಕ ಸಮುದ್ರಕ್ಕೆ ಬಿದ್ದ ನಾಗರಾಜ್‌ನನ್ನು ಪತ್ತೆ ಹಚ್ಚಿ ರಕ್ಷಿಸಿ ರಾತ್ರಿ ನವಮಂಗಳೂರಿಗೆ ಕರೆತಂದಿದ್ದಾರೆ. ಸಮುದ್ರದಲ್ಲಿ ಸುಮಾರು 6 ಗಂಟೆಗಳ ಕಾಲ ಈಜಿ ನಾಗರಾಜ್ ಸಾವನ್ನೇ ಗೆದ್ದು ಬಂದಿದ್ದಾನೆ.

Comments are closed.