ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಜ್ಜಾಡಿ ಗ್ರಾಮಪಂಚಾಯತಿಯ ಅಧ್ಯಕ್ಷ ಗಾದಿಯು ಸದ್ಯ ಕಾಂಗ್ರೆಸ್ ತೆಕ್ಕೆ ಸೇರಿದ್ದು ನೂತನ ಅಧ್ಯಕ್ಷರಾಗಿ ತಮ್ಮಯ್ಯ ದೇವಾಡಿಗ ಆಯ್ಕೆಯಾಗಿದ್ದಾರೆ.

ಗುಜ್ಜಾಡಿ ಗ್ರಾಮಪಂಚಾಯತಿಯಲ್ಲಿ ೯ ಮಂದಿ ಬಿಜೆಪಿ ಹಾಗೂ ಏಳು ಮಂದಿ ಕಾಂಗ್ರೆಸ್ ಸಂಖ್ಯಾಬಲವಿತ್ತು. ಈ ಹಿಂದಿನ ಎರಡೂವರೆ ವರ್ಷ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹರೀಶ್ ಮೇಸ್ತ ಅಧ್ಯಕ್ಷರಾಗಿದ್ದು ಅವರು ಕಾರಣಾಂತರದಿಂದ ರಾಜಿನಾಮೆ ನೀಡಿದ ಹಿನ್ನೆಲೆ ಚುನಾವಣೆ ಏರ್ಪಟ್ಟು ನಿನ್ನೆ ಗುಪ್ತ ಮತದಾನ ಪ್ರಕ್ರಿಯೆಯೂ ನಡೆದಿತ್ತು, ಒಂಬತ್ತು ಮಂದಿ ಸದಸ್ಯರಿದ್ದ ಬಿಜೆಪಿಯು ಮತ್ತೆ ತಾನೇ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದ್ದು ಆದರೆ ದಿಡೀರ್ ರಾಜಕೀಯ ಬದಲಾವಣೆಯಲ್ಲಿ ಬಿಜೆಪಿಯ ಇಬ್ಬರು ಸದಸ್ಯರು ಕಾಂಗ್ರೆಸ್ ಗೆ ಮತ ಚಲಾಯಿಸಿದ ಕಾರಣ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ತಮ್ಮಯ್ಯ ದೇವಾಡಿಗ ನೂತನ ಸಾರಥಿಯಾಗಿದ್ದಾರೆ. ಮುಂದಿನ ದಿನದಲ್ಲಿ ಗುಜ್ಜಾಡಿಯನ್ನು ಮಾದರಿ ಗ್ರಾಮಪಂಚಾಯತ್ ಅನ್ನಾಗಿ ಮಾಡುವ ಇರಾದೆ ಇವರದ್ದು.
ಗುಜ್ಜಾಡಿಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಮುಖಂಡ ರಾಜು ದೇವಾಡಿಗ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಾಜು ಸೇರಿದಂತೆ ಸ್ಥಳಿಯ ಹಲವು ಮುಖಂಡರ ಶ್ರಮವಿತ್ತು.
Comments are closed.