ಆರೋಗ್ಯ

ಚ್ಯೂಯಿಂಗ್ ಗಮ್ ಮೆಲ್ಲುವುದರಿಂದ ದೇಹಕ್ಕೆ ಯಾವ ರೀತಿಯ ಪ್ರಯೋಜನ ಬಲ್ಲಿರಾ…?

Pinterest LinkedIn Tumblr

ಚ್ಯೂಯಿಂಗ್ ಗಮ್ ಇಷ್ಟಪಡದವರು ಬಹಳ ಕಡಿಮೆ ಎನ್ನಬಹುದು. ಇದನ್ನು ನಾವು ಸುಲಭವಾಗಿ ಪಾಕೆಟ್ ನಲ್ಲಿ ಇಡಬಹುದು, ಸಮಯ ಕೊಲ್ಲಲು ಮೆಲ್ಲುತ್ತಿರಬಹುದು ಅಲ್ಲದೆ ಅದು ನಮ್ಮ ಮೂಡ್ ನ್ನು ತಾಜಾವಾಗಿಡುತ್ತದೆ. ಆದರೆ ಇಂದು ಚ್ಯೂಯಿಂಗ್ ಗಮ್ ಬಗ್ಗೆ ನಿಮಗೆ ಗೊತ್ತಿರುವುದಕ್ಕಿಂತಲೂ ಹೆಚ್ಚಿನ ವಿಷಯಗಳನ್ನು ನಾವು ನಿಮಗೆ ತಿಳಿಸುತ್ತೇವೆ.

ನೀವು ಕೇಳಿರಬಹುದು ಇದನ್ನು ತಿನ್ನುವುದರಿಂದ ದೇಹ ತೂಕ ಕಡಿಮೆಯಾಗುತ್ತದೆ. ಆದರೆ ಯಾವುದೇ ಆಧಾರಗಳಿಲ್ಲದೆ ಇದನ್ನು ನಂಬುವುದು ಸರಿಯಲ್ಲ.ಹೌದು, ಚ್ಯೂಯಿಂಗ್ ಗಮ್ ನಮ್ಮ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ ಮತ್ತು ಒತ್ತಡ ಕಡಿಮೆ ಮಾಡುತ್ತದೆ. ಆದರೆ ಇದು ಮೈ ತೂಕ ಇಳಿಸುವಲ್ಲಿ ಎಷ್ಟು ಸಹಾಯಕಾರಿಯೇ?

ಹೌದು, ಆದರೆ ಷರತ್ತುಗಳು ಅನ್ವಯಿಸುತ್ತವೆ. ಯಾಕೆಂದರೆ ಯಾವುದೇ ಮಿತ, ಹಿತ ಆಹಾರ ಮತ್ತು ವ್ಯಾಯಾಮವಿಲ್ಲದೆ ಕೇವಲ ಚ್ಯೂಯಿಂಗ್ ಗಮ್ ಮೆಲ್ಲುವುದರಿಂದ ಕೊಬ್ಬು ಕರಗಿಸಬಹುದೆಂದು ನೀವು ಅಂದುಕೊಂಡರೆ ಅದು ತಪ್ಪು. ಆದರೆ ಇದು ಸ್ವಲ್ಪ ಮಟ್ಟಿಗೆ ಈ ದೆಸೆಯಲ್ಲಿ ಸಹಾಯ ಮಾಡುವುದಂತೂ ಸತ್ಯ.

ಹಸಿವು ಕುಂಠಿತಗೊಳಿಸುತ್ತದೆ:
ನೀವು ನಿರಂತರವಾಗಿ ಚ್ಯೂಯಿಂಗ್ ಗಮ್ ಮೆಲ್ಲುವುದರಿಂದ ನಿಮಗೆ ಬೇರೆ ಏನಾದರೂ ತಿನ್ನಬೇಕೆನಿಸುವುದಿಲ್ಲ. ಅಂದ್ರೆ ಇದು ನಿಮ್ಮ ಹಸಿವನ್ನು ನಿಯಂತ್ರಣದಲ್ಲಿಡುತ್ತದೆ. ಬಾಯಿ ಚಪಲಕ್ಕೆ ಕಡಿವಾಣ ಹಾಕುತ್ತದೆ. ನಿಮ್ಮ ದೇಹ ನಿಜವಾಗಲೂ ಆಹಾರ ಬಯಸಿದಾಗ ಮಾತ್ರ ತಿನ್ನುವಂತೆ ಮಾಡುತ್ತದೆ.

ಸಕ್ಕರೆಯನ್ನು ದೂರವಿಡುತ್ತದೆ:
ಚ್ಯೂಯಿಂಗ್ ಗಮ್ ನಿಮ್ಮ ದೇಹಕ್ಕೆ ಅಗತ್ಯವಾದ ಸಕ್ಕರೆಯನ್ನು ನಿರಂತರವಾಗಿ ಪೂರೈಕೆ ಮಾಡುತ್ತದೆ, ಅದೂ ತುಂಬಾ ಕಡಿಮೆ ಪ್ರಮಾಣದಲ್ಲಿ. ಇದರಿಂದ ನಿಮಗೆ ದೊಡ್ಡ ಚಾಕೋಲೇಟ್, ಐಸ್ ಕ್ರೀಮ್ ಅಥವಾ ಬೇರೆ ಸಿಹಿಯನ್ನು ತಿನ್ನಬೇಕೆನಿಸುವುದಿಲ್ಲ. ಅಂದ್ರೆ ನಿಮ್ಮ ದೇಹದೊಳಕ್ಕೆ ಸೇರುವ ಕ್ಯಾಲೋರಿ ಮಟ್ಟವನ್ನು ಇದು ನಿಯಂತ್ರಿಸುತ್ತದೆ.

ಅನಾರೋಗ್ಯಕರ ಸ್ನ್ಯಾಕ್ಸ್ ಗೆ ಬದಲಾಗಿ ಚ್ಯೂಯಿಂಗ್ ಗಮ್:
ಸಂಜೆ ಹೊತ್ತಲ್ಲಿ ಏನೇನೋ ಕುರುಕಲು ತಿಂಡಿ ತಿನ್ನಬೇಕೆನಿಸುತ್ತದೆ. ಅದೂ ಹುರಿದ ಉಪ್ಪು, ಖಾರ ಸೇರಿಸಿದ ತಿಂಡಿಗಳು ಆರೋಗ್ಯ ಕ್ಕೆ  ಹಾನಿ ಮಾಡಿ ಶರೀರದಲ್ಲಿ ಕೊಬ್ಬು ಶೇಖರಣೆಯಾಗುವಂತೆ ಮಾಡುತ್ತದೆ. ಈ ಸಂದರ್ಭದಲ್ಲಿ ಒಂದು ಚ್ಯೂಯಿಂಗ್ ಗಮ್ ಬಾಯಿಗೆ ಹಾಕಿಕೊಂಡು ಬಿಡಿ. ನಿಮ್ಮ ಬಾಯಿ ಚಪಲ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.

ಮಿತಿಮೀರಿದರೆ ಅಪಾಯ:
‘ಮಿತಿಮೀರಿದರೆ ಅಮೃತವೂ ವಿಷವಂತೆ’ ಇದು ಇಲ್ಲಿಯೂ ಅನ್ವಯವಾಗುತ್ತದೆ. ಇದು ನಿಮ್ಮ ಹಸಿವನ್ನು ನಿಯಂತ್ರಣದಲ್ಲಿಡುವು ದೇನೋ  ಸರಿ ಆದರೆ ಮಿತಿಮೀರಿ ಸೇವಿಸಿದರೆ ಅಪಾಯ ತಪ್ಪಿದ್ದಲ್ಲ. ಇದರಲ್ಲಿರುವ ಸೋರ್ಬಿಟೋಲ್ (sorbitol) (ಶುಗರ್ ಆಲ್ಕೋಹಾಲ್) ಭೇದಿ ಮತ್ತು ದೇಹದಲ್ಲಿ ನೋವನ್ನು ಉಂಟು ಮಾಡಬಹುದು.

Comments are closed.