
ಅನ್ನಾಪೋಲಿಸ್: 38 ರ ಹರೆಯದ ಟೆಕ್ಕಿಯೊಬ್ಬ ಅಮೆರಿಕದ ಮೇರಿಲ್ಯಾಂಡ್ ನಲ್ಲಿರುವ ಕ್ಯಾಪಿಟಲ್ ಗಜೆಟ್ ಪತ್ರಿಕಾ ಕಚೇರಿಯ ಗುರುವಾರ ಮೇಲೆ ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದು, ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
38 ರ ಹರೆಯದ ಸ್ಥಳೀಯ ನಿವಾಸಿ ಜೆರೋಡ್ ರಾಮೋಸ್ ಎಂಬಾತ ದಾಳಿ ನಡೆಸಿದ್ದು , ಪತ್ರಕರ್ತರನ್ನು ಗುರಿಯಾಗಿರಿಸಿಕೊಂಡು ಗುಂಡಿನ ಮಳೆ ಗೆರೆದಿದ್ದಾನೆ, ಮಾತ್ರವಲ್ಲದೆ ಹ್ಯಾಂಡ್ ಗ್ರೆನೇಡ್ ಕೂಡ ಸ್ಫೋಟಿಸಿ ಉಗ್ರ ರೂಪದಲ್ಲಿ ಸೇಡು ತೀರಿಸಿಕೊಂಡಿದ್ದಾನೆ.
ಈತನ ವಿರುದ್ಧ 2012 ರಲ್ಲಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರ ವಿಚಾರದಲ್ಲಿ ಪತ್ರಿಕೆಯ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಿ ಸಮರ ಸಾರಿದ್ದ, ಇದೀಗ ಸೇಡು ತೀರಿಸಿಕೊಳ್ಳಲು ಭೀಕರ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೆರಿಕಾದ ಇತಿಹಾಸದಲ್ಲೇ ಪತ್ರಿಕಾ ಕಚೇರಿಯನ್ನು ಗುರಿಯಾಗಿರಿಸಿಕೊಂಡು ನಡೆಸಿದ ಭೀಕರ ದಾಳಿ ಇದಾಗಿದೆ ಎಂದು ಹೇಳಲಾಗಿದೆ.
ಹತ್ಯೆಗೀಡಾದವರಲ್ಲಿ ಕ್ಯಾಪಿಟಲ್ ಗಜೆಟ್‌ನ ಸಹಸಂಪಾದಕ 58 ರ ಹರೆಯದ ರಾಬ್ ಹಿಯಾಸೇನ್ ಕೂಡ ಓರ್ವರಾಗಿದ್ದಾರೆ.
Comments are closed.