ರಾಷ್ಟ್ರೀಯ

ಸ್ವಿಸ್‌ ಬ್ಯಾಂಕ್‌ನಲ್ಲಿ ಹೆಚ್ಚುತ್ತಿರುವ ಭಾರತೀಯರ ಠೇವಣಿ!

Pinterest LinkedIn Tumblr


ಹೊಸದಿಲ್ಲಿ: ಕಪ್ಪುಹಣ ನಿಯಂತ್ರಣಕ್ಕೆ ಸರಕಾರದ ಹಲವು ಕ್ರಮಗಳ ಮಧ್ಯೆಯೂ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ ಮೊತ್ತ ಹೆಚ್ಚುತ್ತಲೇ ಇದೆ. 2017ರಲ್ಲಿ ಇದರ ಪ್ರಮಾಣ ಶೇ.50ರಷ್ಟು ಏರಿಕೆಯಾಗಿದ್ದು, 7 ಸಾವಿರ ಕೋಟಿ ರೂ.ಗೆ ತಲುಪಿದೆ. ಇನ್ನೊಂದೆಡೆ 2017ರಲ್ಲಿ ವಿಶ್ವದ ಇತರ ದೇಶಗಳಿಂದ ಸ್ವಿಜರ್ಲೆಂಡ್‌ ಬ್ಯಾಂಕ್‌ನಲ್ಲಿಟ್ಟ ಮೊತ್ತ ಶೇ.3ರಷ್ಟು ಏರಿಕೆಯಾಗಿ 100 ಲಕ್ಷ ಕೋಟಿ ರೂ. ಆಗಿದೆ ಎಂದು ಸ್ವಿಸ್‌ ನ್ಯಾಶನಲ್‌ ಬ್ಯಾಂಕ್‌ ವರದಿ ಹೇಳಿದೆ.

2016ರಲ್ಲಿ ಭಾರತೀಯರ ಠೇವಣಿ ಶೇ.45ರಷ್ಟು ಕುಸಿದು 4,500 ಕೋಟಿ ರೂ.ಗೆ ತಲುಪಿತ್ತು. 1987ರಲ್ಲೇ ಮೊದಲ ಬಾರಿಗೆ ಈ ಪ್ರಮಾಣದ ಕುಸಿತ ಕಂಡುಬಂದಿತ್ತು. ಕಳೆದ ಒಂದು ದಶಕದಲ್ಲಿ ಸ್ವಿಸ್‌ ಬ್ಯಾಂಕ್‌ನಲ್ಲಿ ಠೇವಣಿ ಮೊತ್ತದಲ್ಲಿ ಕುಸಿತವಾಗುತ್ತಲೇ ಇತ್ತು. 2006ರ ವೇಳೆಗೆ 23 ಸಾವಿರ ಕೋಟಿ ರೂ. ಭಾರತೀಯರ ಹಣವಿತ್ತು. ಅನಂತರದಲ್ಲಿ ಇಳಿಕೆ ಕಾಣುತ್ತಿದೆ. ಈ ದಶಕದಲ್ಲಿ ಕೇವಲ 3 ವರ್ಷಗಳಲ್ಲಿ ಮಾತ್ರವೇ ಠೇವಣಿ ಮೊತ್ತ ಏರಿಕೆಯಾಗಿತ್ತು. 2011, (ಶೇ. 12), 2013 (ಶೇ. 43) ಮತ್ತು ಈಗ 2017 (ಶೇ. 50.2) ರಲ್ಲಿ ಠೇವಣಿ ಮೊತ್ತ ಏರಿಕೆ ಕಂಡಿದೆ. ಈ ಹಿಂದೆ 2004ರಲ್ಲೂ ಶೇ. 56ರಷ್ಟು ಏರಿಕೆ ಕಂಡಿತ್ತು.

ಇದು ಕಪ್ಪು ಹಣವೇ?: ಗ್ರಾಹಕರ ಜಮೆ, ಇತರ ಬ್ಯಾಂಕ್‌ಗಳ ಮೂಲಕ ಜಮೆ ಮಾಡು ವಿಕೆ ಮತ್ತು ಇತರ ಬಾಧ್ಯತೆಗಳ ಅಡಿಯಲ್ಲಿ ಭಾರತೀಯರ ಹಣದ ಪ್ರಮಾಣ ಏರಿಕೆಯಾ ಗಿದೆ. ಆದರೆ ಇವೆಲ್ಲವನ್ನೂ ಕಪ್ಪು ಹಣ ಎಂದು ಪರಿಗಣಿಸಲಾಗದು. ಇದು ನಿಜವಾದ ವ್ಯಾಪಾರ, ರಫ್ತಿನಿಂದಲೂ ನಡೆದ ವಹಿವಾಟು ಆಗಿರಬಹುದು. ಇನ್ನೊಂದೆಡೆ ಭಾರತೀಯರು ಇತರ ದೇಶಗಳಿಂದ ಸಂಸ್ಥೆ ಹೆಸರಿನಲ್ಲಿ ಹೂಡಿಕೆ ಮಾಡಿದ ಮೊತ್ತವನ್ನೂ ಎಸ್‌ಎನ್‌ಬಿ ಬಿಡುಗಡೆ ಮಾಡಿದ ವರದಿ ವಿವರಿಸುವುದಿಲ್ಲ.

Comments are closed.