
ಬೆಂಗಳೂರು: ವಿವಾಹವಾಗಲು ಪ್ರಿಯತಮ ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರದಲ್ಲಿ ಬುಧವಾರ ನಡೆದಿದೆ.
ಸುಪ್ರಿಯಾ ಮೃತ ದುರ್ದೈವಿ. ಶರತ್ ಮತ್ತು ಸುಪ್ರಿಯಾ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಶರತ್ ಮಂಗಳವಾರ ದೂರವಾಣಿ ಕರೆ ಮಾಡಿ ವಿವಾಹವಾಗಲು ನಿರಾಕರಿಸಿದ್ದಾನೆ.
ಶರತ್ ತಾನು ಬೇರೆ ಯುವತಿ ಜತೆ ವಿವಾಹವಾಗುವುದಾಗಿ ತಿಳಿಸಿದ್ದರಿಂದ ಬೇಸತ್ತ ಸುಪ್ರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಿಡಕ್ಕೆ ಕ್ರಿಮಿನಾಶಕ ತರುತ್ತೇನೆಂದು ಹೋಗಿದ್ದಳು
ಸುಪ್ರಿಯಾ ನಿನ್ನೆ ಸಂಜೆ ಗುಲಾಬಿ ಗಿಡಕ್ಕೆ ಕ್ರಿಮಿನಾಶಕ ತರುತ್ತೇನೆಂದು ಹೋಗಿದ್ದಳು. ಬಳಿಕ ಕ್ರಿಮಿನಾಶಕ ತಂದು ಕೂಲ್ ಡ್ರಿಂಕ್ಸ್ ಜತೆ ಬೆರೆಸಿ ಕುಡಿದಿದ್ದಳು. ತಾಯಿಯೊಂದಿಗೆ ವಿಷಯ ಹೇಳಲಾಗದೆ ಮೊಬೈಲ್ನಲ್ಲಿ ಆಡಿಯೋ ರೆಕಾರ್ಡ್ ಮಾಡಿ ನಿನ್ನೆ ಸಂಜೆ ಟೆರೇಸ್ಗೆ ಹೋಗಿ ವಿಷ ಸೇವಿಸಿದ್ದಳು. ತಡರಾತ್ರಿಯವರೆಗೂ ಮಗಳು ಬದುಕಿ ಬರಲೆಂದು ಪಾಲಕರು ಕಣ್ಣೀರಿಟ್ಟಿದ್ದರು.
ಶರತ್ಗೆ ಥಳಿತ
ಸುಪ್ರಿಯಾ ಮೃತಪಟ್ಟ ಬಳಿಕ ಶರತ್ಗಾಗಿ ಪೊಲೀಸರ ಶೋಧಿಸುತ್ತಿದ್ದರು. ಕೊನೆಗೆ ಶರತ್ ಮನೆಗೆ ತೆರಳಿ ಆತನನ್ನು ಎಳೆದುಕೊಂಡು ಬಂದ ಸುಪ್ರಿಯಾ ಪಾಲಕರು ಹಾಗೂ ಸ್ಥಳೀಯರು ಸೇರಿ ಶರತ್ಗೆ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
Comments are closed.